ಯುಜೀನ್ (ಅಮೆರಿಕ): ಹಾಲಿ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊತ್ತ ಮೊದಲ ಅಸ್ಪೀಟ್ ಎನಿಸಿಕೊಳ್ಳುವುದರೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದರು.
ಭಾರತೀಯ ಕಾಲಮಾನ ರವಿವಾರ ಬೆಳಗ್ಗೆ ನಡೆದ ಜಾವೆಲಿನ್ ಫ್ರೀ ಫೈನಲ್‌ನಲ್ಲಿ 88.13 ಮೀ.ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡಿದರು.
ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಲೆಜೆಂಡರಿ ಲಾಂಗ್‌ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಬಳಿಕ ಪದಕ ಜಯಿಸಿದ ಭಾರತದ ಎರಡನೇ ಫೀಲ್ಡ್ ಹಾಗೂ ಟ್ರ್ಯಾಕ್ ಅಪ್ಲೇಟ್ ಎಂಬ ಹಿರಿಮೆಗೆ ಪಾತ್ರರಾದರು. ಪ್ಯಾರಿಸ್ ನಲ್ಲಿ ನಡೆದ 2003ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಅವರು 6.70 ಮೀ.ದೂರಕ್ಕೆ ಜಿಗಿದು ಕಂಚಿನ ಪದಕ ಜಯಿಸಿದ ಭಾರತದ ಮೊದಲ ಅಪ್ಲೇಟ್ ಎನಿಸಿಕೊಂಡಿದ್ದರು. 24ರ ಹರೆಯದ ಚೋಪ್ರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಮೊದಲ ಪುರುಷ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅಸ್ಪೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
II ಮೊದಲ ಯತ್ನದಲ್ಲಿ ಫೌಲ್, ನಾಲ್ಕನೇ ಪ್ರಯತ್ನದಲ್ಲಿ ಒಲಿದ ಬೆಳ್ಳಿ: ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಅಫೀಟ್ ಆಗಿದ್ದ ಚೋಪ್ರಾ ತನ್ನ ಮೊದಲ ಯತ್ನದಲ್ಲಿ ಫಲ್ ಆದರು. ಎರಡನೇ ಯತ್ನದಲ್ಲಿ 82.39 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಮೂರನೇ ಪ್ರಯತ್ನದಲ್ಲಿ 86.37 ಮೀ.ದೂರಕ್ಕೆ ಜಾವೆಲಿನ್ ಎಸೆದು ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಂಡರು. ಆಗ 12 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದ ಸ್ಪರ್ಧೆಯಿಂದ ಹೊರಗಿದ್ದರು. ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ನ ಹಾಲಿ ಚಾಂಪಿಯನ್ ಆಗಿರುವ ಚೋಪ್ರಾ ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡು ನಾಲ್ಕನೇ ಪ್ರಯತ್ನದಲ್ಲಿ ಜಾವೆಲಿನ್ ಅನ್ನು 88.13 ಮೀ.ದೂರಕ್ಕೆ ಎಸೆದರು. ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್(90.54 ಮೀ.)ಬಳಿಕ ಎರಡನೇ ಸ್ಥಾನಕ್ಕೆ ಏರಿದರು. ಚೋಪ್ರಾ 5ನೇ ಹಾಗೂ 6ನೇ ಯತ್ನದಲ್ಲಿ ಫೇಲ್ ಆದರೂ 2ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪೀಟರ್ಸ್ ತನ್ನ ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಜಾವೆಲಿನ್ ಅನ್ನು 90.54 ಮೀ. ದೂರಕ್ಕೆ ಎಸೆದು ಚಾಂಪಿಯನ್ ಆದರು. ಚೋಪ್ರಾಗೆ ಪೈಪೋಟಿ ನೀಡಿದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಝಕ್ ಗಣರಾಜ್ಯದ ಜಾಕಬ್ ವಡ್ಲೆಜ್ ತನ್ನ 4ನೇ ಪ್ರಯತ್ನದಲ್ಲಿ 83.48 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೂರನೇ ಸ್ಥಾನ ಪಡೆದರು.
ಬೆಳ್ಳಿ ಪದಕ ಜಯಿಸಿ ಇತಿಹಾಸದ ಪುಟದಲ್ಲಿ ತನ್ನ ಹೆಸರು ಕೆತ್ತಿದ ಚೋಪ್ರಾ ನಾರ್ವೆಯ ಟ್ರ್ಯಾಕ್ ಹಾಗೂ ಫೀಲ್ಡ್ ದಿಗ್ಗಜ ಆಂಡ್ರಿಯಾಸ್ ಥೋರ್ಕಿಲ್ಡ್‌ಸನ್ ಬಳಿಕ ಒಂದೇ ವರ್ಷ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಪ್ರಶಸ್ತಿಗಳನ್ನು ಜಯಿಸಿದ ಮೊದಲ ಅಶ್ಲೀಟ್ ಎಂಬ ದಾಖಲೆ ನಿರ್ಮಿಸುವುದರಿಂದ ವಂಚಿತರಾದರು.
ರೋಹಿತ್ ಯಾದವ್‌ಗೆ 10ನೇ ಸ್ಥಾನ ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಜಾವೆಲಿನ್ ಎಸೆತ ಗಾರ ರೋಹಿತ್ ಯಾದವ್ 12 ಫೈನಲಿಸ್ಟ್ಗಳ ಪೈಕಿ 10ನೇ ಸ್ಥಾನ ಪಡೆದರು. ಯಾದವ್ ಅವರ ಉತ್ತಮ ಸಾಧನೆ 78.72 ಮೀ. ಆಗಿತ್ತು.
ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ 88.39 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ಚೋಪ್ರಾ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿ ದ್ದರು. 88.39 ಮೀ. ಚೋಪ್ರಾ ವೃತ್ತಿಜೀವನದ ಮೂರನೇ ಶ್ರೇಷ್ಠ ಪ್ರದರ್ಶನವಾಗಿತ್ತು. ಸ್ಟಾಕ್ ಹೋಮ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ ಜೀವನಶ್ರೇಷ್ಠ(89.94 ಮೀ.)ಸಾಧನೆ ಮಾಡಿದ್ದರು.
ಮೊದಲ ಫೈನಲ್‌ನಲ್ಲಿ ಚರಿತ್ರೆ ನಿರ್ಮಿಸಿದ ಚೋಪ್ರಾ: ಚೋಪ್ರಾ ಇದೇ ಮೊದಲ ಬಾರಿ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಫೈನಲ್ ಹಂತ ತಲುಪಿ ಬೆಳ್ಳಿಗೆ ಮುತ್ತಿಟ್ಟು ಚರಿತ್ರೆ ನಿರ್ಮಿಸಿದ್ದಾರೆ. 2017ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಭಾಗವಹಿಸಿದ್ದ ಚೋಪ್ರಾ ಅಂತಿಮ ಸುತ್ತಿಗೆ ತೇರ್ಗಡೆ ಯಾಗಲು ವಿಫಲರಾಗಿದ್ದರು. ಮೊಣಕೈ ಶಸ್ತ್ರಚಿಕಿತ್ಸೆ ಯಿಂದ ಚೇತರಿಸಿಕೊಳ್ಳಲು ವಿಫಲವಾದ ಕಾರಣ ದೋಹಾದಲ್ಲಿ 2019ರಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಅವರು ಭಾಗವಹಿಸಿರಲಿಲ್ಲ.