ಸಿರಿಯಾ ಬಂಡುಕೋರರ ವಶ; ರಾಜಧಾನಿ ದಮಾಸ್ಕಸ್‌ಗೆ ಲಗ್ಗೆ; ಅಧ್ಯಕ್ಷ ಅಸದ್ ಪಲಾಯನ; 24 ವರ್ಷಗಳ; ಅಳ್ವಿಕೆ ಅಂತ್ಯ; ವಿಮಾನನಿಲ್ದಾಣ, ಸೇನಾ ಕಾರ್ಯಾಲಯ ಬಂಡುಕೋರರ ವಶ

Source: Vb | By I.G. Bhatkali | Published on 9th December 2024, 8:07 AM | Global News |

ದಮಾಸ್ಕಸ್: ಸಿರಿಯಾ ಬಂಡುಕೋ ರರು ರವಿವಾರ ರಾಜಧಾನಿ ದಮಾಸ್ಕಸ್ ಮೇಲೆ ಮಿಂಚಿನ ದಾಳಿ ನಡೆಸಿದ್ದು ಅಧ್ಯಕ್ಷ ಬಶರ್ ಅಲ್ ಅಸದ್ ಸರಕಾರವನ್ನು ಪತನಗೊಳಿಸಿದ್ದಾರೆ. ಅಸದ್ ಅವರು ದೇಶವನ್ನು ತೊರೆದಿದ್ದು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಸಿರಿಯಾದ ಸುದ್ದಿಮಾಧ್ಯಮ ಗಳು ತಿಳಿಸಿವೆ. ಇದರೊಂದಿಗೆ ಅಸದ್ ಅವರ 24 ವರ್ಷಗಳ ಆಳ್ವಿಕೆ ಅಂತ್ಯಗೊಂಡಿದೆ.

ಎರಡೇ ವಾರದಲ್ಲಿ ಇದ್ದಿಬ್, ಹೋಮ್ಸ್, ಅಲೆಪ್ಪೋ ಸೇರಿದಂತೆ ಸಿರಿಯಾದ ವಿವಿಧ ನಗರಗ ಳನ್ನು ಮಿಂಚಿನ ವೇಗದಲ್ಲಿ ವಶಪಡಿಸಿಕೊಂಡಿದ್ದ ಬಂಡುಕೋರರು ರಾಜಧಾನಿ ದಮಾಸ್ಕಸ್‌ಗೆ ರವಿವಾರ ಲಗ್ಗೆ ಹಾಕಿದ್ದರು. ಇದಕ್ಕೆ ಕೆಲವೇ ತಾಸುಗಳ ಮೊದಲು ಅಸದ್ ಅವರು ದೇಶ ವನ್ನು ತೊರೆದಿದ್ದಾರೆ. ಬಂಡುಕೋರ ಸಂಘ ಟನೆ ಹಯಾತ್ ತರ್ ಅಲ್-ಶಾಮ್ (ಎಚ್‌ ಟಿಎಸ್) ನೇತೃತ್ವದಲ್ಲಿ ಪ್ರತಿಪಕ್ಷಗಳ ಒಕ್ಕೂಟವು ಎರಡು ವಾರಗಳ ಹಿಂದೆ ಅಸದ್ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವನ್ನು ಆರಂಭಿಸಿತ್ತು.

ಅಧ್ಯಕ್ಷ ಬಶರ್ ಅಲ್ ಅಸದ್ ಅವರನ್ನು ಪದಚ್ಯುತಗೊಳಿಸಲಾಗಿದ್ದು, ಜೈಲುಗಳಲ್ಲಿರುವ ಎಲ್ಲಾ ಬಂಧಿತರನ್ನು ಬಿಡುಗಡೆಗೊಳಿಸಲಾಗಿದ ಎಂದು ಬಂಡುಕೋರರ ಗುಂಪೊಂದು ಹೇಳಿಕೆ ನೀಡಿರುವ ವೀಡಿಯೊವನ್ನು ಸಿರಿಯಾ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಪ್ರಸಾರ ಮಾಡಿದೆ. ಸ್ವತಂತ್ರ ಸಿರಿಯಾದ ಎಲ್ಲಾ ಆಡಳಿತ ಸಂಸ್ಥೆಗಳನ್ನು ಸಂರಕ್ಷಿಸುವಂತೆ ಕರೆ ನೀಡಿದೆ.

ಬಂಡುಕೋರರು ಎಲ್ಲಾ ಕಡೆಗಳಿಂದಲೂ ದಮಾಸ್ಕಸ್ ನಗರವನ್ನು ಸುತ್ತುವರಿದಿದ್ದಾರೆ.

ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣವನ್ನು ವಶಪ ಡಿಸಿಕೊಂಡಿದ್ದಾರೆ ಹಾಗೂ ಸೇನಾ ಪ್ರಧಾನ ಕಚೇ ರಿಯನ್ನು ಕೂಡಾ ಅವರು ಸ್ವಾಧೀನಪಡಿಸಿಕೊಂಡಿ ದ್ದಾರೆ. ದಮಾಸ್‌ನಲ್ಲಿರುವ ಅಧ್ಯಕ್ಷರ ಅರಮನೆಗೆ ನುಗ್ಗಿರುವ ಜನರು ಅಲ್ಲಿನ ಪೀಠೋಪಕರಣಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳನ್ನು ಟಿವಿಜಾಲಗಳು ಪ್ರಸಾರ ಮಾಡಿವೆ.

Read These Next

ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷ; 47ನೇ ಅಧ್ಯಕ್ಷರಾಗಿ ಆಯ್ಕೆಯಾದ ರಿಪಬ್ಲಿಕನ್ ಅಭ್ಯರ್ಥಿ; ಕಮಲಾ ಹ್ಯಾರಿಸ್ ಕನಸು ಭಗ್ನ

ಅಮೆರಿಕದಲ್ಲಿ ಟ್ರಂಪ್ ಯುಗ ಪುನಾರಂಭಗೊಂಡಿದೆ. ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ...

ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತ: 100ಕ್ಕೂ ಹೆಚ್ಚು ಜನರ ದುರ್ಮರಣ, ಬೃಹತ್ ರಕ್ಷಣಾ ಕಾರ್ಯಾಚರಣೆ

ನೇಪಾಳದಲ್ಲಿ ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 60 ಜನರು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...

ಹಮಾಸ್ ಉನ್ನತ ನಾಯಕನ ಹತ್ಯೆ

ಟೆಹ್ರಾನ್‌:‌ ಇರಾನ್‌ ರಾಜಧಾನಿ ಟೆಹ್ರಾನ್‌ ನಲ್ಲಿ ಬುಧವಾರ ನಡೆದ ದಾಳಿಯಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ...