ಭಟ್ಕಳ: ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ದೇಶದ ಉಚ್ಚನ್ಯಾಯಾಲಯದ ನಿರ್ಣಯಕ್ಕೆ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಬದ್ದವಾಗಿರುತ್ತದೆ ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ವಲಿ ರಹ್ಮಾನಿ ಹೇಳಿದರು.
ಅವರು ಗುರುವಾರ ಇಲ್ಲಿನ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ಉಂಟಾಗಿರುವ ಈ ಸಂದರ್ಭದಲ್ಲಿ ಬೋರ್ಡ್‌ನ ಹೇಳಿಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.
ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿ ಅಸಾಧ್ಯವಾಗಿದ್ದು ಸರ್ಕಾರ ಯಾವ ಅದರ ಸ್ವರೂಪವನ್ನು ಸ್ಪಷ್ಟಪಡಿಸಬೇಕು. ಭಾರತೀಯ ಸಂವಿಧಾನ ಇಲ್ಲಿನ ಪ್ರತಿಯೊಬ್ಬರಿಗೆ ತಮ್ಮ ಧರ್ಮದಂತೆ ಜೀವಿಸುವ ಹಕ್ಕನ್ನು ನೀಡುತ್ತದೆ. ಸರ್ಕಾರ ಸಮಾನ ನಾಗರೀಕ ಸಂಹಿತೆ ಜಾರಿಗೊಳಿಸಲು ಮುಂದಾಗಿರುವುದು ಸಂವಿಧಾನ ತನ್ನ ದೇಶದ ನಾಗರಿಕರಿಗೆ ನೀಡಿರುವ ಹಕ್ಕುಗಳ ದಮನ ಮಾಡಿದಂತಾಗುತ್ತದೆ ಎಂದ ಅವರು ಸುಪ್ರಿಮ್ ಕೋರ್ಟ್ ನಿರ್ಣಯ ನಾವು ಗೌರವಿಸುತ್ತೇವೆ. ಕೆಲವರು ಮನಸ್ಸಿಗೆ ಬಂದಂತೆ ಮುಸ್ಲಿಮ್ ಪರ್ಸನಲ್ ಲಾ ವನ್ನು ವ್ಯಾಖ್ಯಾನಿಸುತ್ತಿದ್ದಾರೆ. ಇದು ಇಸ್ಲಾಮ್ ಧರ್ಮದ ಕುರಿತ ಅಲ್ಪಜ್ಞಾನದ ಪರಿಣಾವಾಗಿದೆ ಎಂದ ಅವರು ಯಾವುದೇ ಕಾರಣಕ್ಕೂ ಮುಸ್ಲಿಮರು ತಮ್ಮ ವ್ಯಯಕ್ತಿಕ ಜೀವನದಲ್ಲಿ ಇತರರು ಮೂಗು ತೂರಿಸುವುದನ್ನು ಸಹಿಸುವುದಿಲ್ಲ ತಲಾಖ್ ಎಂಬ ಪದ ಮಕ್ಕಳ ಆಟಿಕೆಯಲ್ಲಿ ಅದನ್ನು ಎಲ್ಲಿ, ಯಾವಾಗ ಬೇಕಾದರು ಬಳಸಿಕೊಳ್ಳುವಂತಿಲ್ಲ. ಇದರ ಸ್ವರೂಪವನ್ನು ಅರಿತುಕೊಂಡು ಈ ಪದವನ್ನು ಬಳಸಬೇಗಾತ್ತದೆ ಅಜ್ಞಾನ ಹಾಗೂ ಕೋಪದಲ್ಲಿ ಈ ಬದವನ್ನು ಬಳಸಿದರೆ ಅದರ ಪ್ರತಿಫಲ ಖಂಡಿತವಾಗಿ ಅವನು ಅನುಭವಿಸಲೇಬೆಕು. ತಪ್ಪು ಪತಿ ಪತ್ನಿ ಯಾರೇ ಮಾಡಲಿ ಅದು ತಪ್ಪೇ ಆಗಿದೆ. ಯಾವುದೆ ತಪ್ಪು ಮಾಡದೆ ಕೆಲವೊಮ್ಮೆ ಗಂಡ ಅಥವಾ ಹೆಂಡತಿಗೆ ಅನ್ಯಾಯವಾಗಬಹುದು. ಆದರೆ ತಲಾಖ್ ಪದ ಉಚ್ಚಾರವೆ ಬಹಳ ಜಾಗರೂಕತೆಯಿಂದ ಉಪಯೋಗಿಸುವಂತಹದ್ದು, ಕೊಲೆ ಮಾಡಿದ ನಂತರ ವ್ಯಕ್ತಿ ಪಶ್ಚತ್ತಾಪಪಟ್ಟರೆ ಕೊಲ್ಲಲ್ಲಪಟ್ಟ ವ್ಯಕ್ತಿ ಮರಳಿ ಜೀವಂತವಾಗಲು ಹೇಗೆ ಸಾಧ್ಯವಿಲ್ಲೂ ಹಾಗೆ ಒಮ್ಮೆ ತಲಾಖ್ ನೀಡಿದರೆ ಅದು ಮತ್ತೆ ಮರಳಿ ಪಡೆಯುವಹಾಗಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ತಲಾಖ್ ಪತಿಪತ್ನಿ ಬೇರ್ಪಡುವ ಕಟ್ಟಕಡೆಯ ಅಸ್ತ್ರವಾಗಿದೆ. ಇದನ್ನು ಬಳಸುವಾಗ ಯೋಚನೆ ಮಾಡಬೇಕಷ್ಟೆ. ತಿಳಿವಳಿಕೆಯಿಲ್ಲದೆ ಜನರು ಇದನ್ನು ದುರೂಪಯೋಗ ಮಾಡಿಕೊಳ್ಳುತ್ತಿದ್ದು ಮುಸ್ಲಿಮ್ ಪರ್ನಲ್ ಲಾ ಬೋರ್ಡ್ ಈ ಕುರಿತಂತೆ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಯೋಜನೆಯನ್ನು ರೂಪಿಸಿದೆ.
ಭಾರತದಂತಹ ಜಾತ್ಯಾತೀತ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಕಾನೂನು ಜಾರಿಗೊಳಿಸುವುದು ಸುಲಭವಲ್ಲ. ಇಲ್ಲಿ ಪ್ರತಿಯೊಂದು ಸಮುದಾಯಕ್ಕೆ ತನ್ನದೇ ಆದ ವ್ಯಯಕ್ತಿಕ ಕಾನೂನುಗಳಿವೆ. ಮದುವೆ, ವಿವಾಹ, ಕುಟಂಬ ವ್ಯವಸ್ಥೆ ಎಲ್ಲ ರೀತಿಯಿಂದ ಭಿನ್ನವಾಗಿವೆ. ಆದ್ದರಿಂದ ಏಕ ರೂಪ ನಾಗರಿಕ ಸಂಹಿತೆಯನ್ನು ಕೇವಲ ಮುಸ್ಲಿಮರು ಮಾತ್ರ ವಿರೋಧಿಸುವುದಿಲ್ಲ. ಬದಲಾಗಿ ಇಲ್ಲಿನ ಹಲವು ಸಮುದಾಯದವರು ಈಗಾಗಲೆ ಇದನ್ನು ವಿರೋಧಿಸಿ ಸುಪ್ರಿಮ್ ಕೋರ್ಟ್‌ನಲ್ಲಿ ದಾವೆಯನ್ನು ಹೂಡಿದ್ದಾರೆ ಎಂದರು. ಸರ್ಕಾರ ಈ ಕುರಿತಂತೆ ಬೋರ್ಡನೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಿದರೆ ಇದಕ್ಕೆ ಬೋರ್ಡ್ ಸಿದ್ದವಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತ ಈ ಕುರಿತು ಬೋರ್ಡ್ ಸರ್ಕಾರದೊಂದಿಗಿನ ಮಾತುಕತೆಗೆ ಸಿದ್ದವಿದೆ ಎಂದರು. ಸುಪ್ರಿಮ್ ಕೋರ್ಟ್ ತೀರ್ಮಾನ ಒಪ್ಪಲು ಸಿದ್ದರಿರುವ ತಾವು ನಾಗರೀಕ ಸಂಹಿತೆಯನ್ನು ವಿರೋಧಿಸುತ್ತಿರುವುದು ಸೂಕ್ತವೇ ಎಂಬ ಪ್ರಶ್ನೆಗೆ, ಹೌದು ನಮಗೆ ನಮ್ಮ ಸಂವಿಧಾನ ಈ ಹಕ್ಕನ್ನು ನೀಡಿದೆ. ನಮಗೆ ಸರಿಕಾಣದ ಎಲ್ಲ ವಿಷಯಗಳನ್ನು ವಿರೋಧಿಸುವ ಹಕ್ಕು ನಮಗಿದೆ ಎಂದರು. ಯಾವುದೇ ಕಾರಣಕ್ಕೂ ಶರಿಯತ್ ನಲ್ಲಿ ಹಸ್ತಕ್ಷೇಪ ಸಲ್ಲದು ಇದಕ್ಕಾಗಿ ಮುಸ್ಲಿಮರು ಬೋರ್ಡ್‌ನ ಬ್ಯಾನರ್ ನಡಿ ದೇಶದದ್ಯಾಂತ ಕಾನೂನು ಹೋರಾಟಕ್ಕೆ ಸಿದ್ದ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಂ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ, ಮಾಧ್ಯಮ ಸಂಚಾಲಕ ಡಾ.ಮುಹಮ್ಮದ್ ಹನೀಫ್ ಶಬಾಬ್, ಎಂ.ಜೆ.ಅಬ್ದುಲ್ ರಖೀಬ್ ಮತ್ತಿತರರು ಉಪಸ್ಥಿತಿತರಿದ್ದರು.
Read These Next
ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ” ಅದ್ಭುತ ಕಾರ್ಟೂನ್
ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...
ಅಂಕೋಲಾದಲ್ಲಿ ಕಾರು ಪಲ್ಟಿ. ಚಾಲಕ ಸಾವು. ಇನ್ನೋರ್ವ ಗಂಭೀರ
ಅಂಕೋಲಾ : ಜಾನುವಾರು ತಪ್ಪಿಸಲು ಹೋಗಿ ಕಾರೊಂದು ನಿಯಂತ್ರಣ ತಪ್ಪಿ ಚಾಲಕ ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ...
ಸಿ.ಎ.ಖಲೀಲ್ ಸಾಹೇಬರ ನಿಧನಕ್ಕೆ ಭಟ್ಕಳದ ಐದು ಕೇಂದ್ರಿಯ ಸಂಘಟನೆಗಳಿಂದ ಜಂಟಿ ಸಂತಾಪ ಸಭೆ
ಭಟ್ಕಳ: ಇಫ್ತಿಖಾರ್-ಇ-ಖೌಮ್ ಬಿರುದಾಂಕಿತ, ಪ್ರಸಿದ್ಧ ಉದ್ಯಮಿ ಮತ್ತು ಸಮಾಜ ಸೇವಕ ಸೈಯ್ಯದ್ ಖಲೀಲರ‍್ರಹ್ಮಾನ್ (ಸಿ.ಎ. ಖಲೀಲ್) ಅವರ ...
ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...
ಭಟ್ಕಳ: ಪ್ರಾಕೃತಿಕ ಸೌಂದರ್ಯ ಹೆಚ್ಚು ಪರಿಚಯವಾಗಬೇಕು : ಡಿ.ಕೆ. ಶಿವಕುಮಾರ್
ರಾಜ್ಯದಲ್ಲಿರುವ 360 ಕಿ.ಮೀ ಕರಾವಳಿ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಹೆಚ್ಚಿನ ರೀತಿಯಲ್ಲಿ ಜಗತ್ತಿಗೆ ಪರಿಚಯಿಸುವ ಅಗತ್ಯವಿದ್ದು, ...
ದುಬೈಯ ಮಣ್ಣಿನಲ್ಲಿ ಲೀನವಾಯಿತು ಕರ್ಮಯೋಗಿ ಖಲೀಲ್ ಸಾಹೇಬರ ಪಾರ್ಥಿವ ಶರೀರ
ಗುರುವಾರ ಬೆಳಗಿನ ಅವಧಿಯಲ್ಲಿ ದುಬೈಯ ಆಸ್ಪತ್ರೆಯೊಂದರಲ್ಲಿ ನಿಧನರಾದ ಭಟ್ಕಳದ ಪ್ರಸಿದ್ಧ ಅನಿವಾಸಿ ಉದ್ಯಮಿ ಕರ್ಮಯೋಗಿ ಡಾ. ಎಸ್.ಎಂ. ...
ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ
ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...
ಮೀನು ಕೃಷಿಕರಿಗೆ 10 ಲಕ್ಷ ಪರಿಹಾರ; ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ
ಭಟ್ಕಳ: ಮೀನುಕೃಷಿಕರಿಗೆ ತೊಂದರೆಯಾದಲ್ಲಿ 10ಲಕ್ಷ ರೂ ಪರಿಹಾರ ನೀಡಲಾಗುವುದು ಅಲ್ಲದೆ ಮೀನುಗಾರರಿಗಾಗಿ ಹತ್ತು ಸಾವಿರ ಮನೆಗಳನ್ನು ...
ಭಟ್ಕಳ ಸಮುದಾಯದ ಮಹಾನ್ ನಾಯಕ ಪ್ರಸಿದ್ಧ ಅನಿವಾಸಿ ಉದ್ಯಮಿ ಡಾ. ಸಿ.ಎ.ಖಲೀಲ್ ನಿಧನ
ಮಂಗಳವಾರ ಪಾದಗಳಲ್ಲಿ ತೀವ್ರ ದೌರ್ಬಲ್ಯದ ಸಮಸ್ಯೆಯಿಂದ ದುಬೈನ ಮಂಕೋಲ್ ಎಸ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಖಲೀಲ್ ಸಾಹೇಬ್ ಅವರು ...
ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ
ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...
ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...
ಅಕ್ರಮ ಗಣಿಗಾರಿಕೆ: ಸಿಬಿಐ ನಿರಾಕರಿಸಿದ ಪ್ರಕರಣಗಳು ಎಸ್ಐಟಿ ತನಿಖೆಗೆ
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 9 ಪ್ರಕರಣಗಳ ಪೈಕಿ 6 ಪ್ರಕರಣಗಳಲ್ಲಿ ತನ್ನಿಂದ ತನಿಖೆ ಸಾಧ್ಯವಿಲ್ಲ ಎಂದು ಸಿಬಿಐ ತಿಳಿಸಿದೆ.
ಗುತ್ತಿಗೆ ಪಡೆಯಲು 2,240 ಕೋಟಿ ರೂ. ಲಂಚ; ಅದಾನಿ ವಿರುದ್ಧ ಅಮೆರಿಕ ಬಂಧನ ವಾರಂಟ್
ಸೌರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಏರ್ಪಡಿಸಲು ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ 265 ಮಿಲಿಯ ಡಾಲರ್ (ಸುಮಾರು 2,240 ಕೋಟಿ ರೂಪಾಯಿ) ...
ದ್ವೇಷ ಭಾಷಣ ದೇಶದ್ರೋಹಿ ಹೇಳಿಕೆಗಿಂತ ಭಿನ್ನ: ಸುಪ್ರೀಂ
ದ್ವೇಷ ಭಾಷಣಗಳನ್ನು ಮಾಡುವವರು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹಾನಿಯನ್ನುಂಟು ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕ್ರಮಗಳನ್ನು ...
ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ
ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...
5.6 ಲಕ್ಷ ಭಾರತೀಯರು ಶ್ರೀಮಂತ ದೇಶಗಳಿಗೆ ವಲಸೆ
ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾದಥ ದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ಭಾರತೀಯರಲ್ಲಿ ಹೆಚ್ಚಿದ್ದು, 2022ರಲ್ಲಿ ಒಟ್ಟು 5.6 ಲಕ್ಷ ಮಂದಿ ...
'ಬುಲ್ಡೋಜರ್ ಅನ್ಯಾಯ'ದ ವಿರುದ್ಧ ಸುಪ್ರೀಂ ಕೆಂಡ: ಸರಕಾರ ನ್ಯಾಯಾಂಗದ ಕೆಲಸ ಮಾಡುವಂತಿಲ್ಲ
ಸುಪ್ರೀಂ ಕೋರ್ಟ್ ಬುಧವಾರ 'ಬುಲ್ಡೋಜರ್ ಅನ್ಯಾಯ;ದ ಪ್ರವೃತ್ತಿಯ ವಿರುದ್ಧ ಕೆಂಡಕಾರಿದೆ.
ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ
ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...
ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ
ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...
ಜೀವಂತ ಬದುಕಿನ ಶ್ರೇಷ್ಠ ಉದಾಹರಣೆ ಪ್ರವಾದಿ ಮುಹಮ್ಮದ್(ಸ)
ಸೆ.೧೬ ರಂದು ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಅವರ ಜನ್ಮ ದಿನ ಕೇವಲ ದಿನಾಚರಣೆ ಮಾತ್ರ ...
ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ ಮತ್ತು ಸಹಾನುಭೂತಿ
ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...
ಲೈಲತುಲ್ ಕದ್ರ್ ; ದೈವಿಕ ಪ್ರತಿಫಲಕ್ಕೆ ಸಾಟಿಯಿಲ್ಲದ ರಮಝಾನ್ ಮಾಸದ ಕೊನೆಯ ದಿನಗಳು
ಮೂವತ್ತು ದಿನಗಳ ಕಠಿಣ ಉಪವಾಸ ವೃತಗಳ ಆಚರಣೆಯ ಮಾಸ ರಮಝಾನ್ ಇನ್ನೇನು ಕೊನೆಯ ಹಂತದಲ್ಲಿದೆ. ಈ ಮಾಸದ ಕೊನೆಯ ಹತ್ತು ದಿನಗಳು ದೈವಿಕ ...
ಪರೀಕ್ಷೆ ಮತ್ತು ಬಲಿದಾನಗಳ ಪ್ರತೀಕ : ಹಜ್ಜ್ ಮತ್ತು ಬಕ್ರೀದ್
ಹಜ್ಜ್ ಮತ್ತು ಬಕ್ರೀದ್ ಇವೆರಡರಲ್ಲೂ ಪ್ರವಾದಿ ಅಬ್ರಹಾಮರ ಜೀವನ ಮತ್ತು ಸಂದೇಶವಿದೆ. ಕುರಾನ್ ನಲ್ಲಿ ಹಲವೆಡೆ ಇವರ ...
ರಮಝಾನ್ ವಿಶೇಷ ಲೇಖನ; ಮಾನವ ಕಳಕಳಿಯ ಹಬ್ಬ “ಈದುಲ್ ಫಿತ್ರ್”
ಇಸ್ಲಾಮಿನಲ್ಲಿ ಕೇವಲ ಎರಡು ಹಬ್ಬಗಳು ಮಾತ್ರ ಇರುವುದು. ಒಂದನೆಯದು 30ದಿನಗಳ ಉಪವಾಸದ ನಂತರ ಆಚರಿಸುವ ಈದುಲ್ ಫಿತ್ರ್ ಮತ್ತು ಎರಡನೆಯದು ...
ಅಂಕೋಲಾದಲ್ಲಿ ಕಾರು ಪಲ್ಟಿ. ಚಾಲಕ ಸಾವು. ಇನ್ನೋರ್ವ ಗಂಭೀರ
ಅಂಕೋಲಾ : ಜಾನುವಾರು ತಪ್ಪಿಸಲು ಹೋಗಿ ಕಾರೊಂದು ನಿಯಂತ್ರಣ ತಪ್ಪಿ ಚಾಲಕ ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ...
ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ
ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...
ಕಾರವಾರ: ಜಿಲ್ಲೆಯಲ್ಲಿ ಮಾನ್ಯ ಉಪಮುಖ್ಯ ಮಂತ್ರಿಗಳ ಪ್ರವಾಸ
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನ.21 ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಂದು ಮಧ್ಯಾಹ್ನ 3.30 ಗಂಟೆಗೆ ...
ಭಟ್ಕಳ:ಸಚಿವ ಮಂಕಾಳ ಎಸ್ ವೈದ್ಯ ನೇತೃತ್ವದಲ್ಲಿ ಕೊಣಾರ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆ
ಭಟ್ಕಳ:ಸಚಿವ ಮಂಕಾಳ ಎಸ್ ವೈದ್ಯ ನೇತೃತ್ವದಲ್ಲಿ ಕೊಣಾರ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆ
ತಂಬಾಕು ಮುಕ್ತ ಯುವ ಅಭಿಯಾನ ಜಾಥಾಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾಲನೆ
ತಂಬಾಕು ಮುಕ್ತ ಯುವ ಅಭಿಯಾನ ಜಾಥಾಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾಲನೆ
ಭಟ್ಕಳ ಪುರಸಭೆಗೆ ಲೋಕಾಯುಕ್ತ ದಾಳಿ. ಲಂಚ ಪಡೆಯುತ್ತಿದ್ದ ಮುಖ್ಯಾಧಿಕಾರಿ ಬಲೆಗೆ
ಭಟ್ಕಳ : ಪುರಸಭೆ ಮುಖ್ಯಾಧಿಕಾರಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ. ...