ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

Source: SOnews | By Staff Correspondent | Published on 18th September 2024, 8:10 PM | Coastal News |

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದೇ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಟೀಕಿಸಿದರು.

ಭಟ್ಕಳದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪಗಳು ಕೇಳಿ ಬಂದಿದ್ದಾಗ ತಕ್ಷಣ ರಾಜೀನಾಮೆ ನೀಡಬೇಕಾಗಿತ್ತು. ಅವರು ಹಾಗೆ ಮಾಡದೆ ಮುಂದುವರಿಯುತ್ತಿರುವುದು ಸರಿಯಾದ ನಡೆ ಅಲ್ಲ ಎಂದರು. ಇಂತಹ ರಾಜಕೀಯ ಅನುಭವ ಹೊಂದಿರುವವರು ಹಾರಿಕೆಯ ಉತ್ತರ ನೀಡದೆ ತಮ್ಮ ಸ್ಥಾನಕ್ಕೆ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಮುನಿರತ್ನ ಕುರಿತ ಪ್ರಕರಣದಲ್ಲಿಯೂ, ಸರಕಾರವು ಅವರ ಮೇಲೆ ಕ್ರಮ ಕೈಗೊಂಡಿದ್ದು ಸೇಡಿನ ರಾಜಕೀಯವಾಗಿ ಕಾಣುತ್ತಿದೆ ಎಂದು ಕಾಗೇರಿ ಹೇಳಿದರು. ತಪ್ಪು ಮಾಡಿದರೆ ನ್ಯಾಯಬದ್ಧ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿತ್ತು, ಆದರೆ ಜೈಲಿಗೆ ಹಾಕುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಓಲೈಕೆ ಮಾಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಮತ್ತು ರಾಜ್ಯದ ಕೆಲವು ಕಡೆ ಅಹಿತಕರ ಘಟನೆಗಳಿಗೆ ಕಾರಣವಾಗಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ರಾಜೇಶ ನಾಯ್ಕ, ಶ್ರೀಕಾಂತ ನಾಯ್ಕ, ಕಿಶನ್ ಬಲ್ಸೆ,ಶ್ರೀನಿವಾಸ ನಾಯ್ಕ ಮುಂತಾದವರಿದ್ದರು.

 

 

Read These Next

ಜಾಲಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ: ಅಂಜುಮನ್ ಬಿಎಡ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಕಾಲೇಜ್ ಆಫ್ ಎಜುಕೇಶನ್ (ಬಿಎಡ್) ವಿದ್ಯಾರ್ಥಿಗಳು ಜಾಲಿ ಬೀಚ್‌ನಲ್ಲಿ ಗುರುವಾರ ಬೀಚ್ ಸ್ವಚ್ಛತಾ ಅಭಿಯಾನವನ್ನು ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...

ಸೆ. 19ರಿಂದ 24ರ ವರೆಗೆ ಉತ್ತರ ಕನ್ನಡದಲ್ಲಿ ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಕ್ರೀಡಾಪಟುಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳು

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ...