ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷ; 47ನೇ ಅಧ್ಯಕ್ಷರಾಗಿ ಆಯ್ಕೆಯಾದ ರಿಪಬ್ಲಿಕನ್ ಅಭ್ಯರ್ಥಿ; ಕಮಲಾ ಹ್ಯಾರಿಸ್ ಕನಸು ಭಗ್ನ

Source: Vb | By I.G. Bhatkali | Published on 8th November 2024, 12:06 PM | Global News |

ವಾಶಿಂಗ್ಟನ್: ಅಮೆರಿಕದಲ್ಲಿ ಟ್ರಂಪ್ ಯುಗ ಪುನಾರಂಭಗೊಂಡಿದೆ. ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರ್ಜರಿ ಜಯಗಳಿಸಿದ್ದಾರೆ. ಅಮೆರಿಕದ ಹಾಲಿ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಅವರು ಅಧಿಕಾರಕ್ಕೇರಿದ್ದಾರೆ. ಅಮೆರಿಕದ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗುವ ಕಮಲಾ ಹ್ಯಾರಿಸ್ ಅವರ ಕನಸು ಭಗ್ನಗೊಂಡಿದೆ.

ಡೊನಾಲ್ಡ್ ಟ್ರಂಪ್ ಅವರಿಗೆ 276 ಇಲೆಕ್ಟೋರಲ್ ಕಾಲೇಜ್ ಮತಗಳು ಲಭಿಸಿದರೆ, ಕಮಲಾ ಹ್ಯಾರಿಸ್‌ಗೆ 223 ಇಲೆಕ್ಟೋರಲ್ ಕಾಲೇಜ್ ಮತಗಳು ದೊರೆತಿವೆ. ಒಟ್ಟು 538 ಇಲೆಕ್ಟೋರಲ್ ಕಾಲೇಜ್ ಮತಗಳ ಪೈಕಿ ಬಹುಮತಕ್ಕೆ 270 ಮತಗಳ ಅಗತ್ಯವಿತ್ತು. ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿಯ ಪೈಪೋಟಿಯಿದ್ದ ಏಳು ರಾಜ್ಯಗಳಲ್ಲಿಯೂ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಅಮೆರಿಕದ 47ನೇ ಅಧ್ಯ ಕ್ಷರಾಗಿ ಟ್ರಂಪ್ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ. ಡೆಮಾಕ್ರಟ್ ಪಕ್ಷದ ಭದ್ರಕೋಟೆಗಳಿಗೂ ಟ್ರಂಪ್‌ ಲಗ್ಗೆ ಹಾಕಿದ್ದಾರೆ. ಅರಿನಾ, ಮಿಶಿಗನ್, ಪೆನ್ಸಿಲ್ವೇನಿಯಾ, ವಿಸ್ಕೋನ್‌ಸಿನ್ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ ಆರಂಭಿಕ ಮುನ್ನಡೆ ಸಾಧಿಸಿದ್ದರೂ ಮತ ಎಣಿಕೆ ಮುಂದುವರಿದಂತೆ ಅವರನ್ನು ಹಿಂದಿಕ್ಕು ವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ.

ಡೆಮಾಕ್ರಟ್‌ ಪಕ್ಷದ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ನ್ಯೂಮಿಂಗ್, ಸೌತ್ ಡಕೋಟಾ, ಸೌತ್ ಕರೋಲಿನಾ, ಟೆನ್ಸಿ, ಓಕ್ಲಹಾಮಾ, ಓಹಿಯೋ, ನಬ್ರಾಹ್ಮ, ನಾರ್ತ್ ಡಕೋಟಾ, ನಾರ್ತ್ ಕರೋಲಿನಾ, ಮೊಂಡಾನ,ಮಿಸಿಸಿಪ್ಪಿ, ಮಿಸ್ಸರಿ, ಲೂಸಿಯಾನ, ಕೆಂಟಕಿ, ಕನ್ಸಾಸ್, ಇಂಡಿಯಾನ, ಇಡಾಹೋ, ಲೋವಾ, ಫ್ಲೋರಿಡಾ, ಅರ್ಕಾನ್‌ಸಾಸ್, ಅಲಬಾಮ, ಜಾರ್ಜಿಯಾ ರಾಜ್ಯ ಗಳಲ್ಲಿ ಟ್ರಂಪ್ ಗೆಲುವಿನ ನಗೆ ಬೀರಿದ್ದಾರೆ. ಕಮಲಾ ಹ್ಯಾರಿಸ್ ಅವರು ಡೆಲ ವೇರ್, ನ್ಯೂಜೆರ್ಸಿ, ರೋಡ್ ಐಲ್ಯಾಂಡ್, ಕನೆಕ್ಟಿಕಟ್, ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್, ವೆರ್ಮೊಂಟ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಅಮೆರಿಕ ಸಂಸತ್‌ನ ಮೇಲ್ಮನೆಯಾದ ಸೆನೆಟ್‌ನಲ್ಲಿಯೂ ನಾಲ್ಕು ವರ್ಷಗಳ ಬಳಿಕ ರಿಪಬ್ಲಿಕನ್ನರು ಬಹುಮತ ಪಡೆಯುವಲ್ಲಿ ಸಫಲರಾಗಿದ್ದಾರೆ. ಇತ್ತ ಕೆಳಮನೆಯಾದ ಜನಪ್ರತಿನಿಧಿ ಸಭೆಯಲ್ಲಿ (ಹೌಸ್ ಆಫ್‌ರೆಪ್ರೆಸೆಂಟೆಟಿನ್ಸ್) ಯೂ ರಿಪಬ್ಲಿಕನ್ನರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಓಹಿಯೋ,ವೆಸ್ಟ್ ವರ್ಜಿನಿಯಾ, ನಬ್ರಾಸ್ಥ ರಾಜ್ಯಗಳಲ್ಲಿ ರಿಪಬ್ಲಿಕನ್ನರು ಜಯಗಳಿಸುವುದರೊಂದಿಗೆ ಸೆನೆಟ್‌ನಲ್ಲಿ ಬಹುಮತ ಸ್ಥಾಪಿಸಿದ್ದಾರೆ.

ಟ್ರಂಪ್ ದಾಖಲೆ:
ಮೆರಿಕದ ಇತಿಹಾಸದಲ್ಲಿಯೇ, ಅಧ್ಯಕ್ಷನಾದ ನಂತರದ ಚುನಾವಣೆ ಅಮುತ್ವ ಯಲ್ಲಿ ಸೋತು ಮರಳಿ ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ಆಲಂಕರಿಸಿದ ದ್ವಿತೀಯ ವ್ಯಕ್ತಿಯೆಂಬ ದಾಖಲೆಯನ್ನು ಟ್ರಂಪ್ ಬರೆದಿದ್ದಾರೆ. 2020ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ

ಬಳಿಕ ಟ್ರಂಪ್, ಈ ಸಲದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯ ರ್ಥಿಯಾಗಿ ಆಯ್ಕೆಯಾಗಿದ್ದರು. ಕಳೆದ 127 ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ಒಮ್ಮೆ ಸೋತ ಬಳಿಕ ಮತ್ತೊಮ್ಮೆ ಅಧಿಕಾರಕ್ಕೇರಿರುವುದು ಇದೇ ಮೊದಲು. ಇದಕ್ಕೂ ಮುನ್ನ ಗೋವರ್ ಕ್ಲೀವ್‌ಲ್ಯಾಂಡ್ ಅವರು 1885-1889 ಹಾಗೂ 1893-1897 ಈ ಎರಡು ಅವಧಿಗಳಲ್ಲಿ ಅಮೆರಿಕ ಅಧ್ಯ ಕ್ಷರಾಗಿದ್ದರು. ಗೋವರ್ ಕ್ಲೀನ್‌ಲ್ಯಾಂಡ್ ಅವರು 1884ರ ಚುನಾವಣೆಯಲ್ಲಿ ಅಮೆರಿಕದ 22ನೇ ಅಧ್ಯ ಕ್ಷರಾಗಿ ಆಯ್ಕೆಯಾಗಿದ್ದರು. ನಂತರದ ಚುನಾವಣೆಯಲ್ಲಿ ಅವರು ಪರಾಭವಗೊಂಡರು. ಆದರೆ 1892ರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.

78ನೇ ವರ್ಷದಲ್ಲಿ ಮತ್ತೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್, ಅತ್ಯಂತ ಹಿರಿಯ ವಯ ಸ್ಸಿನಲ್ಲಿ ಅಧ್ಯಕ್ಷನಾಗಿ ಚುನಾಯಿತನಾದ ವ್ಯಕ್ತಿಯೆಂಬ ದಾಖಲೆಯನ್ನು ಕೂಡಾ ನಿರ್ಮಿಸಿದ್ದಾರೆ.

ಜೆ.ಡಿ.ವೇನ್ಸ್ ಅಮೆರಿಕ ಉಪಾಧ್ಯಕ್ಷ:
ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಜಯಗಳಿಸುವುದರೊಂದಿಗೆ, ಓಹಿಯೋ 'ರಾಜ್ಯದ ರಿಪಬ್ಲಿಕನ್ ಸೆನೆಟರ್ ಜೆ.ಡಿ.ವೇನ್ಸ್ ಅವರು ಉಪಾಧ್ಯಕ್ಷರಾಗಿ ನೇಮಕ ಗೊಳ್ಳಲಿದ್ದಾರೆ. ವೇನ್ಸ್, ತನ್ನ ಉಪಾಧ್ಯಕ್ಷ ಅಭ್ಯರ್ಥಿಯೆಂದು ಟ್ರಂಪ್ ಅವರು ಘೋಷಿ ಸಿದ್ದರು. 40 ವರ್ಷ ವಯಸ್ಸಿನ ವಾನ್ಸ್ ಅವರು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಉಪಾಧ್ಯಕ್ಷರುಗಳಲ್ಲಿ ಮೂರನೇಯವರೆನಿಸಿಕೊಂಡಿದ್ದಾರೆ. ವೇನ್ಸ್ ಅವರ ಪತ್ನಿ ಉಷಾ ಚಿಲುಕುರಿ ಅವರು ಭಾರತೀಯ ಮೂಲದವರಾಗಿದ್ದು, ಅಮೆರಿಕದ ಎರಡನೇ ಮಹಿಳೆಯೆನಿಸಿಕೊಳ್ಳಲಿದ್ದಾರೆ.

Read These Next

ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತ: 100ಕ್ಕೂ ಹೆಚ್ಚು ಜನರ ದುರ್ಮರಣ, ಬೃಹತ್ ರಕ್ಷಣಾ ಕಾರ್ಯಾಚರಣೆ

ನೇಪಾಳದಲ್ಲಿ ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 60 ಜನರು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...

ಹಮಾಸ್ ಉನ್ನತ ನಾಯಕನ ಹತ್ಯೆ

ಟೆಹ್ರಾನ್‌:‌ ಇರಾನ್‌ ರಾಜಧಾನಿ ಟೆಹ್ರಾನ್‌ ನಲ್ಲಿ ಬುಧವಾರ ನಡೆದ ದಾಳಿಯಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ...