ದೇವಸ್ಥಾನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ವಕ್ಫ್‌ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಯತ್ನಾಳ್‌ಗೆ ಜನರಿಂದ ತೀವ್ರ ವಿರೋಧ

Source: SOnews | By Staff Correspondent | Published on 11th November 2024, 11:53 PM | State News |

ಬಾಗಲಕೋಟೆ : ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ʼವಕ್ಫ್‌ ವಿಚಾರʼ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಯತ್ನಾಳ್‌ಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣ ನಡೆದಿದೆ.  

ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ವಿಷಯವನ್ನು ಮಾತನಾಡಿದ್ದಕ್ಕಾಗಿ ಜನರು "ಇದು ರಾಜಕೀಯ ಮಾಡುವ ಜಾಗವಲ್ಲ" ಎಂಬುದಾಗಿ ತಿರುಗೇಟು ನೀಡಿದರು. "ದೇವಾಲಯ ನಿರ್ಮಾಣಕ್ಕೆ ಎಲ್ಲ ಸಮುದಾಯದವರು, ಸೇರಿದಂತೆ ಮುಸ್ಲಿಮರು ಆರು ಲಕ್ಷ ರೂ. ದೇಣಿಗೆ ನೀಡಿದ್ದಾರೆ" ಎಂದು ನೆರೆದಿದ್ದ ಸಾರ್ವಜನಿಕರು ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡು, ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಗಲಿಬಿಲಿಗೊಂಡ ಬಿಜೆಪಿ ಶಾಸಕ ಯತ್ನಾಳ್ ವೇದಿಕೆಯಿಂದಲೇ ಕಾಲ್ಕಿತ್ತರು. 

 

 

Read These Next

ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಭ್ರಷ್ಟಾಚಾರ ಆರೋಪ ಪ್ರಧಾನಿ ಮೋದಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿಎಂ ಸವಾಲು

ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂದು ಸುಳ್ಳಾರೋಪ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದನ್ನು ...

ಶಿಗ್ಗಾಂವಿ ಉಪಚುನಾವಣೆ; ಇಂದು ಪ್ರಚಾರ ಕಾರ್ಯದ ಕೊನೆ ದಿನ; ಕ್ಷೇತ್ರದ ಗೆಲುವಿಗಾಗಿ ಹಾಲಿ-ಮಾಜಿ ಸಿಎಂಗಳ ಪ್ರಭಾವ

ಹಾವೇರಿಯ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಪ್ರಚಾರ ಚಟುವಟಿಕೆಗಳು ಇಂದು ಅಂತ್ಯಗೊಳ್ಳಲಿದ್ದು, ಕ್ಷೇತ್ರದಲ್ಲಿ ...

ವಕ್ಫ್ ಆಸ್ತಿ ತೆರವುಗೊಳಿಸಲು 216 ಪ್ರಕರಣಗಳಲ್ಲಿ 6 ನೋಟಿಸ್ ನೀಡಿದ್ದ ಬಿಜೆಪಿ; ಸಿದ್ದರಾಮಯ್ಯ ಪ್ರಶ್ನೆ: 'ಬೊಮ್ಮಾಯಿ ಯೂಟರ್ನ್ ಏಕೆ?

'ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು. ಇದೀಗ ರಾಜಕೀಯ ...

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಯನ ಪ್ರವಾಸ

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು, ಸಮಿತಿಯ ಅಧ್ಯಕ್ಷರಾದ ಪಿ.ಎಂ. ...