ಮಂಗಳೂರು : ಎಚ್ಐಎಫ್ ವತಿಯಿಂದ ಬದ್ರಿಯಾ ಫ್ರೆಂಡ್ಸ್ ದುಬೈ ಸಂಯೋಗದೊಂದಿಗೆ ಕರ್ನಾಟಕ ಆಂದ್ರ ಗಡಿಭಾಗದ ಅಬ್ದುಲ್ಲಾ ಸಾಬ್ ಬಸ್ತಿ ಎಂಬಲ್ಲಿ ಸುಸಜ್ಜಿತ ನೂತನ ಮಸೀದಿ ಲೋಕಾರ್ಪಣೆಗೊಳಿಸಲಾಯಿತು.
ಮುಖ್ಯ ಅತಿಥಿ ಮೊಹಿದ್ದೀನ್ ಉಸ್ಮಾನ್ ಕಂದಕ್ ಅವರು ಉದ್ಘಾಟಿಸಿದರು.
ಸ್ಥಳೀಯ ಖಾಜಿ ಮೌಲಾನ ರಿಯಾಜ್ ಅಹ್ಮದ್ ದುವ ನೆರವೇರಿಸಿದರು. ಎಹ್ಸಾನ್ ಮಸೀದಿಯ ಕಾರ್ಯದರ್ಶಿ ಹನೀಫ್ ಪಿ ಎಸ್, ಬಾವ ಉಳ್ಳಾಲ್, ಉದ್ಯಮಿ ತಸ್ಲಿಮ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಎಚ್ ಐ ಎಫ್ ಅಧ್ಯಕ್ಷ ನಾಜಿಮ್ ಎಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಒಂದು ಸಮಯದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಕುಳಿತು ನಮಾಜ್ ಮಾಡುವ ಸಾಮರ್ಥ್ಯವನ್ನು ಜುಮಾ ಮಸೀದಿ ಹೊಂದಿದೆ. ಬದ್ರಿಯಾ ಫ್ರೆಂಡ್ಸ್ ದುಬೈ ವತಿಯಿಂದ ಮಸೀದಿಯ ನಿರ್ಮಾಣ ವೆಚ್ಚವನ್ನು ಬರಿಸಲಾಯಿತು. ಎಚ್ ಐ ಎಫ್ ಎಂ.ಡಿ.ಪಿ ಮಸ್ತಿದ್ ಡೆವಲಪ್ಮೆಂಟ್ ಪ್ರಾಜೆಕ್ಟ್ ವತಿಯಿಂದ ನಿರ್ಮಿತವಾದ 7 ಮಸೀದಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.