ಟೋಕಿಯೊ: ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಅಂಟಿಲ್ ಎಫ್64 ಸ್ಪರ್ಧೆಯಲ್ಲಿ 68.55 ಮೀ.ದೂರಕ್ಕೆ * ಜಾವಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಹಲವು ಬಾರಿ ಪುಡಿಗಟ್ಟಿ ಚಿನ್ನದ ಪದಕ ಜಯಿಸಿ ಇತಿಹಾಸ : ಸೃಷ್ಟಿಸಿದರು.
ಭಾರತದ ಕ್ರೀಡಾಪಟುಗಳಿಗೆ ಸೋಮವಾರ ಸರಣೀಯ ದಿನವಾಗಿ ಪರಿಣಮಿಸಿತು. ಭಾರತೀಯ ಕ್ರೀಡಾಪಟುಗಳು ಒಂದೇ ದಿನ 2 ಚಿನ್ನ ಸಹಿತ ಒಟ್ಟು 5 ಪದಕಗಳನ್ನು ಜಯಿಸಿ ಗಮನಾರ್ಹ ಸಾಧನೆ ಮಾಡಿದರು.
ಜಾವಲಿನ್ ಎಸೆತಗಾರನಾಗಿ ಪರಿವರ್ತಿತ ಕುಸ್ತಿಪಟು ಸುಮಿತ್ ಆಂಟಿಲ್ ಎಫ್ 64 ಸ್ಪರ್ಧೆಯಲ್ಲಿ 68.55 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ತನ್ನದೇ ವಿಶ್ವ ದಾಖಲೆಯನ್ನು ಹಲವು ಬಾರಿ ಪುಡಿಗಟ್ಟಿ ಚಿನ್ನದ ಪದಕ ಜಯಿಸಿ ಇತಿಹಾಸ ಸಷ್ಟಿಸಿದರು .
ಶೂಟರ್ ಅವನಿ ಲೇಖರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹಿರಿಮೆಯೊಂದಿಗೆ ಇತಿಹಾಸ ನಿರ್ಮಿಸಿದರು. ಆರ್-2 ಮಹಿಳೆಯರ 10 ಮೀ. ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 ಇಮೆಂಟ್‌ನಲ್ಲಿ 19ರ ಹರೆಯದ ಅವನಿ ಒಟ್ಟು 249.6 ಅಂಕ ಗಳಿಸಿ ವಿಶ್ವದಾಖಲೆಯನ್ನು ಸರಿಗಟ್ಟಿ ಮೊದಲ ಸ್ಥಾನ ಪಡೆದರು.
ಜೈಪುರದ ಶೂಟರ್ ಪ್ಯಾರಾಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಪರುಷರ ಎಫ್ 56 ಸ್ಪರ್ಧೆಯಲ್ಲಿ ಡಿಸ್ಕಸ್ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ 44.38 ಮೀ ದೂರಕ್ಕೆ ಡಿಸ್ ಎಸೆದು 2ನೇ ಸ್ಥಾನ ಪಡೆದರು. ಪ್ಯಾರಾಲಿಂಪಿಕ್ಸ್ ನಲ್ಲಿ ಈಗಾಗಲೇ 2 ಬಾರಿ ಚಿನ್ನದ ಪದಕ ಜಯಿಸಿರುವ ಜಾವೆಲಿನ್ ಎಸೆತದ ದಂತಕತೆ ದೇವೇಂದ್ರ ಝಾಝರಿಯಾ ಪುರುಷರ ಜಾವಲಿನ್ ಎಸೆತದ ಎಫ್-46ರಲ್ಲಿ 64.35 ಮೀ.ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕದೊಂದಿಗೆ ಒಲಿಂಪಿಕ್ಸ್‌ನಲ್ಲಿ 3ನೇ ಪದಕ ಬಾಚಿಕೊಂಡರು. ಇದೇ ಸ್ಪರ್ಧೆಯಲ್ಲಿ ಸುಂದರ್ ಸಿಂಗ್ ಗುರ್ಜರ್ 64.01 ಮೀ.ದೂರಕ್ಕೆ ಜಾಮಲಿನ ಎಸೆದು ಕಂಚಿನ ಪದಕ ತನ್ನದಾಗಿಸಿಕೊಂಡರು.