ಮುರುಡೇಶ್ವರ ಖಾಸಗಿ ಕ್ಲಿನಿಕ್‌ನಲ್ಲಿ ಕಾಲು ನೋವಿಗೆ ಚಿಕಿತ್ಸೆ; ಅನುಮಾನಾಸ್ಪದವಾಗಿ‌ ಮಹಿಳೆ ಸಾವು

Source: SO News | By MV Bhatkal | Published on 26th June 2024, 8:04 AM | Coastal News | Don't Miss |

ಭಟ್ಕಳ: ಕಾಲು ನೋವಿಗೆ ಇಲ್ಲಿನ ಖಾಸಗಿ ಕ್ಲಿನಿಕ್‌ವೊಂದರಲ್ಲಿ ಚಿಕಿತ್ಸೆ ಪಡೆದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿ ದ್ದಾರೆ ಎಂದು ಆರೋಪಿಸಿ ಮಹಿಳೆಯ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಮುರುಡೇಶ್ವರ ಗರಡಿಗದ್ದೆಯ ನಿವಾಸಿ ಸಾವಿತ್ರಿ ಗೋವಿಂದ ನಾಯ್ಕ (57) ಎಂದು ಗುರುತಿಸಲಾಗಿದೆ. ಈಕೆ ಕಾಲು ನೋವಿಗೆ ಸಂಬಂಧಿಸಿದಂತೆ 7-8 ತಿಳಿಸಿದ ಸದಸ್ಯರು.ಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಹೇಳಲಾಗುತ್ತಿದ್ದು, ಇದೀಗ ಕಾಲಿನಲ್ಲಿ ಸಣ್ಣ ಗಾಯವೊಂದು ಕಾಣಿಸಿಕೊಂಡು ನೋವು ಉಲ್ಬಣಿಸಿದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಪಡೆಯಲು ಅದೇ ಕ್ಲಿನಿಕ್‌ಗೆ ಬಂದಿದ್ದರು. ಕಾಲಿನ ಗಾಯಕ್ಕೆ ಚುಚ್ಚುಮದ್ದು ನೀಡಿದ ನಂತರ ಮಹಿಳೆ ಅಸ್ವಸ್ಥ ಗೊಂಡಂತೆ ಕಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಸಮೀಪದ ಆರೆನ್ನೆಸ್ ಆಸ್ಪತ್ರೆ ಕರೆದೊಯ್ಯುವ ವೇಳೆ ಮಹಿಳೆ ಮೃತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಿಳೆ ಸಾವಿನ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಮಗ ಶಂಕರ ನಾಯ್ಕ ಮುರುಡೇಶ್ವರ ಪೊಲೀಸರು ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣವನ್ನು ದಾಖಲಿಸಿ ಕೊಂಡ ಮುರುಡೇಶ್ವರ ಠಾಣಾ ಎಸ್‌ಐ ಮಂಜುನಾಥ ತನಿಖೆ ಕೈಗೊಂಡಿದ್ದಾರೆ.

ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ವರದಿ ಬಂದ ನಂತರವಷ್ಟೇ ಏನನ್ನಾದರೂ ಹೇಳಲು ಸಾಧ್ಯ ಎಂದು ಠಾಣಾ ಎಸ್‌ಐ ಮಂಜುನಾಥ ತಿಳಿಸಿದರು.

ಮೃತರಿಗೆ ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

Read These Next

ಖಾಸಗಿ ಬಸ್ಸಿನಲ್ಲಿ ಸಹ ಪ್ರಯಾಣಿಕರು ಹಾಗೂ ಚಾಲಕನಿಂದ ಭಟ್ಕಳದ ಯುವಕನಿಗೆ ಥಳಿತ; ಭಟ್ಕಳದಲ್ಲಿ ಬಸ್ ತಡೆದು ಪ್ರತಿಭಟನೆಗೆ ಯತ್ನ

ಹೈದರಾಬಾದಿನಿಂದ ಮಂಗಳೂರಿಗೆ  ಬರುತ್ತಿರುವ ಖಾಸಗಿ ಓಲ್ವೋ  ಸ್ಲೀಪರ್ ಬಸ್ಸಿನಲ್ಲಿ ಗಂಗಾವತಿ ಬಳಿ ಭಟ್ಕಳದ ಯುವಕನ ಮೇಲೆ ಸೋಮವಾರದಂದು ...

ಭಟ್ಕಳದಲ್ಲಿ ಕರಾಟೆ ರೆಫ್ರಿ ತರಬೇತಿ; ತಪ್ಪು ನಿರ್ಣಯಗಳಿಂದ ಸ್ಪರ್ಧಾಳುವಿನ ಭವಿಷ್ಯ ಮಣ್ಣುಪಾಲಾಗುತ್ತದೆ-ಜೋಸ್

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಇಲ್ಲಿನ ಬಂದರ್ ರಸ್ತೆಯ ಕಮಲಾವತಿ ರಾಮನಾಥ ಶಾನಭಾಗ ...

ಸಚಿವ ವೈದ್ಯರ ಗೃಹ ಕಚೇರಿಯಲ್ಲಿ ಜನತಾ ದರ್ಶನ; ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ರಾಜಿಯಿಲ್ಲ ಎಂದ ಸಚಿವ

ಭಟ್ಕಳ: ಜನರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮುರುಢೇಶ್ವರದ ತಮ್ಮ ಸ್ವಗೃಹದಲ್ಲಿ ...