ರಾತ್ರಿಯಿಡೀ ಕಚೇರಿಯಲ್ಲಿ ಧರಣಿ ನಡೆಸಿದ ಭಟ್ಕಳ ಮಹಿಳಾ ಸಂಘದ ಸದಸ್ಯೆಯರು; ಕಚೇರಿಗೆ ತಹಶೀಲ್ದಾರ, ಎಆರ್ ಭೇಟಿ

Source: S O News | By V. D. Bhatkal | Published on 2nd August 2023, 4:18 PM | Coastal News |

ಭಟ್ಕಳ: ಸ೦ಘದ ನಿರ್ದೇಶಕ ಮ೦ಡಳಿಯ ಸಭೆ ಮುಂದೂಡಿಕೆ ಪ್ರಯತ್ನವನ್ನು ಖಂಡಿಸಿ ಸೋಮವಾರ ಸಂಜೆಯಿಂದ ಸಂಘದ ಕಚೇರಿಯಲ್ಲಿ ಅಧ್ಯಕ್ಷ ನಯನಾ ನಾಯ್ಕ ನೇತೃತ್ವದಲ್ಲಿ ಭಟ್ಕಳ ಅಭ್ಯುದಯ ಮಹಿಳಾ ಸಹಕಾರಿ ಸಂಘದ ಏಳು ನಿರ್ದೇಶಕರು, ಆರಂಭಿಸಿದ ಧರಣಿ ಸತ್ಯಾಗ್ರಹ, ಮಂಗಳವಾರ ಬೆಳಿಗ್ಗೆ ಸಹಕಾರಿ ಇಲಾಖೆಯ ಸಹಾಯಕ ನಿಬಂಧಕರು ಸಭೆಗೆ ಒಪ್ಪಿಗೆ ನೀಡುವುದರೊಂದಿಗೆ ಗೆ ಸುಖಾಂತ್ಯ ಕಂಡಿದೆ.

ಧರಣಿ ಹಿಂಪಡೆಯುವಂತೆ ಸಹಕಾರಿ ಇಲಾಖೆಯ ಅಧಿಕಾರಿಗಳು, ಪೊಲೀಸರು ಮಾಡಿಕೊಂಡ ಮನವಿಗೆ ಸ್ಪಂದಿಸದ ಧರಣಿ ನಿರತರು, ನಿಯಮದಂತೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ನಮಗೆ ಸಭೆ ನಡೆಸಲು ಅವಕಾಶ ನೀಡದಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಸಭೆಯನ್ನು ನಡೆಸಬೇಕಾಗಿದ್ದ ಮುಖ್ಯ ಕಾರ್ಯನಿರ್ವಾಹಕರು ಯಾವುದೇ ಮಾಹಿತಿ ನೀಡದೇ ೬ ಕಚೇರಿಯಿಂದ ಹೊರಗೆ ತೆರಳಿರುವುದು ಅಕ್ಷಮ್ಯ ನಡವಳಿಕೆಯಾಗಿದೆ. ನಮ್ಮ ಮೇಲಿನ ದಬ್ಬಾಳಿಕೆಯನ್ನು ಸಹಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ರಾಜ್ಯದ ಎಲ್ಲ ಸಹಕಾರಿ ಸಂಘಗಳಲ್ಲಿಯೂ ಇದೇ ರೀತಿ ನಡೆದ- ರೆ ಯಾವುದೇ ಆಡಳಿತ ಮಂಡಳಿ ಅಧಿಕಾರ ನಡೆಸಲು ಸಾಧ್ಯವಾಗುವುದಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಲೇ ಸೋಮವಾರ ರಾತ್ರಿಯಿಡೀ ಸಂಘದ ಕಚೇರಿಯಲ್ಲಿ ಕಾಲ ಕಳೆದರು. ಇದಕ್ಕೂ ಮುನ್ನ ಆಹೋ ರಾತ್ರಿ ಧರಣಿಗೆ ಸಂಬಂಧಿಸಿದಂತೆ ಅಧ್ಯಕ್ಷೆ ನಯನಾ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ | ಒದಗಿಸುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಸಂಘದ ಕಚೇರಿಯ ಸುತ್ತ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. 

ತಹಸೀಲ್ದಾರ, ಎ.ಆರ್ ಭೇಟಿ
ಭಟ್ಕಳ ಮಹಿಳಾ ಸಹಕಾರಿ ಸಂಘದ ಕಚೇರಿಯ ಒಳಗೆ ಸದಸ್ಯೆಯರು ರಾತ್ರಿಯಿಡೀ ಧರಣಿ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯ ಬಗ್ಗೆ ಮಾಹಿತಿ ಪಡೆದ ತಹಸೀಲ್ದಾರ ತಿಪ್ಪೇಸ್ವಾಮಿ, ಸಹಕಾರಿ ಇಲಾಖೆ ಸಹಾಯಕ ನಿಬಂಧಕ ಜಿ.ಕೆ.ಭಟ್ ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಂದ ಮಾಹಿತಿ ಪಡೆದರು. ಸಭೆ ನಡೆಸುವುದು ಆಡಳಿತ ಮಂಡಳಿಯ ಪರಮಾಧಿಕಾರವಾಗಿದೆ. ಈಗ ಇರುವ ನಿಯಮದನ್ವಯ ಸಭೆ ನಡೆಸಲು ಆಡಳಿತ ಮಂಡಳಿಗೆ ಯಾವುದೇ ಅಡೆತಡೆ ಇಲ್ಲ ಎಂದು ಅಧಿಕಾರಿಗಳು ಧರಣಿ ನಿರತರಿಗೆ ತಿಳಿಸಿದರು. ನಂತರ 11 ಗಂಟೆಗೆ ಸಂಘದ ಕಚೇರಿಯಲ್ಲಿ ಅಧ್ಯಕ್ಷೆ ನಯನಾ ನಾಯ್ಕ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸಭೆ ನಡೆಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಸುಕನ್ಯಾ ಸೇರಿದಂತೆ 7 ಸದಸ್ಯೆಯರು ಉಪಸ್ಥಿತರಿದ್ದರು.

ಠರಾವಿನಲ್ಲಿ ಇದ್ದ ಮುಖ್ಯಾಂಶವೇನು?
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ನಯನಾ ನಾಯ್ಕ, ಸಂಘದ ಮುಖ್ಯಕಾರ್ಯನಿರ್ವಾಹಕರು ನೀಡಿದ ನೋಟಿಸ್ ಅನ್ವಯ ನಾವು ಸೋಮವಾರ ಸಂಜೆ ಸಭೆಗೆ ಹಾಜರಾಗಿದ್ದು, ನಮಗೆ ಯಾವುದೇ ಮಾಹಿತಿ ನೀಡದೇ, ಠರಾವು ಪುಸ್ತಕವನ್ನೂ ನೀಡದೇ ಮುಖ್ಯಕಾರ್ಯನಿರ್ವಾಹಕರು ಕಚೇರಿಯಿಂದ ಹೊರಗೆ ಹೋದವರು ವಾಪಸ್ಸು ಬಂದಿಲ್ಲ. ಶೇರುದಾರರ ಸಾಲದ ಪತ್ರಕ್ಕೂ ನಮ್ಮಿಂದ ಸಹಿ ಪಡೆದಿಲ್ಲ. ಇದನ್ನೆಲ್ಲವನ್ನೂ ಠರಾವು ಪ್ರತಿಯಲ್ಲಿ ದಾಖಲಿಸಿದ್ದೇವೆ. ಮತ್ತೆ ನಮ್ಮನ್ನು ಕಾನೂನು ಬಾಹೀರವಾಗಿ, ದರ್ಪದಿಂದ ತಡೆಯಲು ಬಂದರೆ ತೀವ್ರ ತೆರನಾದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Read These Next

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ" ಅಭಿಯಾನ : ಈಶ್ವರ ಕಾಂದೂ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಎಲ್ಲ ಗ್ರಾಮ ...

ಉತ್ತರ ಕನ್ನಡದಲ್ಲಿ ಆಸ್ತಿಗಳ ನೋಂದಣಿಗೆ ಇ-ಆಸ್ತಿ ಮತ್ತು ಕಾವೇರಿ ತಂತ್ರಾಂಶದ ಸಂಯೋಜನೆ: ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ

ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ...