ಭಟ್ಕಳದ ಮನೆಯೊಂದರಿಂದ ಇನ್ವರ್ಟರ್, ಬ್ಯಾಟರಿ, ಕುಕ್ಕರ್ ಮತ್ತಿತರ ವಸ್ತುಗಳು ಕಳುವು

Source: SOnews | By Staff Correspondent | Published on 9th July 2023, 11:53 PM | Coastal News |

ಭಟ್ಕಳ: ಭಟ್ಕಳದ ಶಿಫಾ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ಭಾನುವಾರ ಕಳ್ಳತನವಾಗಿದ್ದು, ಬೀರುಗಳಲ್ಲಿದ್ದ ಚಿನ್ನಾಭರಣಗಳು ಮತ್ತು ನಗದನ್ನು ಪತ್ತೆಹಚ್ಚಲು ಕಳ್ಳರಿಗೆ ಸಾಧ್ಯವಾಗದೆ ಮನೆಯಲ್ಲಿದ್ದ ನಳ(ಟ್ಯಾಪ್‌ಗಳು), ಇನ್ವರ್ಟರ್ ಬ್ಯಾಟರಿಗಳು, ಸರ್ಕ್ಯೂಟ್ ಬ್ರೇಕರ್‌ಗಳು, ಪ್ರೆಶರ್ ಕುಕ್ಕರ್‌ಗಳು ಇತ್ಯಾದಿ ವಸ್ತುಗಳನ್ನು ಕಳುವುಗೈದಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಅತೀಕ್ ಖತೀಬ್ ಎಂಬುವರಿಗೆ  ಸೇರಿದ ಮನೆಯಲ್ಲಿ, ಜುಲೈ 4 ರಂದು ಅತೀಕ್ ಅವರ ಸಹೋದರಿ ಮನೆಗೆ ಭೇಟಿ ನೀಡಿದಾಗ ಎಲ್ಲವೂ ಸರಿಯಾಗಿತ್ತು. ಆದರೆ, ಭಾನುವಾರ, ಜುಲೈ 9 ರಂದು, ಬಂದು ನೋಡಿದಾಗ ಮನೆಯ ಮುಖ್ಯ ದ್ವಾರ ಹಾನಿಗೊಳಗಾಗಿರುವುದು ಗಮನಕ್ಕೆ ಬಂದಿದೆ. ಕಳ್ಳರು ಬೀಗ ಹಾಕಿದ್ದ ಬಾಗಿಲನ್ನು ಬಲವಂತವಾಗಿ ಒಡೆದು ಒಳ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ. ಮನೆಯೊಳಗಿದ್ದ ಕಪಾಟುಗಳು ಮುರಿದು ಬಿದ್ದಿದ್ದು, ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಮಾಹಿತಿ ಪಡೆದ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.

Read These Next

ಕಾರವಾರ: ಗ್ರಾಮ ಪಂಚಾಯತಿಗಳಲ್ಲಿ "ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ" ಅಭಿಯಾನ : ಈಶ್ವರ ಕಾಂದೂ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ಎಲ್ಲ ಗ್ರಾಮ ...

ಉತ್ತರ ಕನ್ನಡದಲ್ಲಿ ಆಸ್ತಿಗಳ ನೋಂದಣಿಗೆ ಇ-ಆಸ್ತಿ ಮತ್ತು ಕಾವೇರಿ ತಂತ್ರಾಂಶದ ಸಂಯೋಜನೆ: ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ

ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ...