ಶಿರಸಿ: ಕಸ್ತೂರಿರಂಗನ್ ವರದಿ ವಿರೋಧಿಸಿ ರಾಜಧಾನಿಯಲ್ಲಿ ನಾಳೆ ದಿ. ೨೧ ಬೃಹತ ರಾಜ್ಯ ಮಟ್ಟದ ಅರಣ್ಯವಾಸಿಗಳ ಶಕ್ತಿ ಪ್ರದರ್ಶನ.
ಶಿರಸಿ: ಕರಾವಳಿ ಮತ್ತು ಮಲೆನಾಡು ಜನಜೀವನಕ್ಕೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ರಾಜ್ಯ ಸರ್ಕಾರ ತಿರಸ್ಕರಿಸಲು ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವರದಿಯನ್ನ ತಿರಸ್ಕರಿಸಲು ಆಗ್ರಹಿಸಿ ರಾಜಧಾನಿಯಲ್ಲಿ ನಾಳೆ ೨೧ ರಂದು ರಾಜ್ಯ ಮಟ್ಟದ ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ಅರಣ್ಯವಾಸಿಗಳ ಶಕ್ತಿ ಪ್ರದರ್ಶನಗೊಳಲಿದೆ.
ರಾಜ್ಯದ ೧೬ ಜಿಲ್ಲೆಗಳಲ್ಲಿ ಅರಣ್ಯವಾಸಿಗಳ ಸಮಸ್ಯೆಗಳಿಗೆ ಹೋರಾಟದ ಮೂಲಕ ಸ್ಫಂಧಿಸುವ ಜೊತೆಯಲ್ಲಿ ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಹಕ್ಕಿನ ಕುರಿತು ಅವಶ್ಯ ಪಕ್ಷಕಾಗಿ ಅರಣ್ಯವಾಸಿಗಳ ಪರದ ನಿಲುವಿಗೆ ಬೆಂಗಳೂರು ಚಲೋ ಕಾರ್ಯಕ್ರಮವು ಸಂಘಟನಾತ್ಮಕ ಅರಣ್ಯವಾಸಿಗಳ ಸಮಸ್ಯೆ ಪರಿಹಾರಕ್ಕೆ ಅರಣ್ಯವಾಸಿಗಳ ಶಕ್ತಿ ಪ್ರದರ್ಶನಕ್ಕೆ ಹೋರಾಟಗಾರರ ವೇದಿಕೆಯು ಸಜ್ಜಾಗಿದೆ.
[
ಕಸ್ತೂರಿರಂಗನ್ ಜಾರಿಯಿಂದ ಕರ್ನಾಟಕದ ೧೦ ಜಿಲ್ಲೆಯಿಂದ ೧,೫೩೧ ಹಳ್ಳಿಗಳ ಸುಮಾರು ೨೦,೬೬೮ ಚದರ ಕಿಮೀ ಅತಿ ಸೂಕ್ಷö್ಮ ಪ್ರದೇಶ ಗುರುತಿಸಲ್ಪಟ್ಟದ್ದು ಇರುತ್ತದೆ.ಅಲ್ಲದೇ ಪ್ರದೇಶದಲ್ಲಿ ವಾಸಿಸುವ ಕಂದಾಯ ಜಮೀನಿನ ಭೂಮಿಯ ರೈತರಿಗೆ ಸಾಗುವಳಿ ಹಕ್ಕಿನ ಕೃಷಿ ಚಟುವಟಿಕೆಗೆ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಅರಣ್ಯವಾಸಿಗಳಿಗೆ ಭೂಮಿ ಹಕ್ಕಿನಿಂದ ವಂಚಿತರಾಗುವ ಆತಂಕಗೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮವು ಸರ್ಕಾರದ ಮೇಲೆ ಪರಿಣಾಮ ಬೀರಲು ಸಂಘಟಿಸಲು ಪ್ರಯತ್ನಿಸಿದ್ದಾರೆ.
ಅರಣ್ಯವಾಸಿಗಳ ಹಕ್ಕು:
ಕರ್ನಾಟಕ ರಾಜ್ಯದ ೨೫ ಜಿಲ್ಲೆಗಳಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೨,೯೫,೦೪೮ ಅರ್ಜಿಗಳು ಅರಣ್ಯವಾಸಿಗಳಿಂದ ಸಲ್ಲಿಸಲ್ಪಟ್ಟು ಅವುಗಳಲ್ಲಿ ಬುಡಕಟ್ಟು ೧೨,೪೮೧ ಪಾರಂಪರಿಕ ಅರಣ್ಯವಾಸಿಗಳಿಗೆ ೧,೯೭೬ ಹಾಗೂ ಸಮೂಹ ಉದ್ದೇಶಕ್ಕೆ ೧,೩೪೧ ಹೀಗೆ ಒಟ್ಟು ೧೫,೭೯೮ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ಬಂದಿರುವAತಹ ಅರ್ಜಿಗಳಲ್ಲಿ ಶೇ. ೫ ರಷ್ಟು ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದ್ದು ವಿಷಾದಕರ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದಕರ ವ್ಯಕ್ತಪಡಿಸಿದರು.