ಭಟ್ಕಳ: ಅಂತರ್ ಜಿಲ್ಲಾ ಮೋಟಾರು ಬೈಕ್ ಕಳ್ಳರ ಬಂಧನ; ೧೫ ಬೈಕ್ ಜಪ್ತಿ

Source: S O News | By Staff Correspondent | Published on 7th September 2023, 12:19 AM | Coastal News |

ಭಟ್ಕಳ: ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಅಂತರಜಿಲ್ಲಾ ಮೋಟಾರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮುರುಢೇಶ್ವರ, ಹೊನ್ನಾವರ, ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವುಗೈದ ಮೋಟಾರು ಬೈಕ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೋಟಾರು ಬೈಕ್ ಕಳುವು ಪ್ರಕರಣವನ್ನು ಬೇಧಿಸಲಾಗಿದ್ದು  8,35,000/- ರೂ ಮೌಲ್ಯದ ಒಟ್ಟು ೧೫ ಮೋಟಾರು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಕುಂದಗೋಳ ನಿವಾಸಿ ರವಿಚಂದ್ರ ತಳವಾರ, ಕಲಘಟಗಿಯ ಬಾಷಾ ಸಾಬ್ ಗಂಜಿಗಟ್ಟಿ, ಜಗದೀಶ್ ಬಂಡಿವಾಡ, ಸಲ್ಮಾನ್ ತಹಸಿಲ್ದಾರ ಎಂಬುವರನ್ನು ಬಂಧಿಸಲಾಗಿದೆ.

Bhatkal: Manki Police bust inter-district bike theft racket, Recover 15 bikes, and arrest four

ಆ. ೩೧ ರಂದು ೨೦೨೩ ರಂದು ಬೆಳ್ಳಿಗೆ ೦೪-೦೦ ಗಂಟೆ ಸುಮಾರಿಗೆ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕಪ್ಪು ಬಣ್ಣದ ಟಿ.ವಿ.ಎಸ್ ರೈಡರ್ ಮೋಟಾರ್ ಸೈಕಲನ್ನು ನಿಲ್ಲಿಸದೇ, ಸಂಶಯಾಸ್ಪದವಾಗಿ ಚಲಾಯಿಸಿಕೊಂಡು ಬಂದವರನ್ನು ಅಡ್ಡಗಟ್ಟಿ ನಿಲ್ಲಿಸಿ ವಿಚಾರಿಸಿದಾಗ ಸರ್ಮಪಕವಾದ ಉತ್ತರ ನೀಡದೆ ಇರುವುದರಿಂದ ಸದರಿಯವರನ್ನು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಸದರ ಮೋಟಾರ ಸೈಕಲನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಬಂದ ಬಗ್ಗೆ ಕಂಡು ಬಂದಿದ್ದು, ಭರತಕುಮಾರ ವಿ. ಪೊಲೀಸ್ ಉಪ-ನಿರೀಕ್ಷಕರು ಕಾ&ಸು ಮಂಕಿ ಪೊಲೀಸ್ ಠಾಣೆರವರು ನೀಡಿದ ದೂರಿನ ಅನ್ವಯ ಮಂಕಿ ಪೊಲೀಸ್ ಠಾಣಾ ಗುನ್ನಾ ನಂಬರ:- ೬೭/೨೦೨೩ ಕಲಂ ೪೧ (೧) (ಡಿ) ಮತ್ತು ೧೦೨ ಸಿ.ಆರ್.ಪಿ.ಸಿ ಸಹಿತ ೩೭೯ ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಈ ಪ್ರಕರಣದ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆರೋಪಿತರಾದ ಜೈಲಾನಿ, ರವಿಚಂದ್ರ ಇವರು ಉಡುಪಿ ಕಡೆಯಿಂದ ಕಪ್ಪು ಬಣ್ಣದ ಟಿವಿಎಸ್ ರೈಡರ್ ಮೋಟಾರ್ ಸೈಕಲ್ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿ ಆರೋಪಿತನಾದ ಸಲ್ಮಾನ ತಂದೆ ಇಮಾಮ್‌ಸಾಬ್ ತಹಶೀಲ್ದಾರ ಮತ್ತು ಜಗದೀಶ ತಂದೆ ಕೋಟೆಪ್ಪ ಬಂಡಿವಾಡ ಇವರೊಂದಿಗೆ ಸೇರಿ ವಿವಿಧ ಜಿಲ್ಲೆಗಳಲ್ಲಿ ಸುಮಾರು ೧೪ ಮೋಟಾರ್ ಸೈಕಲಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ ಇದರಲ್ಲಿ ಅಂಕೋಲಾ ಪೊಲೀಸ್ ಠಾಣೆಯ ೦೧, ಮುರುಡೆಶ್ವರ ಪೊಲೀಸ್ ಠಾಣೆಯ -೦೧ ಹಾಗೂ ಮಂಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿನ -೦೧ ಮೋಟಾರುಸೈಕಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಎನ್‌ಎಸ್-೧೨೫ ಪಲ್ಸರ್ ಬೈಕ್‌ನ್ನು ಹಾಗೂ ಸದ್ರಿಯವರು ಕಳ್ಳತನಮಾಡಿದ ಎಲ್ಲಾ ಮೋಟಾರ ಸೈಕಲ್‌ಗಳನ್ನು ಜಪ್ತು ಮಾಡಿಕೊಂಡಿದ್ದು ಇವುಗಳೆಲ್ಲವುಗಳ ಒಟ್ಟು ಮೌಲ್ಯ ೮,೩೫,೦೦೦ರೂ, ಆಗಿರುತ್ತದೆ ಎಂದು  ಮಂಕಿ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಷ್ಣುವರ್ಧನ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ಹಾಗೂ ಸಿ.ಟಿ. ಜಯಕುಮಾರ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಶ್ರೀಕಾಂತ. ಕೆ. ಪೊಲೀಸ್ ಉಪಾಧೀಕ್ಷಕರು ಭಟ್ಕಳರವರ ಮಾರ್ಗದರ್ಶನದಲ್ಲಿ ಚಂದನಗೋಪಾಲ (ಪ್ರಭಾರ) ಪೊಲೀಸ್ ವೃತ್ತ ನಿರೀಕ್ಷಕರು ಭಟ್ಕಳ ಗ್ರಾಮಾಂತರ ವೃತ್ತರವರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಿ ಮಂಕಿ ಪೊಲೀಸ್ ಠಾಣೆಯ ಉಪ-ನಿರೀಕ್ಷಕರುಗಳಾದ ಭರತಕುಮಾರ .ವಿ ಮತ್ತು ಮುಶಾಹಿದ್ ಅಹ್ಮದ ಹಾಗೂ ಶಿವಕುಮಾರ ಆರ್ ಪಿಎಸ್‌ಐ ತನಿಖೆ ಮುರ್ಡೇಶ್ವರ ಠಾಣೆ, ಮಂಕಿ ಹಾಗೂ ಮುರ್ಡೇಶ್ವರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ಕಿರಣಕುಮಾರ ರೆಡ್ಡಿ, ರುದ್ರಯ್ಯ ಕಾಡದೇವರ, ಲೋಕೇಶ ಕತ್ತಿ, ಮುರಳಿಧರ ನಾಯ್ಕ, ವಿಜಯ ನಾಯ್ಕ, ಮಹ್ಮದ ಶಫೀ(ಯಲ್ಲಾಪುರ ಠಾಣೆ) ರಾಜು ಗೌಡ, ಬಸವನಗೌಡ ಬಿರಾದಾರ ಹಾಗೂ ಸಿಬ್ಬಂದಿಗಳು ಆರೋಪಿತರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ೧೫ ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರವರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Read These Next

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...