ರಿಯಾದ್:ಏಜೆಂಟರಿಂದ ಮೋಸಕ್ಕೊಳಗಾಗಿದ್ದ ದಂಪತಿ ಐ ಎಸ್ ಎಫ್ ನೆರವಿನಿಂದ ಮರಳಿ ಮನೆಗೆ

Source: ISF RIYADH | By Arshad Koppa | Published on 18th September 2017, 8:19 AM | Gulf News | Special Report | Guest Editorial |

ರಿಯಾದ್: ಇಂಡಿಯನ್ ಸೋಶಿಯಲ್ ಫಾರಂ ನೆರವಿನಿಂದ ಸುಖಾಯಾಂತ್ಯ ಗೊಂಡ ಬೆಂಗಳೂರು ಮೂಲದ ದಂಪತಿಗಳ  ಪ್ರಕರಣ 


ಬೆಂಗಳೂರು ಮೂಲದ ಚಾಂದ್ ಪಾಶ ಮತ್ತು ಅವರ ಆಮಿನಾಬಿ ದಂಪತಿಗಳು ಏಜೆಂಟಿನ ಮಾತಿಗೆ ಮರುಳಾಗಿ ಸೌದಿ ಅರೇಬಿಯಾದ ಪ್ರಾಯೋಜಕನ ಮನೆಯಲ್ಲಿ ಖಾಸಗಿ ವಾಹನ ಚಾಲಕ ಮತ್ತು ಮನೆ ಕೆಲಸವನ್ನು ಮಾಡುವ ಸಲುವಾಗಿ  ರಿಯಾದಿಗೆ ಬಂದಿದ್ದರು.
ಆದರೆ ಇವರ ಪ್ರಯೋಜಕನು ಈ ದಂಪತಿಗಳಿಗೆ  ಕೆಲಸ ನೀಡಲು ನಿರಾಕರಿಸಿ, ವಾಸ್ತವ್ಯ ಕಾರ್ಡ್(ಇಕಾಮ)  ಮತ್ತು ಪಾಸ್ ಪೊರ್ಟ್ ನೀಡದೆ. ಇವರ ಬಿಡುಗಡೆಗಾಗಿ ಸುಮಾರು 18 ಸಾವಿರ  ರಿಯಾಲಿನ ಬೇಡಿಕೆ ಇಟ್ಟಿದ್ದನು
 ವಿದೇಶದಲ್ಲಿ ಕಂಗಾಲಾದ ದಂಪತಿಗಳು  ತಿನ್ನಲು ಆಹಾರ ಮತ್ತು ಇರಲು ಮನೆ ಇಲ್ಲದೆ, ಅಲ್ಲಲ್ಲಿ ಬೇಡುತ್ತ ಬೀದಿಗಳಲ್ಲಿ ಅತ್ಯಂತ ಶೋಚನೀಯವಾಗಿ  ದಿನಗಳನ್ನು ಕಳೆಯುತ್ತಿದ್ದರು.


ಈ ಪ್ರಕರಣವನ್ನು ಕೈಗೆತ್ತಿಕೊಂಡ ಇಂಡಿಯನ್ ಸೋಶಿಯಲ್ ಫಾರಂ ರಿಯಾದ್ ಘಟಕದ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಅಬ್ದುಲ್ ಸಾಬಿತ್ ಬಜ್ಪೆ ರವರ ಜೊತೆಗಿನ ತಂಡವು ದಂಪತಿಗಳಿಗೆ ಸಾಂತ್ವನ ಹೇಳಿ, ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿ, ಈಗಾಗಲೇ ಆಮೀನಾಬಿ ಯವರನ್ನುಇಂಡಿಯನ್ ಸೋಶಿಯಲ್ ಫಾರಂನ ಪ್ರಯತ್ನದಿಂದ ಸ್ವದೇಶಕ್ಕೆ ಕಳುಹಿಸಿಕೊಡಲಾಗಿತ್ತು.
ಆದರೆ ಚಾಂದ್ ಪಾಷಾರವರ ದಾಖಲೆಪತ್ರ ಗಳಲ್ಲಿ ಕೊಂಚ ಸಮಸ್ಯೆಗಳಿದ್ದ ಕಾರಣ ಚಾಂದ್ ಪಾಷಾರವರು ಸೌದಿಯಲ್ಲೇ ಉಳಿಯಬೇಕಾಯಿತು.
ಇನ್ನು ಚಾಂದ್ ಪಾಷಾ ರವರಿಗೆ ಭಾರತಕ್ಕೆ ಕಳುಹಿಸಿಕೊಡಲು, ಮತ್ತು ಸಮಸ್ಯೆ ಬಗೆಹರಿಯುವತನಕ ಇರಲು ರೂಮ್ ಮಾತ್ತು ಊಟದ ವ್ಯವಸ್ಥೆ ಯನ್ನು ಫಾರಂನ ವತಿಯಿಂದ ಮಾಡಲಾಯಿತು.
ಇವರ ದಾಖಲೆ ಮತ್ತು ಪಾಸ್ಪೋರ್ಟ್ ಗಳನ್ನು ಸರಿಪಡಿಸುವ ಸಲುವಾಗಿ ಇಂಡಿಯನ್ ಸೋಶಿಯಲ್ ಫಾರಂನ ಅಬ್ದುಲ್ ಸಾಬಿತ್ ಬಜ್ಪೆ ರವರು ಸಾಕಷ್ಟು ಬಾರಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪಾಸ್ಪೋರ್ಟ್ ಮತ್ತು ಇತರ ದಾಖಲೆಗಳನ್ನು ಸರಿಪಡಿಸಲಾಯಿತು. 
ಹಾಗೇ ಭಾರತೀಯ ರಾಯಭಾರಿ ಕಚೇರಿಯ ನಿದರ್ಶನದಂತೆ ಚಾಂದ್ ಪಾಷಾರವರನ್ನು ತರ್ಹಿಲ್ ಮೂಲಕ  ಭಾರತಕ್ಕೆ ಕಳುಹಿಸಿಕೊಡಲು ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಯಿತು
ಅಂತಿಮವಾಗಿ ಚಾಂದ್ ಪಾಷಾರವರನ್ನು ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿ ಕೊಡುವಲ್ಲಿಇಂಡಿಯನ್ ಸೋಶಿಯಲ್ ಫಾರಂ ಯಶಸ್ವೀ ಯಾಗಿದೆ.

Read These Next

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...