ಭಟ್ಕಳ: ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೆಷನ್ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾದ ಶ್ರೀಧರ ನಾಯ್ಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಬ್ಯಾಂಕ ಉಪಾಧ್ಯಕ್ಷರಾದ ಪರಮೆಶ್ವರ ದೇವಾಡಿಗ ವಹಿಸಿದರು, ಅತಿಥಿಗಳಾಗಿ ಉದ್ಯಮಿ ಉಮೆಶ ನಾಯ್ಕ ಮತ್ತು ರೋಹಿತ ಮೊಗೇರ ಆಗಮಿಸಿದ್ದರು.
ಈ ಪಂದ್ಯಾವಳಿ ಒಟ್ಟು 6 ತಂಡಗಳು ಬಾಗವಹಿಸಲಿದ್ದು. ನವೆಂಬರ್ 10 ತನಕ ನಡೆಯಲಿದ್ದು. ಮೊದಲ ಎರಡು ಪಂದ್ಯಗಳು ನಡೆದಿದೆ. ಮೊದಲ ಪಂದ್ಯದಲ್ಲಿ ಎಸ್.ಎಸ್.ಎಸ್ ಸ್ಪೋಟ್ಸ ಕ್ಲಬ್ ಹೆಬಳೆ ವಾರಿಯರ್ಸ್ ನಡೆದ ಹಣಾಹಣಿಯಲ್ಲಿ ಎಸ್.ಎಸ್.ಎಸ್ ಸ್ಪೋಟ್ಸ ಕ್ಲಬ್ ಜಯಶಾಲಿಯಾಗಿದ್ದು. ಎರಡನೇ ಪಂದ್ಯದಲ್ಲಿ ಅನ್ವಿ ಕ್ರಿಕೆಟರ್ಸ್ ಹಾಗೂ ವೈಕಿಂಗ್ಸ್ ಭಟ್ಕಳ ನಡುವೆ ನಡೆದ ಹಣಾಹಣಿಯಲ್ಲಿ ಅನ್ವಿ ಕ್ರಿಕೆಟರ್ಸ್ ಜಯಗಳಿಸಿದೆ.
ಪಂದ್ಯಾವಳಿಯ ಪ್ರಥಮ ಬಹುಮಾನ 55,555 ನಗದು ಹಾಗೂ ಆಕರ್ಷಕ ಟ್ರೋಫಿ , ಮತ್ತು ದ್ವಿತೀಯ ಬಹುಮಾನ 33,333 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಈ ಪಂದ್ಯಾವಳಿಯಲ್ಲಿ ಪ್ರತಿ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ - 500 ನಗದು ಹಾಗೂ ಟ್ರೋಫಿ, ಮ್ಯಾನ್ ಆಫ್ ದಿ ಸೀರಿಸ್ 5000 ಹಾಗೂ ಟ್ರೋಫಿ, ಬೆಸ್ಟ್ ಬ್ಯಾಟ್ಸ್ ಮೆನ್ 3,000 ಹಾಗೂ ಟ್ರೋಫಿ ಬೆಸ್ಟ್ ಬೌಲರ್ 3,000 ಹಾಗೂ ಟ್ರೋಫಿ, ಎಮರ್ಜಿಂಗ್ ಪ್ಲೇಯರ್ ಅವಾರ್ಡ್ 1000 ಹಾಗೂ ಟ್ರೋಫಿ ನೀಡಲಾಗುವುದು.