ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಗರಂ ಆದ ಸಚಿವ ಮಂಕಾಳ್ ವೈದ್ಯ

Source: SO News | By Laxmi Tanaya | Published on 2nd November 2024, 2:42 PM | Coastal News | Don't Miss |

ಕಾರವಾರ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಿಡಿ ಕಾರಿದ್ದಾರೆ.

ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕುಮಟಾ-ಶಿರಸಿ 766(ಜಿ) ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಸಂಪೂರ್ಣ ಬಂದ್ ಮಾಡುವ ವಿಚಾರಕ್ಕೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ಶಿರಸಿ ರಸ್ತೆ ಕಾಮಗಾರಿ ವಿಚಾರದಲ್ಲಿ 'ರಸ್ತೆ ನಿರ್ಮಾಣ ಕಂಪನಿಗಳ ಸೆಟಲ್ಮೆಂಟ್ ಗೆ ಅವರು ಬರ್ತಾರೋ ಅಥವಾ ಪರಿಶೀಲನೆಗೆ ಬರ್ತಾರೋ ಗೊತ್ತಿಲ್ಲ" ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಅವರು ಜಿಲ್ಲೆಗೆ ಯಾಕೆ ಬರ್ತಾರೆ ಗೊತ್ತಿಲ್ಲ. ಅವರು ಐಆರ್‌ಬಿ ಹಾಗೂ ಆರ್ ಏನ್ ಎಸ್ ಕಂಪನಿಗಳ ಜೊತೆ ಮಾತುಕತೆಗೆ ಬರ್ತಾರೋ ಅಂತೆ. ಅವರು ರಸ್ತೆ ಬಂದ್‌ ಮಾಡುವಂತೆ ಆರ್‌ಎನ್‌ಎಸ್ ಕಂಪನಿಗಳಿಗೆ ಸಲಹೆ ಕೊಟ್ಟಿದ್ದಾರೆ ಎಂದು ಕಾಣುತ್ತಿದೆ. ರಸ್ತೆ ಬಂದ್ ಮಾಡಲು ನಾನು ಒಪ್ಪುವುದಿಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ.

Read These Next

ಕಾರವಾರ: ಕಬ್ಬು ಖರೀದಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಲಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಸರ್ಕಾರದ ಆದೇಶದಂತೆ 2024-25 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ನವೆಂಬರ್ 15 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಕಬ್ಬು ಬೆಳಗಾರರಿಗೆ ಯಾವುದೇ ...

ಭಟ್ಕಳ: ಎಐಟಿಎಂನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್

ಭಟ್ಕಳ: ಮಂಗಳೂರಿನ ಇನ್‌ಯೂನಿಟಿಯ ಸಹಯೋಗದಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ (AITM) ಮೊದಲ ...

ಭಟ್ಕಳ: ನ್ಯಾಯಾಧೀಶರ ಮಾನವೀಯತೆ - ನಾಲ್ಕು ವರ್ಷಗಳಿಂದ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ನೆರವಾದ ಕಾನೂನು ಸೇವಾ ಸಮಿತಿ

ಭಟ್ಕಳ: ಭಟ್ಕಳದಲ್ಲಿ ನಾಲ್ಕು ವರ್ಷಗಳಿಂದ ರಸ್ತೆಯ ಬದಿಯಲ್ಲಿ ಹರಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ...