ಎಲ್ಲ ಖಾಸಗಿ ಆಸ್ತಿಗಳ ಸ್ವಾಧೀನಕ್ಕೆ ರಾಜ್ಯ ಸರಕಾರಗಳಿಗೆ ಅಧಿಕಾರ ಇಲ್ಲ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Source: Vb | By I.G. Bhatkali | Published on 6th November 2024, 10:10 AM | National News |

ಹೊಸದಿಲ್ಲಿ: ಖಾಸಗಿ ಒಡೆತನದ ಎಲ್ಲಾ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲವೆಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಆದರೆ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಸಮುದಾಯದ ಒಳಿತಿಗಾಗಿ ಖಾಸಗಿ ಒಡೆತನದ ಕೆಲವು ಆಸ್ತಿಗಳನ್ನು ಅವು ವಶಪಡಿಸಿಕೊಳ್ಳಬಹುದಾಗಿದೆ. ಆದರೆ ವ್ಯಕ್ತಿ ಒಡೆತನದ ಆಸ್ತಿಯನ್ನು ಸಾಮುದಾಯಿಕ ಆಸ್ತಿಯೆಂದು ಪರಿಗಣಿಸಲಾಗದೆಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ 9 ಮಂದಿ ಸದಸ್ಯರ ನ್ಯಾಯಪೀಠವು 7:2 ಬಹುಮತದ ತೀರ್ಪಿನಲ್ಲಿ ತಿಳಿಸಿದೆ.

ಸಂವಿಧಾನದ ವಿಧಿ 39(ಬಿ) ಅಡಿ ರಾಜ್ಯಗಳು ಸಾರ್ವ ಜನಿಕ ಹಂಚಿಕೆಗಾಗಿ ಎಲ್ಲಾ ಖಾಸಗಿ ಒಡೆತನದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದೆಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೇತೃತ್ವದ ಪೀಠವು 1978ರಲ್ಲಿ ನೀಡಿದ್ದ ಆದೇಶವನ್ನು ಭಾರತದ ಮುಖ್ಯನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠವು ಈ ತೀರ್ಪಿನ ಮೂಲಕ ತಳ್ಳಿಹಾಕಿದೆ.

ಖಾಸಗಿ ಸೊತ್ತನ್ನು ಸ್ವಾಧೀನಪಡಿಸುವುದೇ ಸರಕಾರದ ಅಂತಿಮ ಗುರಿಯೆಂದು ಪರಿಗಣಿಸುವ ಆರ್ಥಿಕ ಸಿದ್ಧಾಂತವನ್ನು ಹೇರುವುದರಿಂದ ನಮ್ಮ ಸಂವಿಧಾನದ ಚೌಕಟ್ಟಿನಲ್ಲಿರುವ ಮೌಲ್ಯಗಳು ಹಾಗೂ ಸಿದ್ಧಾಂತಗಳನ್ನು ಕಡೆಗಣಿಸಿದಂತಾಗುತ್ತದೆ ಎಂದು ಸಿಜೆಐ ಚಂದ್ರಚೂಡ್ ಅವರು ತೀರ್ಪಿನಲ್ಲಿ ಪ್ರತಿಪಾದಿಸಿದ್ದಾರೆ.

ಪ್ರಕರಣದ ಆಲಿಕೆಯ ಸಂದರ್ಭ ಭಾರತ ಒಕ್ಕೂಟ ಸರಕಾರದ ಪರವಾಗಿ ವಾದಿಸಿದ ಅಟಾರ್ನಿ ಜನರಲ್ ಅವರು, ಭೌತಿಕ ಜಗತ್ತಿನಲ್ಲಿ ಲಭ್ಯವಿರುವ ಎಲ್ಲಾವಸ್ತುಗಳು ಹಾಗೂ ಮಾನವ ಸಂವಹನ ಅಥವಾ ಒಪ್ಪಂದದ ಮೂಲಕ ಲಭ್ಯವಾಗುವ ಎಲ್ಲಾ ಸೊತ್ತುಗಳು ಸಮುದಾಯದ ಭೌತಿಕ ಸೊತ್ತುಗಳೆನಿಸುತ್ತವೆ ಎಂದು ವಾದಿಸಿದ್ದರು.

ಆಗ ಸಿಜೆಐ ಅವರು ಮಧ್ಯಪ್ರವೇಶಿಸಿ, ಸೆಮಿಕಂಡಕ್ಟರ್ ಚಿಪ್‌ಗಳು ಅಥವಾ ಮೊಬೈಲ್‌ಫೋನ್‌ಗಳಂತಹ ಕಾರ್ಪೊರೇಟ್ ಸಂಸ್ಥೆಗಳು ಸೃಷ್ಟಿಸಿದ ಸಂಪನ್ಮೂಲಗಳನ್ನು ಕೂಡಾ ಸಮುದಾಯದ ಸಂಪನ್ಮೂಲಗಳೆಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದರು.

“ಉದಾಹರಣೆಗೆ ನನ್ನ ಸ್ವಂತ ಆದಾಯದಿಂದ ಮನೆ ಯೊಂದನ್ನು ನಾನು ನಿರ್ಮಿಸಿದೆ. ಆದರೆ ಅದು ಸಮುದಾಯದ ಸೊತ್ತೆನಿಸಿಕೊಳ್ಳುತ್ತದೆಯೇ?, ನನ್ನ ಒಡೆತನದ ಕಾರು, ಸಮುದಾಯದ ಭೌತಿಕ ಸಂಪನ್ಮೂಲವೆನಿಸುತ್ತದೆಯೇ? ಅಂದರೆ ಖಾಸಗಿ ಸೊತ್ತು ಎಂಬ ಪರಿಕಲ್ಪನೆಯೆಂಬುದೇ ಇಲ್ಲವೇ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದರು.

Read These Next

ಸೈಬ‌ರ್ ಕ್ರೈಂ ವಿರುದ್ಧ ಎಚ್ಚರವಿರಲಿ; ಜನತೆಗೆ ಮೋದಿ ಕರೆ 'ಡಿಜಿಟಲ್ ಬಂಧನ' ದ ಬೆದರಿಕೆಗೆ ಬಲಿಪಶುವಾಗದಂತೆ ಕಿವಿಮಾತು

ಡಿಜಿಟಲ್ ಬಂಧನ ದಂತಹ ಸೈಬ‌ರ್ ಅಪರಾಧಗಳು ಸಮಾಜದ ಎಲ್ಲಾ ವರ್ಗಗಳನ್ನು ಬಾಧಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ...

ಗುಂಪಿನಿಂದ ಹತ್ಯೆ ಪ್ರಕರಣ; ವಲಸೆ ಕಾರ್ಮಿಕನ ಮನೆಯಲ್ಲಿ ಪತ್ತೆಯಾಗಿದ್ದ ಮಾಂಸ ಬೀಫ್ ಅಲ್ಲ: ಪೊಲೀಸ್

ಹರ್ಯಾಣದ ಚರ್ಖಿ ದಾದ್ರಿ ಜಿಲ್ಲೆಯಲ್ಲಿ ಬೀಫ್ ಸೇವಿಸಿದ್ದ ಆರೋಪದಲ್ಲಿ 26ರ ಹರೆಯದ ವಲಸೆ ಕಾರ್ಮಿಕನನ್ನು ಗುಂಪೊಂದು ಥಳಿಸಿ ಹತ್ಯೆಗೈದ ...