ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಏನು ಸಂಬಂಧ?: ರಾಹುಲ್ ಗಾಂಧಿ

Source: Vb | By I.G. Bhatkali | Published on 7th June 2024, 12:36 PM | National News |

ಹೊಸದಿಲ್ಲಿ: ಎಕ್ಸಿಟ್ ಪೋಲ್ ಘೋಷಣೆಯ ಒಂದು ದಿನ ಮೊದಲು ಶೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ, ಕೋಟಿಗಟ್ಟಲೆ ಲಾಭ ಮಾಡಿಕೊಂಡ ಶಂಕಿತ ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಏನು ಸಂಬಂಧ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆಗೆ ಅವರು ಒತ್ತಾಯಿಸಿದ್ದಾರೆ.

ದಿಲ್ಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿದ ಮಾತನಾಡಿದರು. ಇದೇ ಮೊದಲ ಬಾರಿಗೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಪ್ರಧಾನಿ, ಗೃಹ ಸಚಿವ, ವಿತ್ತ ಸಚಿವೆ ಶೇರು ಮಾರುಕಟ್ಟೆಯ ಬಗ್ಗೆ ಮಾತ ನಾಡಿದ್ದಾರೆ. ಪ್ರಧಾನಿ ಸುಮಾರು ನಾಲ್ಕು ಬಾರಿ ಶೇರು ಮಾರುಕಟ್ಟೆಯನ್ನು ಉಲ್ಲೇ ಖಿಸಿ, ಅದು ವೇಗವಾಗಿ ಬೆಳೆಯಲಿದೆ, ಹೂಡಿಕೆ ಮಾಡಿ ಎಂದು ಸಲಹೆ ನೀಡಿ ದ್ದರು'' ಎಂದು ರಾಹುಲ್ ಹೇಳಿದ್ದಾರೆ. ''ಜೂನ್ 4ಕ್ಕಿಂತ ಮುಂಚೆ ಶೇರು ಖರೀದಿಸಿ ಎಂದು ಮೇ 13 ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮೇ 19ಕ್ಕೆ ಅಮಿತ್ ಶಾ ಶೇರು ಮಾರುಕಟ್ಟೆ ಜೂನ್ 4ಕ್ಕೆ ದಾಖಲೆ ನಿರ್ಮಿಸಲಿದೆ ಎಂದಿದ್ದರು. ಜೂನ್ 1ಕ್ಕೆ ಕೊನೆಯ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಮಾಧ್ಯಮಗಳ ಸುಳ್ಳು ಎಕ್ಸಿಟ್ ಪೋಲ್‌ಗಳು ಬಂದವು.

ಬಿಜೆಪಿಯ ಅಧಿಕೃತ ಸಮೀಕ್ಷೆಗಳು 220 ಸ್ಥಾನಗಳನ್ನು ಅವರಿಗೆ ನೀಡಿದ್ದವು. ಈ ಮಾಹಿತಿ ಬಿಜೆಪಿ ನಾಯಕರ ಕೈಯಲ್ಲಿ ಇತ್ತು. ಆದರೂ ಸುಳ್ಳು ಸಮೀಕ್ಷೆಗಳು ಹೊರಬಂದವು. ಪರಿಣಾಮವಾಗಿ ಜೂನ್ 3ಕ್ಕೆ ಶೇರು ಮಾರುಕಟ್ಟೆಯ ವಹಿವಾಟು ಒಮ್ಮೆಲೆ ಗಗನಕ್ಕೇರಿತು ಎಂದು ರಾಹುಲ್ ಗಾಂಧಿ ಅಂಕಿ ಅಂಶಗಳನ್ನು ವಿವರಿಸಿದರು.

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಏಕೆ ನೀಡಿದ್ದಾರೆ? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಆ ಸಂದರ್ಶನಗಳನ್ನು ಶೇರು ಮಾರುಕಟ್ಟೆಯಲ್ಲಿ ಸ್ಟಾಕ್‌ಗಳನ್ನು ತಿರುಚಿದ್ದಕ್ಕಾಗಿ 'ಸೆಬಿ' ತನಿಖೆಗೆ ಒಳಪಟ್ಟಿರುವ ಉದ್ಯಮಿಯ ಒಡೆತನದ ಮಾಧ್ಯಮಕ್ಕೆ ನೀಡಲಾಗಿತ್ತು'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನ ಸೆಳೆದರು.

'ಸುಳ್ಳು ಅಂಕಿ ಅಂಶಗಳಿದ್ದ ಎಕ್ಸಿಟ್ ಪೋಲ್‌ಗಳನ್ನು ಘೋಷಿಸುವ ಒಂದು ದಿನ ಮೊದಲು ಶೇರು ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಹೂಡಿಕೆ ಮಾಡಿದ ಶಂಕಿತ ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಇರುವ ಸಂಬಂಧವೇನು? ಈ ಬಗ್ಗೆ ನಾವು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸುತ್ತೇವೆ'' ಎಂದು ರಾಹುಲ್ ಹೇಳಿದರು.

ರಾಹುಲ್ ಪ್ರಶ್ನೆಗಳು
1 ಶೇರು ಮಾರುಕಟ್ಟೆಯಲ್ಲಿ • ಹೂಡಿಕೆ ಮಾಡುವ 5 ಕೋಟಿ ಕುಟುಂಬಗಳಿಗೆ ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಪ್ರಧಾನಿ ಮತ್ತು ಗೃಹ ಸಚಿವರು ಯಾಕೆ ನೀಡಿದರು? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ?

2 ಎರಡೂ ಸಂದರ್ಶನಗಳನ್ನು, • ಶೇರು ಮಾರುಕಟ್ಟೆಯಲ್ಲಿ ಹಸ್ತ ಕ್ಷೇಪ ಮಾಡಿರುವುದಕ್ಕಾಗಿ ಸೆಬಿಯಿಂದ ವಿಚಾರಣೆ ಎದುರಿಸುತ್ತಿರುವ ಉದ್ಯಮ ಸಮೂಹದ ಒಡೆತನದ ಮಾಧ್ಯಮ ಗುಂಪಿಗೆ ಯಾಕೆ ನೀಡಲಾಯಿತು?

ಬಿಜೆಪಿ, ನಕಲಿ ಮತದಾನೋ 3 ತರ ಸಮೀಕಕರು ಮತ್ತು ಸಂಶಯಾಸ್ಪದ ವಿದೇಶಿ ಹೂಡಿಕೆದಾರರ ನಡುವಿನ ಸಂಬಂಧವೇನು?

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...