ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ ಬೆಂಗಳೂರು, ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದೆ. ಈ ವರೆಗೂ ಜಗತ್ತಿನ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡಿರದ ಸಾಧನೆ ಮಾಡಿ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಯಶಸ್ವಿಯಾಗಿದೆ.
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಜಗತ್ತಿಗೆ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ 104 ಉಪಗ್ರಹಗಳನ್ನು ಹೊತ್ತೊಯ್ಯವ ರಾಕೆಟ್ polar satellite launch vehicle (P.S.L.V) – C 37 ಈ ರಾಕೆಟ್‍ನ್ನು ವಿಜಯವಾಡ, ಆಂದ್ರ ಪ್ರದೇಶ ಮೂಲದ ಮೀಲದ ಕಂಪನಿ ‘RESINS’ಮತ್ತು ಅಲೈಡ್ ಪ್ರೊಡಕ್ಷನ್ಸ್ (Rap) – ತಯಾರಿಸಿವೆ. ಇದು ಸ್ವದೇಶಿಯ ರಾಕೇಟ್ ಇಸ್ರೋದ ಮುಖ್ಯಸ್ಥ ಎ.ಎಸ್. ಕಿರಣಕುಮಾರ, ರಾಕೆಟ್‍ನ ನೀಲ ನಕ್ಷೆಗೆ ಮಾರ್ಗದರ್ಶನ ನಿಡಿದ್ದಾರೆ.P.S.L.V – C 37 ರಾಕೆಟ್‍ನ್ನು ದಿನಾಂಕ 15 ಫಬ್ರವರಿ 2017 ರಂದು ಮುಂಜಾನೆ 9-28 ಘಂಟೆಗೆ ಶ್ರೀ ಸತೀಶ ಧವನ್ ರಾಕೆಟ್ ಉಡಾವಣಾ ಕೇಂದ್ರ, ಶ್ರೀ ಹರಿಕೋಟಾ ಆಂದ್ರ ಪ್ರದೇಶ ದಿಂದ ಉಡಾವಣೆ ಮಾಡಲಾಯಿತು. ಮುಂಜಾನೆ 9:48 ಕ್ಕೆ ಎಲ್ಲಾ 104 ಉಪಗ್ರಹಗಳು ನಬೋ ಮಂಡಲಕ್ಕೆ ಸೇರಿದವು. ಈ ಯೋಜನೆಯ ಒಟ್ಟು ವೆಚ್ಚ 200 ಕೋಟಿ ರೂಪಾಯಿ.
ಅಮೆರಿಕ, ಜರ್ಮನಿ, ಇಸ್ರೋಲ್ ಯು.ಎ.ಇ. ನೆದರ್ ಲ್ಯಾಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣ ಜ್ಯ ಉದ್ದೇಶಿತ ಉಪಗ್ರಹಗಳು ಹಾಗೂ ಭೂವೀಕ್ಷಣಾ ಕಾರ್ಯ ನಡೆಸುವ ಅಮೆರಿಕ ಸಂಸ್ಥೆಯ 88 ಚಿಕ್ಕ ಉಪಗ್ರಹ (ಕ್ಯೂಬ್ ಸ್ಯಾಟ್)ಗಳು ಕಕ್ಷೆ ಸೇರಿವೆ. ಇದಲ್ಲದೆ ಭಾರತದ ಮೂರು ಉಪಗ್ರಹಗಳಾದ ಕಾರ್ಟೋಸ್ಯಾಟ್ 2, ಐ ಎನ್ ಎಸ್ 1 ಎ ಹಾಗೂ ಐ ಎನ್ ಎಸ್ 1 ಬಿ ಸೇರಿದಂತೆ ಒಟ್ಟು 104 ಉಪಗ್ರಹಗಳು ಒಂದೇ ರಾಕೆಟ್ ಮೂಲಕ ಯಶಸ್ವಿಯಾಗಿ ಭೂ ಕಕ್ಷೆಯನ್ನು ಸೇರಿವೆ. 104 ಉಪಗ್ರಹಗಳ ಒಟ್ಟು ತೂಕ 1500 ಕೆ.ಜಿ. ರಾಕೆಟ್ ಹಾಗೂ ಉಪಗ್ರಹಗಳ ಒಟ್ಟೂ ತೂಕ 320,000 ಕಿಲೋಗ್ರಾಂ.
2016 ರಲ್ಲಿ ಭಾರತದ ಇಸ್ರೋ ಬಾಹ್ಯಾಕಾಶ ಸಂಸ್ಥೆ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 2014 ರಲ್ಲಿ ರಷ್ಯ ಒಟ್ಟಿಗೆ 37 ಉಪಗ್ರಹಗಳನ್ನು ಹಾಗೂ ನಾಸಾ 29 ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಕಕ್ಷೆಗೆ ಸೇರಿಸಿದವು.
ಇಸ್ರೋದ ಮುಂದಿನ ಯೋಜನೆಗಳು 2018 ರಲ್ಲಿ ಚಂದ್ರಯಾನ 2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019 ರಲ್ಲಿ ಆದಿತ್ಯ ಎಲ್ 1 ಉಪಗ್ರಹಗಳ ಉಡಾವಣೆ.
ಭಾರತ ದೇಶದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆಯಾದ ‘ಇಸ್ರೋ’ವಿಜ್ಞಾನಿಗಳ ಈ ಅದ್ಭುತ ಸಾಧನೆಗೆ ಎಲ್ಲ ಭಾರತೀಯರು ಶುಭ ಹಾರೈಸೋಣ.
ವಿಶೇಷ ಲೇಖನ : ಜಗದೀಶ ವಡ್ಡಿನ
ಮೊ. ನಂ. 9632332185