ಭಟ್ಕಳ: ಹಾಡುವಳ್ಳಿಯಲ್ಲಿ ಸಚಿವ ಮಂಕಾಳ ವೈದ್ಯರಿಂದ ಜನಸ್ಪಂದನಾ ಸಭೆ

Source: S O News | By MV Bhatkal | Published on 23rd October 2024, 12:05 PM | Coastal News |

ಭಟ್ಕಳ: ಸಚಿವ ಮಂಕಾಳ್. ಎಸ್ ವೈದ್ಯರು ತಮ್ಮ ಕ್ಷೇತ್ರದ ಜನರ ಕುಂದೂ ಕೊರತೆಯನ್ನು ಆಲಿಸುವ ನಿಟ್ಟಿನಲ್ಲಿ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದ ಸಚಿವರ ಜನಸ್ಪಂದನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಸಚಿವ ಮಂಕಾಳ್ ಎಸ್ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನನ್ನ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈಗಾಗಲೇ ಅನೇಕ ಪಂಚಾಯತಗಳಲ್ಲಿ  ಈ ಕಾರ್ಯಕ್ರಮ ಮುಗಿದ್ದು ಇನ್ನು ಅನೇಕ ಪಂಚಾಯತಗಳಲ್ಲಿ ಕಾರ್ಯಕ್ರಮ ಮಾಡುವುದು ಬಾಕಿ ಇದೆ. ವಾರದಲ್ಲಿ ಒಂದು ದಿನ ಭಟ್ಕಳ ಹಾಗೂ ಒಂದು ಹೊನ್ನಾವರದಲ್ಲಿ ಕಾರ್ಯಕ್ರಮ ಮಾಡಬೇಕೆಂದು ತೀರ್ಮಾನ ಮಾಡಿದ್ದೇನೆ. ನನ್ನ ಕ್ಷೇತ್ರ ಜನತೆ ಯಾವುದೇ ಸೌಕರ್ಯದಿಂದ ವಂಚಿತರಾಗ ಬಾರದು. ನಾನು ಇಂದಿಗೂ ನಿಮ್ಮ ಹೃದಯದಲ್ಲಿ ಇದ್ದೇನೆ ಎಂದು ಹೇಳಿದರು. 

ಗ್ರಾಮೀಣ ಭಾಗದಿಂದ ಜನರು ಪಟ್ಟಣಕ್ಕೆ ಬಂದು ಸಮಸ್ಯೆ ಹೇಳಿಕೊಳ್ಳಲು ತೊಂದರೆ ಆಗಬಾರದು ಅನ್ನುವ ಉದ್ದೇಶದಿಂದ ಹಳ್ಳಿಯ ಕಡೆ ಸಭೆ ಏರ್ಪಡಿಸಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಗೆ ಇದ್ದ ತೊಡಕು ನಿವಾರಿಸಿ ಮೂಲಭೂತ ಸೌಕರ್ಯ ಕಲ್ಪಿಸಲಾಗುವದು. ರಸ್ತೆ ನಿರ್ಮಾಣ, ಬೀದಿ ದೀಪ, ಗಂಗಾ ಕಲ್ಯಾಣ, ಪೂಟ್ ಬ್ರೀಜ್, ಸೇತುವೆ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವದು. ಅಲ್ಲದೆ ಸ್ಥಳೀಯವಾಗಿ ಸಮಸ್ಯೆಗಳಿದ್ದರೂ ಸಾರ್ವಜನಿಕರು ತಿಳಿಸಿದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವದು ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮದ ಮುಗಿದ ಬಳಿಕ  ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಚಿವರಿಗೆ  ಸಲ್ಲಿಸಿದರು. 
ಕೆಲವು ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲಿ ಪರಿಹಾರ ಸೂಚಿಸಿದರೆ, ಇನ್ನೂ ಹಲವು ಸಮಸ್ಯೆಗಳನ್ನು ತಮ್ಮ ಆಪ್ತ ಸಹಾಕರ ಬಳಿ ತಿಳಿಸಿ ಅದರ ಫಾಲೊ ಆಫ್ ಮಾಡಿ ಸಮಯ ಸಮಯಕ್ಕೆ ತನ್ನ ಗಮನಕ್ಕೆ ತರುವಂತೆ ಸೂಚಿಸಿದರು.

ಇದಕ್ಕೂ ಪೂರ್ವದಲ್ಲಿ ಗ್ರಂಥಾಲಯ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಕೆರಮ್ ಆಟವಾಡುವದರ ಮೂಲಕ ಸ್ಥಳೀಯರ ಗಮನ ಸೆಳೆದರು.  ಬಳಿಕ ಭಟ್ಕಳದ ಸಚಿವರ ಕಾರ್ಯಲಯದಲ್ಲಿ ಜನಸ್ಪಂದನ ಸಭೆ ಮುಂದುವರೆದಿದ್ದು ಕುಮಟಾ, ಅಂಕೋಲಾದ ಮೀನುಗಾರರು ಸಚಿವರೊಂದಿಗೆ ಚರ್ಚೆ ನಡೆಸಿದರು. 

ಈ ಸಂದರ್ಬದಲ್ಲಿ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಂಜಪ್ಪ ನಾಯ್ಕ, ಪಿ.ಎ ನಾಗರಾಜ ನಾಯ್ಕ, ನಾಗೇಂದ್ರ ಮೊಗೇರ,  ಸುಧಾ ನಾಯ್ಕ ಇತರರು ಇದ್ದರು.

Read These Next

ಕಾರವಾರ: ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಮತ್ತು ಪರಿಸರ ಸ್ನೇಹಿಯಾಗಿ ಆಚರಿಸಿ; ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

ತಿ ವರ್ಷವು ದೀಪಾವಳಿ ಹಬ್ಬವನ್ನು ಸಾಂಪ್ರ‍್ರದಾಯಿಕವಾಗಿ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬವನ್ನು ದೀಪಗಳ ಸಾಲಿನ ...