ಕಂಪಾಲ: ಕಾಂಗೋ ಗಡಿಭಾಗದಲ್ಲಿರುವ ಉಗಾಂಡದ ಕಸೇಸೆ ಜಿಲ್ಲೆಯಲ್ಲಿ ಶಾಲೆಯೊಂದರ ಮೇಲೆ ಶಂಕಿತ ಬಂಡುಗೋರರು ನಡೆಸಿದ ದಾಳಿಯಲ್ಲಿ 37 ಮಕ್ಕಳ ಸಹಿತ ಕನಿಷ್ಠ 40 ಮಂದಿ ಮೃತಪ ಟ್ಟಿದ್ದು 8 ಮಂದಿ ಗಾಯಗೊಂಡಿದ್ದಾರೆ. ಇತರ 6 ಮಂದಿಯನ್ನು ದುಷ್ಕ ರ್ಮಿಗಳು ಅಪಹರಿಸಿದ್ದಾರೆ. ಹರಿತವಾದ ಆಯುಧದಿಂದ ಮಕ್ಕಳನ್ನು ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ 11 ಗಂಟೆಗೆ ಈ ಕೃತ್ಯ ನಡೆಸಲಾಗಿದೆ. ಶಾಲೆಯ ಬಳಿಯಿದ್ದವಸತಿ ನಿಲಯಕ್ಕೆ ಬೆಂಕಿಹಚ್ಚಿದ್ದು ಹಲವು ಮೃತದೇಹಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಶಾಲೆ ಹಾಗೂ ವಸತಿನಿಲಯದ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ.
ಗಲಭೆಗ್ರಸ್ತ ಪೂರ್ವ ಕಾಂಗೋದಲ್ಲಿ ಹಲವು ವರ್ಷಗಳಿಂದ ನೆಲೆ ಕಂಡುಕೊಂಡಿರುವ ಅಲೈಡ್ ಡೆಮೊಕ್ರಾಟಿಕ್ ಪಡೆ(ಎಡಿಎಫ್)ಯ ಸದಸ್ಯರು ಶುಕ್ರವಾರ ಗಡಿಪ್ರದೇಶದ ಎಂಪೋಂಡ್ರೆ ನಗರದಲ್ಲಿನ ಲುಹ್ ಬಿರುಹಾ ಸೆಕೆಂಡರಿ ಶಾಲೆಯ ಮೇಲೆ ಆಕ್ರಮಣ ಮಾಡಿದ್ದಾರೆ.
ದುಷ್ಕರ್ಮಿಗಳ ಗುಂಡೇಟಿಗೆ 38 ಮಕ್ಕಳು, ಒಬ್ಬಕಾವಲು ಸಿಬ್ಬಂದಿ ಹಾಗೂ ಇಬ್ಬರು ಸ್ಥಳೀಯರು ಬಲಿಯಾಗಿದ್ದಾರೆ ಎಂದು ನಗರದ ಮೇಯರ್ ಸಿಲ್ವರೆಸ್ಟ್ ಮಪೋಝ್ ಹೇಳಿದ್ದಾರೆ.
ಶಾಲೆಯ ಬಳಿಯಿದ್ದ ಹಾಸ್ಟೆಲ್‌ಗೆ ಬೆಂಕಿ ಹಚ್ಚಲಾಗಿದ್ದು ಆಹಾರದ ಗೋದಾಮಿಗೆ ನುಗ್ಗಿಲೂಟಿ ಮಾಡಲಾಗಿದೆ. ಐಸಿಸ್‌ನೊಂದಿಗೆ ಸಂಪರ್ಕ ದಲ್ಲಿರುವ ಅಲೈಡ್ ಡೆಮೊಕ್ರಾಟಿಕ್ ಪಡೆ ಈ ದಾಳಿ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿದೃಢಪಟ್ಟಿದೆ. ಹಲವರನ್ನು ಅಪಹರಿಸಲಾಗಿದ್ದು ಅಪಹೃತರಲ್ಲಿ ಶಾಲಾ ಮಕ್ಕಳೂ ಸೇರಿದ್ದಾರೆ. ಇದುವರೆಗೆ 25 ಮೃತ ದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಕೆಲವು ಮೃತದೇಹಗಳನ್ನು ಉಗ್ರರು ಸುಟ್ಟುಹಾಕಿದ್ದಾರೆ. ಶಂಕಿತ ಉಗ್ರರು ಕಾಂಗೋದ ವಿರುಂಗ ನ್ಯಾಷನಲ್ ಪಾರ್ಕ್‌ನಲ್ಲಿ ಅಡಗಿರುವ ಮಾಹಿತಿ ಲಭಿಸಿದ್ದು ಅಪಹೃತರ ಬಿಡುಗಡೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಬಗ್ಗೆ ಉಗ್ರರು ಎಷ್ಟು ಜನರನ್ನು ಅಪಹರಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಉಗಾಂಡ ಅಧ್ಯಕ್ಷರ ವಕ್ತಾರ ಜೋ ವಲುಸಿಂಬಿ ಹೇಳಿದ್ದಾರೆ. ದುಷ್ಕೃತ್ಯ ಎಸಗಿದ ಬಳಿಕ ಬಂಡುಗೋರರು ಉಗಾಂಡಾ ಮತ್ತು ರವಾಂಡಾ ದೇಶಗಳ ಗಡಿಭಾಗಕ್ಕೆ ಹೊಂದಿ ಕೊಂಡಿರುವ ವಿರುಂಗಾ ಎಂಬ ದಟ್ಟ ಅರಣ್ಯದಲ್ಲಿ ತಲೆಮರೆಸಿಕೊಂಡಿ ದ್ದಾರೆ. ಉಗಾಂಡಾ ಬಂಡುಗೋರರು ಹೆಚ್ಚಿರುವ ಎಡಿಎಫ್ ಪೂರ್ವ ಕಾಂಗೋ ಗಣರಾಜ್ಯದಲ್ಲಿ 1990ರ ದಶಕದ ಬಳಿಕ ಪ್ರಬಲ ಗೊಂಡಿದೆ. ಐಸಿಸ್ ಜತೆ ಸಂಪರ್ಕ ಹೊಂದಿರುವ ಎಡಿಎಫ್ 2019 ರಿಂದ ಹಲವು ದಾಳಿಗಳನ್ನು ನಡೆಸುತ್ತಿದೆ. ಆದರೆ ಶುಕ್ರವಾರ ನಡೆಸಿದ ದಾಳಿ ಇತ್ತೀಚಿನ ದಿನಗಳಲ್ಲಿನ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಒಂದಾಗಿದೆ.