ಗೋ ರಕ್ಷಣೆಯ ನೆಪದಲ್ಲಿ ಮನೆಗಳಿಗೆ ನುಗ್ಗಿ ದಾಂಧಲೆ ಆರೊಪ; ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಸಂಘ ಪರಿವಾರ ಆಗ್ರಹ

Source: S O News | By I.G. Bhatkali | Published on 2nd July 2023, 8:24 PM | Coastal News |

ಭಟ್ಕಳ:  ಕಳೆದ ಜೂನ್ 28ರಂದು ಗೋರಕ್ಷಣೆಯ ನೆಪದಲ್ಲಿ ರಾತ್ರಿ ವೇಳೆ ಮುಸ್ಲಿಮ್ ಮನೆಗಳಿಗೆ ನುಗ್ಗಿ ದಾಂಧಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೊಪಿಸಿ ಮೂವರು ಯುವಕರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಘಟನೆಗೆ  ಸಂಬಂಧಿಸಿದಂತೆ ಸಂಘಪರಿವಾರದ ಮುಖಂಡರು ಶನಿವಾರ ನಗರ ಠಾಣೆಯ ಎದುರು ಪ್ರತಿಭಟಿಸಿದ್ದು ಹಲ್ಲೆ ಮಾಡಿದ ವ್ಯಕ್ತಿಗಳನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಶನಿವಾರ ಬೆಳಿಗ್ಗೆ, ಬಿ.ಜೆ.ಪಿ. ಮುಖಂಡ ಗೋವಿಂದ ನಾಯ್ಕ ನೇತೃತ್ವದಲ್ಲಿ ಠಾಣೆಯ ಮುಂದೆ ಜಮಾಯಿಸಿದ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು, ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟ ಮುಂದುವರೆದಿದೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಜಾನುವಾರು ಅಕ್ರಮ ಸಾಗಾಟವನ್ನು ತಡೆದವರ ಮೇಲೆಯೇ ಹಲ್ಲೆ ನಡೆಸಲಾಗುತ್ತಿದೆ. ಘಟನೆ ನಡೆದು 3 ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆ ತರುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ಎಂದು ಆಕ್ರೋಶ ಹೊರ ಹಾಕಿದರು. ಶ್ರೀನಿವಾಸ ನಾಯ್ಕ ಹನುಮಾನ ನಗರ, ಹನುಮಂತ ನಾಯ್ಕ ಸರ್ಪನಕಟ್ಟೆ, ತುಳಸಿದಾಸ ನಾಯ್ಕ, ಕುಮಾರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

3 ದಿನಗಳೊಳಗೆ ಬಂಧಿಸುತ್ತೇವೆ: ಸ್ಥಳಕ್ಕೆ ಆಗಮಿಸಿದ ಡಿವಾಯ್ ಎಸ್ಪಿ ಶ್ರೀಕಾಂತ, ಸಿಪಿಐ ಗೋಪಿಕೃಷ್ಣ, ಎಸ್‌ಐ ಶ್ರೀಧರ ನಾಯ್ಕ, ಎಸ್‌ಐ ಹನುಮಂತ ಕುಡಗುಂಟಿ ಆಕ್ರೋಶಿತರನ್ನು ಸಮಾಧಾನ ಪಡಿಸಲು ಯತ್ನಿಸಿದರು, ಜಾನುವಾರು ಸಾಗಾಟ ತಡೆಯುವುದು ಪೊಲೀಸರ ಕೆಲಸ ಹಾಡುವಲ್ಲಿಯಿಂದ ಭಟ್ಕಳ ಚಿನ್ನದ ಪಲ್ಲಿಯವರಿಗೆ ವಾಹನವನ್ನು ಬೆನ್ನಟ್ಟಿ ಬರಲಾಗಿದ್ದು, ಈ ಬಗ್ಗೆ ಯಾರೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೇ ಘಟನೆಯಲ್ಲಿ ಗಾಯಗೊಂಡ ಚಂದ್ರಕಾಂತ ಗೊಂಡ, ಪ್ರವೀಣ ಶೆಟ್ಟಿ, ಸಂತೋಷ ನಾಯ್ಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಾಹನ ಅಪಘಾತಕ್ಕೆ ಸಂಬಂಧಿಸಿದಂತೆ ವಾಹನವನ್ನು ಬೆನ್ನಟ್ಟಿ ಬಂದಿದ್ದು, ನಂತರ ಹಲ್ಲೆಗೊಳಗಾಗಿರುವುದಾಗಿ ತಿಳಿಸಿದ್ದಾರೆ. ಅಂತಹುದ್ದರಲ್ಲಿ ಜಾನುವಾರು ಸಾಗಾಟ, ತಡೆ- ಎಲ್ಲಿಂದ ಬಂತು.  ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು.  ಆ ದಿನ ಘಟನಾ ಸ್ಥಳದಲ್ಲಿ ಪರಿಸ್ಥಿತಿ ಕೈ ಮೀರಿ ಏನಾದರೂ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆಗಾರರು, ಆದರೆ ನಾವು ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನು 3 ದಿನಗಳ ಒಳಗೆ ಹಲ್ಲೆ ಘಟನೆಯ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

ಘಟನೆಯ ಹಿನ್ನೆಲೆ:  ಸ್ಥಳೀಯರ ಪ್ರಕಾರ ಈದುಲ್ ಅಝ್ಹಾದ ಮುನ್ನ ದಿನ ಬುಧವಾರ ರಾತ್ರಿ ಸುಮಾರು 12:30 ಗಂಟೆಗೆ ಕುಡಿದ ಅಮಲಿನಲ್ಲಿ ಯದ್ವತದ್ವ ಕಾರನ್ನು ಚಾಲಾಯಿಸಿಕೊಂಡು ಬಂದ ಮೂವರು ಇಲ್ಲಿನ ಖಲಿಫಾ ಮೊಹಲ್ಲಾದಲ್ಲಿ ನುಗ್ಗಿ ನಾವು ಗೋರಕ್ಷಕರು ನಾಳೆ ನಿಮಗೆ ಪ್ರಾಣಿ ಬಲಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೂಗಿಕೊಂಡರು. ಅಲ್ಲದೆ ಒಂದು ಮನೆಯ ಕಂಪೌಂಡ್ ಒಳಗೆ ನುಗ್ಗಿ ಇಲ್ಲಿ ದನಗಳನ್ನು ಕಟ್ಟಿಹಾಕಲಾಗಿದೆ ಎಂದು ತಕರಾರು ತೆಗೆದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಗುಂಪೊಂದು ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಯುವಕರ ರಕ್ಷಣೆಗೆ ಧಾವಿಸಿದ ಮುಸ್ಲಿಮ್ ಮುಖಂಡರು ಗುಂಪನ್ನು ಚದರಿಸಿದ್ದು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಬಂದು ಯುವಕರನ್ನು ಕರೆದುಕೊಂಡು ಹೋಗಿದ್ದಾರೆ. 

ಇದೇ ಘಟನೆಯನ್ನು ಮುಂದಿಟ್ಟುಕೊಂಡು ಶನಿವಾರ ಬೆಳಿಗ್ಗೆ  ಸಂಘಪರಿವಾರದ ಕಾರ್ಯಕರ್ತರು ಗೋರಕ್ಷಕರ ಮೇಲೆ ಹಲ್ಲೆಯಾಗಿದೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಮೂರುದಿನ ಕಳೆದರು ಇನ್ನೂ ಬಂಧಿಸಲಿಲ್ಲ ಅವರನ್ನು ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದು ಪೊಲೀಸ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. 

ಪೊಲೀಸರು ಹಲ್ಲೆ ಮಾಡಿದವರ ಮೇಲೆ ಮೂರು ದಿನಗಳ ಒಳಗಾಗಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. 

Read These Next

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 2 ಕಾಳಜಿ ಕೇಂದ್ರಗಳಲ್ಲಿ 59 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ.

ಜಿಲ್ಲೆಯಲ್ಲಿ ಭಾನುವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು,  ಹೊನ್ನಾವರ ತಾಲ್ಲೂಕಿನಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ...

ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ. ಸಯೀದ್ ಇಸ್ಮಾಯಿಲ್

ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ...

ಭಾರೀ ಮಳೆಯಿಂದ ಭಟ್ಕಳ ತಾಲೂಕಿನಲ್ಲಿ ತೀವ್ರ ಜಲಾವೃತ, ವಾಹನ ಸಂಚಾರ ಸ್ಥಗಿತ; ಶಾಲಾ ಕಾಲೇಜುಗಳಿಗೆ ರಜೆ

ಭಟ್ಕಳ: ಭಾನುವಾರ ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಭಟ್ಕಳ ತಾಲೂಕಿನಾದ್ಯಂತ ಹಾನಿಯನ್ನುಂಟುಮಾಡಿದೆ, ಪ್ರಮುಖ ...

ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೆಯ ನಿಶ್ಚಿತ ಪಿಂಚಣಿ  ನೀಡುವಂತೆ ಆಗ್ರಹ

ಭಟ್ಕಳ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಭಟ್ಕಳ ತಾಲೂಕು ಘಟಕದ ಪದಾಧಿಕಾರಿಗಳು  ಹಳೆಯ ಓಪಿಎಸ್ ...