ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಶುಭಾರಂಭ ಮಾಡಿದ್ದು, ರೋಹಿತ್ ಪಡೆ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ.ಎಲ್.ರಾಹುಲ್ ಒಂದು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 15 ರನ್‌ಗಳಿಸಿದ್ದ ರಾಹುಲ್ ಆರನೇ ಓವರ್ ಮೊದಲ ಎಸೆತದಲ್ಲಿ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
ಬಳಿಕ ರೋಹಿತ್ ಜೊತೆಗೂಡಿದ ಸೂರ್ಯಕುಮಾರ್ ಯಾದವ್ ಸ್ಫೋಟಕ ಆಟವನ್ನು ಮುಂದುವರಿಸಿದರು. ರೋಹಿತ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳೊಂದಿಗೆ 48 ರನ್‌ಗಳಿಸಿ ಬೌಲ್ಟ್ ಓವರ್‌ನಲ್ಲಿ ರಚಿನ್ ರವೀಂದ್ರಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸೂರ್ಯಕುಮಾರ್ 40 ಎಸೆತಗಳನ್ನು ಎದುರಿಸಿ 6 ಬೌಂಡರಿ, 3 ಸಿಕ್ಸರ್ ಸೇರಿ 62 ರನ್‌ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಶ್ರೇಯಸ್ ಅಯ್ಯರ್ 8 ಎಸೆತಗಳಲ್ಲಿ 5 ರನ್‌ಗಳಿಸಿ ಟೀಂ ಸೌಥಿಗೆ ವಿಕೆಟ್ ಒಪ್ಪಿಸಿದರು. ರಿಷಬ್ ಪಂತ್ 17 ಎಸೆತಗಳಿಂದ ಎರಡು ಬೌಂಡರಿ ಸೇರಿ 17 ರನ್ ಗಳಿಸಿದರು.
ಕಿವೀಸ್ ಪರ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರೆ ನಾಯಕ ಟಿಂ ಸೌಥಿ, ಸ್ಯಾಂಟ್ನರ್ ಹಾಗೂ ಡೇರಿಲ್ ಮಿಚೆಲ್ ತಲಾ 1 ವಿಕೆಟ್ ಪಡೆದರು