ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದವರು ಮಹರ್ಷಿ ವಾಲ್ಮೀಕಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ

Source: SO News | By MV Bhatkal | Published on 18th October 2024, 3:06 PM | Coastal News | Don't Miss |

 

ಕಾರವಾರ:ಶ್ರೀ ಮಹರ್ಷಿ ವಾಲ್ಮೀಕಿ ಅವರು ತಾವು ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿ ಧರ್ಮ, ಸಾಹಿತ್ಯ, ಪರಿಸರ ರಕ್ಷಣೆ, ಮಹಿಳೆಯರಿಗೆ ಗೌರವ ನೀಡುವುದು ಸೇರಿದಂತೆ ಹಲವು ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾರದ ಮುನಿಗಳಿಂದ ಪರಿವರ್ತನೆಗೊಂಡ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯವನ್ನು ರಚಿದರು. ಎಲ್ಲರೂ ಜೀವನದಲ್ಲಿ ಸತ್ಯದ ಪರವಾಗಿ ನಿಂತುಕೊAಡಾಗ ಮಾತ್ರ ಭವಿಷ್ಯದಲ್ಲಿ ಮುಂದೆ ಬರಲು ಸಾಧ್ಯವಿದೆ. ಸಾಧನೆಯ ಹಾದಿಗೆ ಕಷ್ಟ ಕಾರ್ಪಣ್ಯಗಳು ಅಡ್ಡಿಯಾಗಲಿದ್ದು, ಅವುಗಳನ್ನು ಎದುರಿಸಿ ಪ್ರಮಾಣಿಕವಾಗಿ ಪ್ರಯತ್ನ ಮಾಡಿದಲ್ಲಿ ಯಶಸ್ಸಿನ ಪ್ರತಿಫಲ ದೊರೆಯಲಿದೆ ಎಂಬುದನ್ನು ರಾಮಾಯಣದಲ್ಲಿ ನೋಡಬಹುದಾಗಿದೆ ಎಂದು ಹೇಳಿದರು.  
ರಾಮಾಯಣದಲ್ಲಿ ಕೇವಲ ಮನುಷ್ಯರಲ್ಲದೇ ಪ್ರಾಣಿ, ಪಕ್ಷಿ, ಪರಿಸರದ ಬಗ್ಗೆ ಬರೆಯಲಾಗಿದೆ. ಅದನ್ನು ಅರಿತುಕೊಂಡು ಅವುಗಳನ್ನು ನಾವೆಲ್ಲರೂ ರಕ್ಷಣೆ ಮಾಡೋಣ ಎಂದರು.  
ಪೊಲೀಸ್ ವರಿಷ್ಠ್ಠಾಧಿಕಾರಿ ಎಂ ನಾರಾಯಣ ಮಾತನಾಡಿ, ಮಾನವ ಸಂಬAದಗಳಿಗೆ ಬೆಲೆ ಕೊಡಬೇಕು, ಮಹಿಳೆಯರಿಗೆ ರಕ್ಷಣೆ, ಸಮಾನತೆ, ಸಹೋದರತ್ವ ,ಗುರು ಹಿರಿಯರಿಗೆ ಗೌರವ ಕೊಡಬೇಕು ಎಂಬ ಸಾತ್ವಿಕ ಗುಣಗಳು ವಾಲ್ಮೀಕಿಯವರ ರಾಮಾಯಣದಲ್ಲಿ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಲ್ಲಿವೆ ಎಂದರು.
ಶಿಕ್ಷಣ, ಉದ್ಯೋಗ, ವ್ಯಾಪಾರದಲ್ಲಿ ಹಿಂದುಳಿದ ಸಮುದಾದವರು ಮುಂದೆ ಬಂದಾಗ ಮಾತ್ರ ಸಂವಿಧಾನ ಮತ್ತು ವಾಲ್ಮೀಕಿ ಅವರ ಆಶಯಗಳು ಈಡೇರಲಿದ್ದು, ಪ್ರತಿಯೊಬ್ಬರೂ ಮಹಾನಾಯಕರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತವನ್ನು ಜಾತ್ಯತೀತ ರಾಷ್ಟçವಾಗಿ ಮಾಡೋಣ ಎಂದರು.
ಶಿಕ್ಷಕ ಡಾ.ಗಣೇಶ ಬೀಷ್ಠಣ್ಣನವರು ಶ್ರೀ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿಯನ್ನು 'ಆದಿ ಕವಿ' ಎಂದೂ ಕರೆಯುತ್ತಾರೆ. ಆದಿ ಕವಿ ಎಂದರೆ ಮೊದಲ ಕವಿ ಎಂದರ್ಥ. ವಾಲ್ಮೀಕಿ ಅವರು ಶ್ರೀರಾಮನ ವನವಾಸದ ಸಮಯದಲ್ಲಿ ಶ್ರೀರಾಮನೊಂದಿಗೆ ಇದ್ದವರು ಮತ್ತು ನಂತರ ದೇವಿ ಸೀತೆಗೆ ಅವರ ಆಶ್ರಮದಲ್ಲಿ ಆಶ್ರಯ ನೀಡಿದವರು. ಇವರ ಆರಂಭಿಕ ಹೆಸರು ರತ್ನಾಕರ. ಈತ ದರೋಡೆಕೋರನಾಗಿದ್ದ. ದೇವರ್ಷಿ ನಾರದ ಮುನಿಯಿಂದ ಭಗವಾನ್ ರಾಮನ ಮಹಾನ್ ಭಕ್ತನಾಗಿ ರೂಪಾಂತರಗೊAಡನು ಎಂದರು.

ವಾಲ್ಮೀಕಿ ಎನ್ನುವ ದಲಿತ ಸಮುದಾಯದ ಬೇಡರ ಕವಿಗೆ ದಕ್ಕಿದ ಈ ಅಪಾರ ಜನಮನ್ನಣೆಯಿಂದಾಗಿ, ಅವನ ಹಿನ್ನೆಲೆಯ ಕುರಿತು ಸಾಕಷ್ಟು ಪುರಾಣಗಳು ಸೃಷ್ಟಿಯಾಗಿರುವುದನ್ನು ನಾವು ಕೇಳಿರುತ್ತೇವೆ ಅಥವಾ ಓದಿರುತ್ತೇವೆ; ದರೋಡೆಕೋರನಾಗಿದ್ದ, ಕ್ರೂರಿಯಾಗಿದ್ದ ರತ್ನಾಕರ ಕ್ರೌಂಚ ಪಕ್ಷಿಯ ಪ್ರಕರಣದಿಂದ ಮನಃಪರಿವರ್ತನೆಯಾದ, ನಾರದ ಮಹರ್ಷಿ ಅವನ ಬದುಕು ಬದಲಾಯಿಸಿದರು. ‘ಮರ ಮರ’ ಮಂತ್ರದಿAದಲೇ ಪ್ರಭಾವಿತನಾಗಿ ರಾಮಾಯಣ ರಚಿಸಿದ, ದೀರ್ಘ ತಪಸ್ಸಿನಿಂದಾಗಿ, ಮೈಮೇಲೆ ಹುತ್ತ ಬೆಳೆದು ಅದರಿಂದ ಅವನಿಗೆ ವಾಲ್ಮೀಕಿ ಎನ್ನುವ ಹೆಸರು ಬಂತು ಎಂದರು.
ಇದೇ ವೇಳೆ ವಾಲ್ಮೀಕಿ ಸಮಾಜದ ಹಿತರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ತಳವಾರ ಹಾಗೂ ಶಿಕ್ಷಕ ಶಿಕ್ಷಕ ಗಣೇಶ ಬೀಷ್ಠಣ್ಣನವರು ಅವರನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆಗೆ ಉಪ ವಿಭಾಗಧಿಕಾರಿ ಕನಿಷ್ಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡುತ್ತಾ, ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ನಗರ ಸಭೆಯ ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ ವೈ.ಕೆ, ವಿವಿಧ ಸಂಘಟನೆಯ ಮುಖಂಡರಾದ ದೀಪಕ ಕುಡಾಳಕರ, ಹನುಮಂತಪ್ಪ ತಳವಾರ, ಜೆ.ಡಿ ಮನೋಜ, ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.

Read These Next

ಭಟ್ಕಳ: ಜಾಲಿ ಪ.ಪಂ. ವ್ಯಾಪ್ತಿಯ ಗೋವು ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು; ಮೂವರು ಆರೋಪಿಗಳ ಬಂಧನ

ಭಟ್ಕಳ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರನ್ನು ಪಡಬಿದ್ರಿಯ ಜಬ್ಬಾರ ಹುಸೈನ್ ಬ್ಯಾರಿ (37), ಹಾಗೂ ಭಟ್ಕಳ ನೀವಾಸಿಗಳಾದ ಜಲೀಲ್ ...

ಭಟ್ಕಳ:  ಸಂತೆ ಮಾರುಕಟ್ಟೆ ರಸ್ತೆ ಬದಿ ವ್ಯಾಪರಸ್ಥರ ವಿರುದ್ಧ ಪುರಸಭೆ ಕಟ್ಟುನಿಟ್ಟಿನ ಕ್ರಮ ; ವಾಹನ ಸಂಚಾರ ಸುಗಮ

ಭಟ್ಕಳ: ತಾಲೂಕಿನ ಆಸ್ಪತ್ರೆ ರಸ್ತೆಯಲ್ಲಿ ಪ್ರತೀ ಭಾನುವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ  ವ್ಯಾಪಾರಿಗಳು ರಸ್ತೆ ಬದಿಯಲ್ಲೇ ...

ನ.7‌ ಕ್ಕೆ ಬೆಂಗಳೂರು ಚಲೋ:ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನಕ್ಕೆ ತೀರ್ಮಾನ-ರವೀಂದ್ರ ನಾಯ್ಕ

ನ.7‌ ಕ್ಕೆ ಬೆಂಗಳೂರು ಚಲೋ:ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನಕ್ಕೆ ತೀರ್ಮಾನ-ರವೀಂದ್ರ ನಾಯ್ಕ