ದೇವಸ್ಥಾನದ ಬಾಗಿಲು ಮುರಿದು ಕಳ್ಳತನ

Source: SO News | By MV Bhatkal | Published on 14th October 2024, 3:39 PM | Coastal News | Don't Miss |

ಭಟ್ಕಳ: ಯಾರೋ ಕಳ್ಳರು ದೇವಸ್ಥಾನವೊಂದರ ಬಾಗಿಲು ಮುರಿದು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯ ಬೇಹಳ್ಳಿಯಲ್ಲಿ ನಡೆದಿದೆ.

ಶನಿವಾರ  ಮದ್ಯಾಹ್ನ 12-30 ರಿಂದ ರವಿವಾರ 08-30 ರ ನಡುವಿನ ಅವಧಿಯಲ್ಲಿ ಬೇಹಳ್ಳಿ ಗ್ರಾಮದ ಕಾನಕೆರೆ ಜಟಕೇಶ್ವರ ದೇವಸ್ಥಾನದ ಒಳ ಹೊಕ್ಕಿ ದೇವಸ್ಥಾಣದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಸುಮಾರು 4 ಸಾವಿರ ನಗದು ಹಣ ಹಾಗೂ ದೇವಸ್ಥಾನಕ್ಕೆ ಅಳವಡಿಸಿದ್ದು 10 ಸಾವಿರ -ಮೌಲ್ಯದ 6 ಹಿತ್ತಾಳೆ ಗಂಟೆ. ಹೀಗೆ ಒಟ್ಟು 14000 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಭರಮಪ್ಪ ಬೆಳಗಲಿ ತನಿಖೆ ಕೈಗೊಂಡಿದ್ದಾರೆ

Read These Next

ಭಟ್ಕಳ: ಪ್ರವಾದಿ ನಿಂದಕ ಯತಿ ನರಸಿಂಗನಂದಾ ಸ್ವಾಮಿಯನ್ನು ದೇಶದ್ರೋಹ ಪ್ರಕರಣದಡಿ ಬಂಧಿಸುವಂತೆ ತಂಝೀಮ್ ಆಗ್ರಹ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಮನುಷ್ಯ ವಿರೋಧಿ ಯತಿ ನರಸಿಂಹನಂದಾ ಸರಸ್ವತಿ ...

ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂಧಿ

ಭಟ್ಕಳ: ರಜೆ ದಿನಗಳನ್ನು ಕಳೆಯಲುದು ಬೆಂಗಳೂರಿನಿಂದ ಮರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ 19 ವರ್ಷದ ಪುನೀತ್ ಎಂಬ ಯುವಕ ಸಮುದ್ರದಲ್ಲಿ ...

ಸಿಎಂ ಆಗಿ ಅತಿ ಹೆಚ್ಚು ಬಾರಿ ಅಂಬಾರಿ ಏರಿದ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಭಾಗ್ಯ: ರಾಜ್ಯದ ಜನತೆಗೆ ಕೃತಜ್ಞತೆ ಅರ್ಪಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು : ಅದ್ಧೂರಿ ಮತ್ತು ಅಚ್ಚುಕಟ್ಟಾದ ದಸರಾ ಆಯೋಜಿಸಿದ ಜಿಲ್ಲಾಡಳಿತ ಶ್ರಮ ಮತ್ತು ಶಿಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ...