ಭಟ್ಕಳ: ಇಸ್ಲಾಮೀ ಆಚರಣೆಗಳನ್ನು ವಿರೋಧಿಸುವ ಮನಸ್ಥಿತಿ ಹೆಚ್ಚಾಗುತ್ತಿದೆ-ಮೌಲಾನ ಅಬ್ದುಲ್ ಅಲೀಮ್ ಖತೀಬ್ ನದ್ವಿ

Source: S O News | By Staff Correspondent | Published on 29th June 2023, 5:11 PM | Coastal News |

ಭಟ್ಕಳ: ಇಸ್ಲಾಮಿ ಧಾರ್ಮಿಕ ಆಚರಣೆಗಳನ್ನು ವರೋಧಿಸುವ ಮನಸ್ಥಿತಿ ಇಂದು ಹೆಚ್ಚಾಗುತ್ತಿದೆ ಎಂದು ಜಾಮಿಯಾ ಮಸೀದಿ ಚಿನ್ನದ ಪಳ್ಳಿಯ ಧಾರ್ಮಿಕ ಗುರು ಮೌಲಾನ ಅಬ್ದುಲ್ ಅಲೀಮ್ ಖತೀಬ್ ನದ್ವಿ ಹೇಳಿದರು.

ಅವರು ತ್ಯಾಗಬಲಿದಾನಗಳ ಪ್ರತೀಕವಾಗಿರುವ ಈದ್‌-ಉಲ್-ಅಝ್ಹಾ (ಬಕ್ರೀದ್ ಹಬ್ಬ)ದ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಈದ್ ಸಂದೇಶ ನೀಡಿದರು.

ಕುರ್ಬಾನಿ ಅಥವಾ ಬಲಿ ಕೊಡುವುದು ಹೊಸ ಪದ್ಧತಿಯಲ್ಲ, ಇದನ್ನು ವಿವಿಧ ಧಾರ್ಮಿಕ ಸಂಪ್ರದಾಯಗಳಲ್ಲಿ ಕಾಣಬಹುದು. ದೇವತೆಗಳನ್ನು ಸಮಾಧಾನಪಡಿಸಲು, ಸಮಸ್ಯೆಗಳನ್ನು ಪರಿಹರಿಸಲು, ವಿಪತ್ತುಗಳನ್ನು ತಪ್ಪಿಸುವ ಸಾಧನವಾಗಿ ಅನೇಕ ಧರ್ಮಗಳಲ್ಲಿ ತ್ಯಾಗ ಬಲಿ ಅರ್ಪಣೆ ಅಸ್ತಿತ್ವದಲ್ಲಿದೆ. ಕೆಲವು ಧರ್ಮಗಳು ಪ್ರಾಣಿಗಳ ಜೊತೆಗೆ ಮನುಷ್ಯರನ್ನು ಬಲಿ ನೀಡುವುದಿದೆ. ಆದರೆ, ಇಸ್ಲಾಂ ಬಲಿ ಅರ್ಪಿಸುವ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಿದೆ ಎಂದರು.

ಇಂದು ಪ್ರತಿಯೊಂದು ಇಸ್ಲಾಮಿಕ್ ಆಚರಣೆ, ಪದ್ದತಿಗಳನ್ನು ವಿರೋಧಿಸುವ ಮನಸ್ಥಿ ಚಾಲ್ತಿಯಲ್ಲಿದ್ದು ಈ ಕುರಿತ ಆಶ್ಚರ್ಯ ಮತ್ತು ವಿಷಾದ ವ್ಯಕ್ತ ಪಡಿಸಿದ ಮೌಲಾನ, ಬಲಿದಾನದ ಪಾವಿತ್ರ್ಯವನ್ನು ತಿರುಚಿ ಸಾರ್ವಜನಿಕರಿಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.  ಗುಂಪು ಹತ್ಯೆಯಂತಹ ಕೃತ್ಯಗಳ ಮೂಲಕ ವ್ಯಕ್ತಿಗಳ ಮೇಲೆ ಹೇರಿದ ಕ್ರೌರ್ಯವನ್ನು ಬಲವಾಗಿ ಟೀಕಿಸಿದ ಅವರು, ಇತರರಿಗೆ ಹಾನಿ ಮಾಡುವವರು ಮತ್ತು ಇತರರನ್ನು ನೋಯಿಸುವವರು ಅಲ್ಲಾಹನ ಕ್ರೋಧವನ್ನು ಎದುರಿಸಬೇಕಾಗುತ್ತದೆ ಎಂದು ಪುಂಡಾಟಿಕೆ ಮಾಡುವವರಿಗೆ  ಎಚ್ಚರಿಕೆಯ ಸಂದೇಶ ನೀಡಿದರು, ತುಳಿತಕ್ಕೊಳಗಾದವರ ಮನಃಪೂರ್ವಕ ಪ್ರಾರ್ಥನೆಯು ಅಲ್ಲಾಹನನ್ನು ತಲುಪಿದಾಗ, ಅದನ್ನು ಸ್ವೀಕರಿಸುವುದನ್ನು ಯಾವುದೂ ತಡೆಯುವುದಿಲ್ಲ, ಅದಕ್ಕಾಗಿಯೇ ಲೋಕನಾಯಕ ಪ್ರವಾದಿ ಮುಹಮ್ಮದ್ (ಸ) ಅವರು "ದಮನಿತರ ಪ್ರಾರ್ಥನೆಯ ಬಗ್ಗೆ ಎಚ್ಚರದಿಂದಿರಿ. ಅವರ ಮತ್ತು ಅಲ್ಲಾಹನ ನಡುವೆ ಯಾವುದೇ ತಡೆಗೋಡೆ ಇಲ್ಲ" ಎಂದು ಎಚ್ಚರಿಸಿದರು.

ಮಳೆ ಇರುವುದರಿಂದಾಗಿ ಈದ್ಗಾ ಮೈದಾನದ ಬದಲು ಪ್ರಮುಖ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಖಲೀಫಾ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಶಾಫಿ ಶಾಬಂದರಿ ನದ್ವಿ, ನವಾಯತ್ ಕಾಲೋನಿ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಅನ್ಸಾರ್ ಖತೀಬ್ ಮದನಿ, ಮದೀನಾ ಜಾಮಿಯಾ ಮಸೀದಿಯಲ್ಲಿ  ಮೌಲಾನಾ ಝಕ್ರಿಯಾ ನದ್ವಿ, ನೂರ್ ಜಾಮಿಯಾ ಮಸೀದಿಯಲ್ಲಿ ಮೌಲಾನಾ ಮೊಹಮ್ಮದ್ ಅಮೀನ್ ರುಕ್ನುದ್ದೀನ್ ನದ್ವಿ, ಮಕ್ದೂಮ್ ಕಾಲೋನಿ ಜಾಮಿಯಾ ಮಸೀದಿಯಲ್ಲಿ ಮೌಲಾನಾ ನೇಯಮತುಲ್ಲಾ ಅಸ್ಕರಿ ನದ್ವಿ, ಆಹ್ಮದ್ ಸಯೀದ್ ಜಾಮಿಯಾ ಮಸೀದಿ ಹುರುಳಿಸಾಲ್ ನಲ್ಲಿ ಮೌಲಾನ ಮುಹಮ್ಮದ್ ಜಾಫರ್ ಫಕ್ಕಿಭಾವ್ ನದ್ವಿ ಈದುಲ್ ಅಝ್ಹಾ ದ ಸಾಮೂಹಿ ಪ್ರಾರ್ಥನೆ ನೆರವೇರಿಸಿ ಈದ್ ಸಂದೇಶ ನೀಡಿದರು.

Read These Next

ಕಾರವಾರ: ಅನುಸೂಚಿತ ಜಾತಿ ಮತ್ತು ಪಂಗಡ ಉಪ ಹಂಚಿಕೆ ಯೋಜನೆಯಲ್ಲಿ 100% ಗುರಿ ಸಾಧಿಸಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಅನುಸೂಚಿತ ಪಂಗಡ ಉಪ ಹಂಚಿಕೆ ...

ಭಟ್ಕಳ: ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಚಾಲನೆ

ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ...

ಭಟ್ಕಳ: ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ:70 ವರ್ಷದ ವೃದ್ಧೆ ಸ್ಥಿತಿ ಗಂಭೀರ

ಇಲ್ಲಿನ ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದರೆ ಇನ್ನೊಂದು ಪ್ರಕರಣ ಬಂಗಾರಮಕ್ಕಿ ಕ್ರಾಸ್ ಬಳಿ ...

ಭಟ್ಕಳದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವವವ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್.ಡಿ.ಪಿ.ಐ ಆಗ್ರಹ

ಭಟ್ಕಳ: ಭಟ್ಕಳ ತಾಲೂಕಿನ ಜಾಲಿಪಟ್ಟಣ ಪಂಚಾಯತ್ ನ ಏಕೈಕ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ಕಾಝಿಯಾ ಅಪ್ಸ ಹುಝೈಫಾ ವಿರುದ್ಧ ಸಾಮಾಜಿಕ ...