ಶೀಘ್ರ ಮರಳು ಸಮಸ್ಯೆ ಬಗೆಹರಿಸಿ:ತಾಲೂಕು ಕಟ್ಟಡ ಸಂಬಂಧಿತ ಎಲ್ಲಾ ಅಸೋಸಿಯೇಷನ್ ​​ವತಿಯಿಂದ ಮುಷ್ಕರಕ್ಕೆ ಎಚ್ಚರ

Source: S O News | By MV Bhatkal | Published on 11th October 2024, 9:12 PM | Coastal News |

ಭಟ್ಕಳ: ಈ ಹಿಂದೆ ಭಟ್ಕಳದಿಂದ ಮರಳು ಪಡೆದುಕೊಳ್ಳುತ್ತಿದ್ದ ಅಕ್ಕ ಪಕ್ಕದ ತಾಲೂಕಿನವರಿಂದ ನಮಗೆ ಈಗ ಅವರಿಂದ ಮರಳು ಲಭ್ಯತೆ ಸಿಗುವಂತೆ ನಮ್ಮಲ್ಲಿನ ಶಾಸಕರು, ಸಚಿವರು ಸರಕಾರವು ಹೆಚ್ಚಿನ ಮುತುವರ್ಜಿ ವಹಿಸಿ ಮರಳು ಸಾಗಾಟದ ನೀತಿಯನ್ನು ರಚಿಸಿ ಭಟ್ಕಳಕ್ಕೆ ಮರಳು ಸಿಗುವಂತೆ ಮಾಡಿ ಸಮಸ್ಯೆ ಪರಿಹರಿಸಿಕೊಡಬೇಕು ಇಲ್ಲವಾದಲ್ಲಿ ಎಲ್ಲಾ ಕಟ್ಟಡ ಸಂಬಂಧಿತ ಅಸೋಸಿಯೇಶನ್ ವತಿಯಿಂದ ಮುಷ್ಕರಕ್ಕೆ ಮುಂದಾಗಲಿದ್ದೇವೆಎಲ್ಲಾ ಕಟ್ಟಡ ಸಂಬಂಧಿತ ಅಸೋಸಿಯೇಶನ್ ವತಿಯಿಂದ ಮುಷ್ಕರಕ್ಕೆ ಮುಂದಾಗಲಿದ್ದೇವೆ ಎಂದು ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ನಾಯ್ಕ ಒತ್ತಾಯಿಸಿದರು.

ಅವರು ಗುರುವಾರದಂದು ಇಲ್ಲಿನ ಅಮೀನಾ ಪ್ಯಾಲೇಸನ ಪಾರ್ಕಿಂಗ್ ಹಾಲ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

'ಮರಳು ಒಂದು ನೈಸರ್ಗಿಕವಾದ ಸ್ವಾಭಾವಿಕ ವಸ್ತು ಆಗಿದ್ದು, ಆದರೆ ಇಲ್ಲಿ ತಾರತಮ್ಯ ನಡೆಯುತ್ತಿದೆ. ಮರಳಿನ ಸಮಸ್ಯೆ ಈ ಹಿಂದೆ ಇದ್ದರು ಸಹ ಈಗ ತೀವ್ರವಾಗಿದೆ. ಇದರಿಂದ ಕಟ್ಟಡ ಗುತ್ತಿಗೆದಾರರಿಗೆ, ಇಂಜಿನಿಯರ, ಆರ್ಕಿಟೆಕ್ಚರ, ಕಟ್ಟಡ ಕಾರ್ಮಿಕರಿಗೆ ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಅತೀ ಶೀಘ್ರವಾಗಿ ಇಲಾಖೆಯ ಅಧಿಕಾರಿಗಳು, ಶಾಸಕರು, ಸಚಿವರು ಸಮಸ್ಯೆ ಪರಿಹರಿಸಿಕೊಡಬೇಕೆಂದು ಆಗ್ರಹಿಸಿದ ಅವರು ಹೊನ್ನಾವರ, ಕುಂದಾಪುರ, ಉಡುಪಿ ಮತ್ತು ಮಂಗಳೂರು ಭಾಗದಿಂದ ಮರಳು ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಂಡಬೇಕು. ಇಲ್ಲವಾದಲ್ಲಿ ಉಳಿದ ಎಲ್ಲಾ ಕಟ್ಟಡ ಸಂಬಂಧಿತ ಅಸೋಸಿಯೇಶನ್ ವತಿಯಿಂದ ಮುಷ್ಕರಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ಅಸೋಸಿಯೇಷನ್ ಕಾರ್ಯದರ್ಶಿ ಸುರೇಶ ಪೂಜಾರಿ '‌ಈ ಕುರಿತು ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ. ಈ ಬಗ್ಗೆ ಮನವಿಯನ್ನು ಸಲ್ಲಿಸಿ ಅವರಿಗೆ ಮರಳು ಸಮಸ್ಯೆಯ ಕುರಿತು ಮನವರಿಕೆ ಮಾಡಲಿದ್ದೇವೆ. ನಮಗೆ ಶೀಘ್ರದಲ್ಲಿ ಕುಂದಾಪುರದಿಂದ ಮರಳು ಲಭ್ಯತೆ ಸಿಗುವಂತೆ ಮಾಡಿಕೊಡಬೇಕು ಎಂದರು. 

ಅಸೋಸಿಯೇಷನ್ ಸದಸ್ಯ ಮಿಸ್ಬ್ ಉಲ್ ಹಕ್ ಮಾತನಾಡಿ, ಮರಳು ನೀತಿಯಲ್ಲಿ ಸುಧಾರಣೆ ತಂದು ಆ ಮೂಲಕ ನಮ್ಮಲ್ಲಿನ ಸ್ವಾಭಾವಿಕ ಮರಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಎರಡು ಜಿಲ್ಲೆಯ ಮಧ್ಯೆ ಮರಳು ಸಾಗಾಟ ಪರವಾನಿಗೆ ನೀತಿ ಸರಳೀಕರಣಗೊಳಿಸಬೇಕು.  

ಕೇವಲ ನಮ್ಮ ಹೊನ್ನಾವರದ ಶರಾವತಿ ನದಿಯಿಂದನ್ನೇ  ಅವಲಂಬಿಸಿಕೊಳ್ಳುವ ಬದಲಿಗೆ ಪಕ್ಕದ ಕುಂದಾಪುರದಿಂದಲೂ ನಮಗೆ ಮರಳು ಸಿಗುವಂತಾಗಿ ಇಲ್ಲಿ ಕಾಮಗಾರಿಗಳು ಮತ್ತೆ ಶುರುವಾಗಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮರಳಿನ ವಿಚಾರದಲ್ಲಿ ಏಕಸ್ವಾಮ್ಯತೆ ನಡೆಸಬಾರದು. ನಮ್ಮ ತಾಲೂಕಿನಲ್ಲಿ  ಮೀನುಗಾರಿಕೆ ಮತ್ತು ಕಟ್ಟಡ ಕಾಮಗಾರಿಯನ್ನೇ ಅವಲಂಬಿತರಾಗಿದ್ದವರು ಹೆಚ್ಚಿದ್ದು, ನಮ್ಮಲ್ಲಿನ ಕಾರ್ಮಿಕರು ಉತ್ತಮ ಕೌಶಲ್ಯ ಇದ್ದವರಾಗಿದ್ದು ಅವರಿಗೆ ಕೆಲಸ ಸಿಗಬೇಕು. 

ಕರಾವಳಿಯಲ್ಲಿ ಮೀನುಗಾರಿಕೆಗಿಂತಲೂ ಹೆಚ್ಚು ಕಟ್ಟಡ ಕಾರ್ಮಿಕರು ಹೆಚ್ವಿನ ಸಂಖ್ಯೆಯಲ್ಲಿ ಅವಲಂಬನೆ ಜೊತೆಗೆ ಉದ್ಯೋಗ ಮಾಡುವವರು ಇದ್ದಾರೆ. ಲಾಭವು ಸಹ ಕಟ್ಟಡ ಕಾಮಗಾರಿಯಲ್ಲಿ ಜಾಸ್ತಿ ಇದೆ. ಒಂದು ಇಂಜಿನಿಯರ್ ಸಹಿತ ಕಾರ್ಮಿಕರ ತಂಡ ರಚಿಸಲು 10 ವರ್ಷಗಳು ತಗುಲಿದ್ದು, ಈಗ ಇಲ್ಲಿನ ಕಾರ್ಮಿಕರು ಹೋಟೆಲ್ ಸೇರಿದಂತೆ ಬೇರೆಡೆ ಜೀವನೋಪಾಯಕ್ಕೆ ತೆರಳುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ಉದ್ಯೋಗ ಇಲ್ಲದ ವೇಳೆ ಅವರೆಲ್ಲರು ಕಳ್ಳತನಕ್ಕಿಳಿಯುವಂತಹ ಪರಿಸ್ಥಿತಿ ಮಾಡಿದಂತಾಗುತ್ತದೆ. ನಮಗೆ ಅಕ್ಕ ಪಕ್ಕದ ತಾಲೂಕಾದ ಕುಂದಾಪುರ ಉಡುಪಿ ಕಡೆಯಿಂದ ಮರಳು ತರಲಿಕ್ಕೆ ಯಾಕೆ ಸಾಧ್ಯ ಆಗುತ್ತಿಲ್ಲ. ಕರಾವಳಿಯಲ್ಲಿ ಮೀನುಗಾರಿಕೆಯನ್ನು ಅಕ್ಕಪಕ್ಕದ ತಾಲೂಕಿನಲ್ಲಿ ನಡೆಸುತ್ತಾರೆ. ಅಲ್ಲಿ ಯಾವುದೇ ನಿರ್ಬಂಧವಿಲ. ಈ ಮರಳು ವಿಚಾರದಲ್ಲಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ತರಹ ಆಗುತ್ತಿದೆ. ಸರಕಾರವು ಉತ್ತಮ ಮರಳು ನೀತಿ ರಚಿಸಿ ನಮ್ಮ ರಾಜ್ಯದಲ್ಲಿಯೇ ಇರುವ ಉಡುಪಿ, ಕುಂದಾಪುರದಿಂದ ಮರಳು ಬರುವಂತೆ ಮಾಡಿದರೆ ಸಾಗಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿರಾಜುದ್ದೀನ್ ಮವ್ವಾನ್ ರಶೀದ್,  ಐಮನ್ ದಾತಾ, ಉಮರ ಮಿಸ್ಬಾ, ಉಸಾಮಾ ಅಜೇಬ್, ಮೊಹಮ್ಮದ್ ಸುರೇಮ್ ಮುಂತಾದವರು ಉಪಸ್ಥಿತರಿದ್ದರು

Read These Next

ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಮರಳು ಸಮಸ್ಯೆ ಶಾಶ್ವತ ಪರಿಹಾರವನ್ನು ಕೊಡಲು ಕಾರ್ಮಿಕರ ಒಕ್ಕೂಟದ ಆಗ್ರಹ

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಮೂಲ ವಸ್ತುವಾಗಿ ಅತೀ ಮುಖ್ಯ ಪಾತ್ರವಹಿಸಿದೆ. ಆದರೆ, ಸರಕಾರ ಮತ್ತು ಸ್ಥಳೀಯಾಡಳಿತದ ಅವೈಜ್ಞಾನಿಕ ...

ಕಾರವಾರ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೊಂದಣಿ ಕೇಂದ್ರ ತೆರೆಯಿರಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಲ್ಲಿ ಜಿಲ್ಲೆಯ ರೈತರಿಂದ ಭತ್ತ ಖರೀದಿ ಮಾಡುವ ಕುರಿತಂತೆ, ನೊಂದಣಿ ...

ಕಾರವಾರ: ಹಾಸ್ಟೆಲ್ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ : ಎಸ್.ಕೆ. ವಂಟಿಗೋಡಿ

ವಿದ್ಯಾಭ್ಯಾಸಕ್ಕಾಗಿ ತಮ್ಮ ಪೋಷಕರನ್ನು ಬಿಟ್ಟು ಬಂದು ಹಾಸ್ಟೆಲ್ ಗಳಲ್ಲಿ ನೆಲೆಸಿ, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ...

ಕಾರವಾರ: ಜೈಲಿನ ಕಿಟಕಿಗಳಿಗೆ ಮೇಶ್ ಹಾಕಿಸಿ, ಗೋಡೆಗಳಿಗೆ ಪೈಂಟ್ ಮಾಡಿಸಿ : ಎಸ್.ಕೆ. ವಂತಿಕೋಡಿ

ಕಾರವಾರ ಜಿಲ್ಲಾ ಕಾರಾಗೃಹದ ನಿವಾಸಿಗಳಿಗೆ ಸೊಳ್ಳೆ ಕಡಿತವಾಗದಂತೆ ತಡೆಯಲು ಜೈಲಿನ ಕಿಟಕಿಗಳಿಗೆ ಸೊಳ್ಳೆಗಳು ಬಾರದಂತೆ ಮೆಶ್ ಹಾಕಿಸಿ ...