ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಎರಡನೇ ದಿನದಾಟದಲ್ಲಿ ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ ಸಾಧಿಸಿದೆ.
ಪುರುಷರ ವಿಭಾಗದಲ್ಲಿ ಕೆನರಾ ಬ್ಯಾಂಕ್ ತಂಡವು ರಾಜಸ್ಥಾನ ತಂಡವನ್ನು 35-20, 35-09 ನೇರ ಸೆಟ್‍ಗಳ ಅಂತರದಲ್ಲಿ ಹಾಗೂ ಒಡಿಶಾ ತಂಡವನ್ನು 35-26, 35-16 ಅಂತರದಲ್ಲಿ ಮಣ ಸಿತು. ಭಾರತೀಯ ರೈಲ್ವೇ ತಂಡವು ತೆಲಂಗಾಣ ತಂಡವನ್ನು 35-24, 35-19 ಅಂತರದಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಕರ್ನಾಟಕ ತಂಡವು ಚತ್ತೀಸ್‍ಗಢ ತಂಡವನ್ನು 35-18, 35-20 ಅಂತರದಲ್ಲಿ ಮಣ ಸಿತು
ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡವು ತೆಲಂಗಾಣ ತಂಡವನ್ನು 35-06, 35-18 ಅಂತರದಿಂದ ಸೋಲಿಸಿತು. ಈ ಮೂಲಕ ಕರ್ನಾಟಕದ ಮಹಿಳಾ ಹಾಗೂ ಪುರುಷರ ತಂಡ ಅರ್ಹತೆಯ ಜಯ ದಾಖಲಿಸಿಕೊಂಡಿದೆ. ನಾಳೆ ಸಂಜೆ ಕ್ವಾಟರ್ ಫೈನಲ್ಸ್ ಪಂದ್ಯಾಟ ನಡೆಯಲಿದೆ.
ಇತರ ಫಲಿತಾಂಶ:
ಪುರುಷರ ವಿಭಾಗ:
ಆಂಧ್ರ ಪ್ರದೇಶ ತಂಡ ಮುಂಬೈ ತಂಡವನ್ನು 35-15, 35-20, ಹರಿಯಾಣ ತಂಡ ತ್ರಿಪುರಾ ತಂಡವನ್ನು 35-19, 35-18 ಅಂತರದಲ್ಲಿ, ರಾಜಸ್ಥಾನ ತಂಡ ಪಶ್ಚಿಮ ಬಂಗಾಳ ತಂಡವನ್ನು 30-35, 36-36 ಅಂತರದಲ್ಲಿ, ಕೇರಳ ತಂಡವು ಚಂಡೀಗಢ ತಂಡವನ್ನು 35-15, 35-17 ಅಂತರದಲ್ಲಿ, ಡಿಪಾರ್ಟ್‍ಮೆಂಟ್ ಆಫ್ ಅಟೋಮಿಕ್ ಎನರ್ಜಿ ತಂಡವು ಲಡಾಕ್ ತಂಡವನ್ನು 35-08, 35-22 ಅಂತರದಲ್ಲಿ, ಬಿಹಾರ ತಂಡವು ಎನ್‍ಸಿಆರ್ ತಂಡವು 35-29, 35-24 ಅಂತರದಿಂದ, ಹರಿಯಾಣ ತಂಡವು ಡಿಪಾರ್ಟ್‍ಮೆಂಟ್ ಆಫ್ ಅಟೋಮಿಕ್ ಎನರ್ಜಿ ತಂಡವನ್ನು 35-26, 35-30 ಅಂತರದಿಂದ, ಪಶ್ಚಿಮ ಬಂಗಾಳ ತಂಡವು ತ್ರಿಪುರಾ ತಂಡವನ್ನು 35-23, 35-26 ಅಂತರದಿಂದ, ಕೇರಳ ತಂಡವು ಮಧ್ಯಪ್ರದೇಶ ತಂಡವನ್ನು 35-07, 35-09 ಅಂತರದಿಂದ, ಜಮ್ಮು ಕಾಶ್ಮೀರ ತಂಡವು ಉತ್ತರ ಪ್ರದೇಶ ತಂಡವನ್ನು 35-28, 35-24 ಅಂತರದಿಂದ, ಹಿಮಾಚಲ ಪ್ರದೇಶ ತಂಡವು ಗುಜರಾತ್ ತಂಡವನ್ನು 36-34, 35-26 ಅಂತರದಿಂದ, ಚಂಢೀಗಡ ತಂಡವು ಮಧ್ಯಪ್ರದೇಶ ತಂಡವನ್ನು 35-22, 35-28 ಅಂತರದಿಂದ, ಪುದುಚೆರಿ ತಂಡವು ಗುಜರಾತ್ ತಂಡವನ್ನು 35-14, 35-19 ಅಂತರದಿಂದ, ಹರಿಯಾಣ ತಂಡವು ಜಾರ್ಖಂಡ್ ತಂಡವನ್ನು 35-17, 35-21 ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದವು.
ಮಹಿಳಾ ವಿಭಾಗ
ಜಾರ್ಖಂಡ್ ತಂಡವು ತ್ರಿಪುರಾ ತಂಡವನ್ನು 35-06, 35-18 ಅಂತರದಿಂದ, ಕೇರಳ ತಂಡವು ಪಂಜಾಬ್ ತಂಡವನ್ನು 35-21, 35-18 ಅಂತರದಿಂದ, ಪಶ್ಚಿಮ ಬಂಗಾಳ ತಂಡವು ಹರಿಯಾಣ ತಂಡವನ್ನು 35-23, 35-17 ಅಂತರದಿಂದ, ಮುಂಬೈ ತಂಡವು ದೆಹಲಿ ತಂಡವನ್ನು 35-30, 35-31 ಅಂತರದಿಂದ, ತಮಿಳುನಾಡು ತಂಡವು ಬಿಹಾರ ತಂಡವನ್ನು 35-29, 35-20 ಅಂತರದಲ್ಲಿ ಮಣ ಸಿತು.