ಕರಾವಳಿ, ಮಲೆನಾಡು ಕಾಲುಸಂಕ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸತೀಶ್ ಜಾರಕಿಹೊಳಿ ಸೂಚನೆ

Source: Press Release | By I.G. Bhatkali | Published on 17th August 2023, 2:18 PM | Coastal News |

ಶಿರಸಿ: ಕರಾವಳಿ, ಮಲೆನಾಡು ಹಾಗೂ ಇತರೇ ಅವಶ್ಯ ಇರುವ ಕಡೆಗಳಲ್ಲಿ ಸಂಪರ್ಕ ರಹಿತ ಹಳ್ಳಿಗಳಿಗೆ ಕಾಲುಸಂಕ ನಿರ್ಮಾಣ ಮಾಡಲು ಸೂಕ್ತ ಪ್ರಸ್ತಾವನೆಗಳನ್ನು ತಯಾರಿಸಲು ನಿರ್ಧರಿಸಲಾಗಿದೆ ಎಂದು ಲೋಕಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

 ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ್ಕ ನೇತ್ರತ್ವದಲ್ಲಿ, ಅವರಿಗೆ ಇಂದು ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸಂಪರ್ಕ ಕೊರತೆಯಾದ ಕಾಲುಸಂಕಕ್ಕೆ ಹೆಚ್ಚಿನ ಅನುದಾನವನ್ನ ಬಿಡಗಡೆಗೊಳಿಸಬೇಕೆಂದು ಅಗ್ರಹಿಸಿ ಮನವಿ ನೀಡಿದ ಹಿನ್ನೆಲೆಯಲ್ಲಿ ಮೇಲಿನಂತೆ ಹೇಳಿದರು.

 ಈಗಾಗಲೇ ಸರಕಾರ ಪ್ರಧಾನ ಕಾರ್ಯದರ್ಶಿ ಲೋಕಪಯೋಗಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಕಾಲುಸಂಕಕ್ಕೆ ಸಂಬAಧಿಸಿ ಸೂಕ್ತ ಕ್ರಮ ಜುರುಗಿಸಲಾಗುವುದೆಂದು ಅವರು ತಿಳಿಸಿದರು.

 ಗುಡ್ಡಗಾಡು ಜನರು ಸಂಪರ್ಕದ ಕೊರತೆಯಿಂದ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿರುವುದು ಖೇದಕರ. ಕಾಲುಸಂಕ ಕೊರತೆಯಿಂದ ಗ್ರಾಮೀಣ ಭಾಗದ ಗುಡ್ಡಗಾಡು ಜನರು ಹಾಗೂ ವಿದ್ಯಾರ್ಥೀಗಳು ದಿನನಿತ್ಯ ಸಂಚಾರದ ಸಮಸ್ಯೆಗಳನ್ನ ಏದುರಿಸುತ್ತಿರುವರು. ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದಲೇ ರಚಿಸಿಕೊಂಡ ತಾತ್ಕಾಲಿಕ ಕಾಲುಸಂಕದ ಮೇಲಿನ ಓಡಾಟ ಅಪಾಯದಿಂದ ಕೂಡಿರುವುದರಿಂದ, ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರ ಬಂದಿರುವAತಹ ಹಿನ್ನೆಲೆಯಲ್ಲಿ ಸರಕಾರವು ೫೦೦ ಕಾಲುಸಂಕಕ್ಕೆ ಮಂಜೂರಿಗೆ ಘೋಷಿಸಿ ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ರವೀಂದ್ರ ನಾಯ್ಕ ಅವರ ನೇತ್ರತ್ವದದ ನಿಯೋಗದಲ್ಲಿ ಹಿರಿಯ ಹೋರಾಟಗಾರರಾದ ಜಿ ಎಮ್ ಶೆಟ್ಟಿ ಅಂಕೋಲಾ, ಬಾಲಚಂದ್ರ ಶೆಟ್ಟಿ ಅಚಿವೆ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಸುನೀಲ್ ನಾಯ್ಕ ಸಂಪಖAಡ, ಯಲ್ಲಾಪುರ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ನಾಗರಾಜ ಮರಾಠಿ, ದಿನೇಶ್ ನಾಯ್ಕ ಬೇಡ್ಕಣಿ ಮುಂತಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.

ವಿಶೇಷ ಅನುದಾನ:
 ಗುಡ್ಡಗಾಡು ಪ್ರದೇಶವಾದ ಮಲೆನಾಡು ಮತ್ತು ಕರಾವಳಿ ಪ್ರದೇಶಕ್ಕೆ ಒಳಗೊಂಡ ಉತ್ತರ ಕನ್ನಡ ಜಿಲ್ಲೆಯ ಸಂಪರ್ಕ ಕೊರತೆಯಾಗಿರುವ ಕಾಲುಸಂಕಕ್ಕೆ ವಿಶೇಷ ಅನುದಾನವನ್ನ ಕೊಡಲು ಆಸಕ್ತನಾಗಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ನಿಯೋಗಕ್ಕೆ ಹೇಳಿದರು.

Read These Next

ಕಾರವಾರ: ಅನುಸೂಚಿತ ಜಾತಿ ಮತ್ತು ಪಂಗಡ ಉಪ ಹಂಚಿಕೆ ಯೋಜನೆಯಲ್ಲಿ 100% ಗುರಿ ಸಾಧಿಸಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಅನುಸೂಚಿತ ಪಂಗಡ ಉಪ ಹಂಚಿಕೆ ...

ಭಟ್ಕಳ: ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಚಾಲನೆ

ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ...

ಭಟ್ಕಳ: ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ:70 ವರ್ಷದ ವೃದ್ಧೆ ಸ್ಥಿತಿ ಗಂಭೀರ

ಇಲ್ಲಿನ ಜಾಲಿಕೋಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದರೆ ಇನ್ನೊಂದು ಪ್ರಕರಣ ಬಂಗಾರಮಕ್ಕಿ ಕ್ರಾಸ್ ಬಳಿ ...

ಭಟ್ಕಳದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ವಿರುದ್ಧ ಅಪಪ್ರಚಾರ ನಡೆಸುತ್ತಿರುವವವ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್.ಡಿ.ಪಿ.ಐ ಆಗ್ರಹ

ಭಟ್ಕಳ: ಭಟ್ಕಳ ತಾಲೂಕಿನ ಜಾಲಿಪಟ್ಟಣ ಪಂಚಾಯತ್ ನ ಏಕೈಕ ಅಲ್ಪಸಂಖ್ಯಾತ ಮಹಿಳಾ ಅಧ್ಯಕ್ಷೆ ಕಾಝಿಯಾ ಅಪ್ಸ ಹುಝೈಫಾ ವಿರುದ್ಧ ಸಾಮಾಜಿಕ ...