ಭಟ್ಕಳ : ಪುರಸಭೆ ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಲೋಕಾಯುಕ್ತ ಬಲೆಗೆ ಬಿದ್ದವರು. ಮೊಹ್ಮದ ಇದ್ರಿಸ್ ಮೋಹತೇಶಾಮ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕಾರವಾರ ಲೋಕಾಯುಕ್ತ ತಂಡ ಇಂದು ದಾಳಿ ನಡೆಸಿತು.
ನೀಲಕಂಠ ಮೇಸ್ತಾ ಅವರು ಗುಳ್ಮಿಯಲ್ಲಿ ಒಳಚರಂಡಿ ಜೋಡಣೆಗೆ 3 ಲಕ್ಷ ರೂ. ಲಂಚ ಕೇಳಿದ್ದರು. ಈಗಾಗಲೇ 2 ಲಕ್ಷ ಹಣವನ್ನು ನೀಡಿದ್ದು ಇಂದು 50 ಸಾವಿರ ಹಣ ನೀಡುವ ವೇಳೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಸದ್ಯ ಪುರಸಭೆ ಕಚೇರಿಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.