ಕಾರವಾರ ಸಾಗರಮಾಲಾ ಯೋಜನೆ; ವಿಚಾರಣೆ ಏ.2ಕ್ಕೆ ಮುಂದೂಡಿಕೆ
ಕಾರವಾರ: ಸಾಗರಮಾಲಾ ಯೋಜನೆಯಡಿ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ಬುಧವಾರ ವಿಚಾರಣೆ ನಡೆದಿದೆ.
ಈ ವೇಳೆ, ಕಡಲತೀರದಲ್ಲಿ ಯತಾಸ್ಥಿತಿ ಕಾಪಾಡಿರುವ ಕುರಿತು ಬಂದರು ಇಲಾಖೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದೆ. ಅಲ್ಲದೇ, ಯೋಜನೆಗೆ ಪರಿಸರ ಅನುಮತಿ ನೀಡಿರುವುದು ಸರಿಯಾಗಿದೆ ಎಂದು ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ (ಎಸ್‍ಇಐಎಎ) ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಮುಂದಿನ ವಿಚಾರಣೆ ನಡೆಯುವವರೆಗೂ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ ನ್ಯಾಯಾಲಯ, ವಿಚಾರಣೆಯನ್ನು ಏಪ್ರಿಲ್ 2ರಂದು ನಿಗದಿಗೊಳಿಸಿದೆ. ಸಾಗರಮಾಲಾ ಯೋಜನೆ ಬಂದರು ವಿಸ್ತರಣೆಗೆ ಮೀನುಗಾರರು, ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.