ಮೋದಿ ಎನ್‌ಡಿಎ ನಾಯಕ ಎನ್‌ಡಿಎ ಸಭೆಯಲ್ಲಿ 21 ಮಿತ್ರಪಕ್ಷಗಳ ಲಿಖಿತ ಬೆಂಬಲ; ಪ್ರಧಾನಿಯಾಗಿ ಮೋದಿ ತೃತೀಯ ಬಾರಿ ಅಧಿಕಾರಕ್ಕೆ ?

Source: Vb | By I.G. Bhatkali | Published on 7th June 2024, 12:45 PM | National News |

ಹೊಸದಿಲ್ಲಿ: ಎನ್‌ಡಿಎ ಮೈತ್ರಿಕೂಟವು ಶನಿವಾರ ನೂತನ ಸರಕಾರವನ್ನು ರಚಿಸಲಿದ್ದು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ನಡೆದ ಎನ್‌ಡಿಎ ಸಭೆಯಲ್ಲಿ ಮೈತ್ರಿಕೂಟದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ 21 ಅಂಗಪಕ್ಷಗಳು ಪ್ರಧಾನಿಗೆ ಬೆಂಬಲ ಘೋಷಿಸುವ ಲಿಖಿತ ಪತ್ರವನ್ನು ಸಲ್ಲಿಸಿದವು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 240 ಸ್ಥಾನಗಳನ್ನು ಪಡೆದಿದ್ದು ಬಹುಮತಕ್ಕೆ 272 ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿದೆ. ಹೀಗಾಗಿ ನೂತನ ಸರಕಾರ ರಚನೆಗೆ ಅದು ಎನ್ ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳ ಬೆಂಬಲವನ್ನು ಪಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ನೂತನ ಸಂಪುಟದಲ್ಲಿ ಹಲವು ಪ್ರಮುಖ ಖಾತೆಗಳು ತೆಲುಗುದೇಶಂ (ಟಿಡಿಪಿ) ಹಾಗೂ ಸಂಯುಕ್ತ ಜನತಾದಳ (ಜೆಡಿಯು) ಪಾಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷವು ಆಂಧ್ರದಲ್ಲಿ 16 ಲೋಕಸಭಾ ಸ್ಥಾನಗಳನ್ನು ಹಾಗೂ ನಿತೀಶ್ ಕುಮಾರ್ ಅವರ ಜೆಡಿಯು ಬಿಹಾರದಲ್ಲಿ 12 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿವೆ.

ಆರಂಭಿಕ ಹಂತದಲ್ಲಿ `ನೂತನ ಸಂಪುಟವು 10-15 ಸಚಿವರನ್ನು ಒಳಗೊಳ್ಳಲಿದ್ದು, ಶನಿವಾರ ಸಂಜೆ ಅವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಯಿದೆ. ಸಂಪುಟವು ಬಿಜೆಪಿಯ ಮಿತ್ರ ಪಕ್ಷಗಳನ್ನು ಒಳಗೊಳ್ಳುವುದು ಬಹುತೇಕ ಖಚಿತವಾಗಿದೆ.

ಇಂದು ನಡೆದ ಎನ್‌ಡಿಎ ಸಭೆಯಲ್ಲಿ ಬಡವರು, ಮಹಿಳೆಯರು, ಯುವಜನರು, ರೈತರು ಹಾಗೂ ಸಮಾಜದ ದುರ್ಬಲ ವರ್ಗಗಳಿಗೆ ಸೇವೆ ಸಲ್ಲಿಸುವ ಸರಕಾರದ ಬದ್ಧತೆಗೆ ಒತ್ತು ನೀಡುವ ನಿರ್ಣಯನ್ನು ಅಂಗೀಕರಿಸಲಾಯಿತು ಎಂದು ಮೂಲಗಳು ತಿಳಿಸಿವೆ. ದೇಶದ ಪರಂಪರೆಯನ್ನು ಸಂರಕ್ಷಿಸುವ ಜೊತೆಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಜನತೆಯ ಜೀವನಮಟ್ಟವನ್ನು ಮೇಲೆತ್ತಲು ಶ್ರಮಿಸುವುದನ್ನು ಎನ್‌ಡಿಎ ಸರಕಾರ ಮುಂದುವರಿಸಲಿದೆ ಎಂದು ನಿರ್ಣಯ ತಿಳಿಸಿದೆ.

"ಎನ್‌ಡಿಎ ಮೈತ್ರಿಕೂಟವು 2024ರ ಲೋಕಸಭಾ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿ, ಗೆದ್ದಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ನರೇಂದ್ರ ಮೋದಿಯವರನ್ನು ನಮ್ಮ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ'' ಎಂದವರು ತಿಳಿಸಿದ್ದಾರೆ. ನೂತನ ಸಂಪುಟದಲ್ಲಿ ಆಯಕಟ್ಟಿನ ಸಚಿವ ಖಾತೆಗಳಾದ ಗ್ರಾಮೀಣಾಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಗಳನ್ನು ತೆಲುಗು ದೇಶಂ ಪಕ್ಷ (ಟಿಡಿಪಿ) ಅಥವಾ ಸಂಯುಕ್ತ ಜನತಾ ದಳ (ಜೆಡಿಯು)ಕ್ಕೆ ಹಂಚಿಕೆಯಾಗುವ ಸಾದ್ಯತೆ ಯಿದೆಯೆಂದು ಬಿಜೆಪಿಯ ಆಂತರಿಕ ಮೂಲಗಳು ಸುಳಿವು ನೀಡಿವೆ.

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...