ಹೆದ್ದಾರಿ ಸಮಸ್ಯೆ ಪರಿಶೀಲನೆಗೆ ಭಟ್ಕಳಕ್ಕೆ ಬಂದ ಕಾರವಾರ ತಂಡ ಅವೈಜ್ಞಾನಿಕ ಕಾಮಗಾರಿ ನಡೆಸಿದ ಐ.ಆರ್.ಬಿ ಅಧಿಕಾರಿಗಳ ತರಾಟೆ
ಭಟ್ಕಳ: ಇತ್ತಿಚೆಗೆ ಉ.ಕ ಜಿಲ್ಲಾಧಿಕಾರಿ ಜಿಲ್ಲೆಯ ಎಲ್ಲ ಅಧಿಕಾರಿಗಳೊಂದಿಗೆ ಭಟ್ಕಳದಲ್ಲಿ ಸಭೆ ನಡೆಸಿ ಹೆದ್ದಾರಿ ಸಮಸ್ಯೆ ಕುರಿತಂತೆ ಸರ್ಕಾರ ವರದಿ ನೀಡಲಿದ್ದು ಸ್ಥಳಿಯ ಅಧಿಕಾರಿಗಳು ಸಂಘಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಕಾರಣ ಕಂಡು ಹಿಡಿಯಿರಿ ಎಂದು ಖಡಕ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಭಟ್ಕಳಕ್ಕೆ ಆಗಮಿಸಿದ ನಗರ ಯೋಜನಾಭಿವೃದ್ಧಿ ಪ್ರೋಜೆಕ್ಟ್ ಡೈಕರೆಕ್ಟರ್ ಸ್ಟೆಲ್ಲಾ ವರ್ಗೀಸ್ ಹಾಗೂ ಅವರ ಅಧಿಕಾರಿಗಳ ಭಟ್ಕಳದ ವಿವಿಧ ಕಡೆಗಳಲ್ಲಿ ಹೆದ್ದಾರಿಯನ್ನು ಪರಿಶೀಲಿಸಿದರು.
ಈ ಮಣ್ಕುಳಿಯಲ್ಲಿ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದನ್ನು ಕಂಡ ಅಧಿಕಾರಿಗಳ ತಂಡ ಐ.ಆರ್.ಬಿ ಕಂಪನಿಯ ಇಂಜೀಯರರನ್ನು ತರಾಟೆಗೆ ತೆಗೆದುಕೊಂಡರು. ರಾಘವೆಂದ್ರ ಮಠಕ್ಕೆ ಹೋಗುವ ಮಾರ್ಗದಲ್ಲಿ ಹೆದ್ದಾರಿಯ ನೀರು ಹರಿದು ಹೋಗುವ ಮಧ್ಯಭಾಗದಲ್ಲೇ ಸೆಫ್ಟಿಕ್ ಚೇಂಬರ್ ಇದ್ದು ಇದರಿಂದಾಗಿ ನೀರು ಹರಿದು ಹೋಗದೆ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿರುವುದನ್ನು ಗಮನಿಸಿದ ಅವರು ಸಾರ್ವಜನಿಕರೆದುರೆ ಐಆರ‍್ಬಿಯವರನ್ನು ತರಾಟೆ ತೆಗೆದುಕೊಂಡಿದ್ದು ಇಂತಹ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವೇ ಭಟ್ಕಳದ ಇಂದಿನ ದುಸ್ತಿಗೆ ಕಾರಣ ಎಂದರು. ಅಲ್ಲದೆ ಕೆ.ಎಸ್.ಆರ್.ಟಿ ಬಸ್ ನಿಲ್ದಾಣ ಎದರು, ಶಮ್ಸುದ್ದೀನ್ ವೃತ್ತ, ಸಾಗರ್ ರಸ್ತೆ ರಂಗೀನಕಟ್ಟೆಗಳಲ್ಲಿ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದನ್ನು ಗಮನಿಸಿದ್ದು ಪುರಸಭೆ ಮುಖ್ಯಾಧಿಕಾರಿ ಹಾಗೂ ಐ.ಆರ್.ಬಿ ಅಧಿಕಾರಿಗಳನ್ನು ಯಾವ ರೀತಿ ಇದನ್ನು ಸರಿಪಡಿಸುತ್ತೀರೆಂಬ ಬಗ್ಗೆ ಯೋಜನೆ ರೂಪಿಸಲು ಸೂಚಿದರು.
ಇದಕ್ಕೂ ಮುಂಚೆ ಪ್ರವಾಸಿ ಮಂದಿರದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ ರ ಅಧ್ಯಕ್ಷತೆಯಲ್ಲಿ ಪುರಸಭಾ, ಪಟ್ಟಣ ಪಂಚಾಯತ್ ಹಾಗೂ ವಿವಿಧ ಮುಖಂಡರೊಂದಿಗೆ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಯನಾ ಜಿಲ್ಲಾಧಿಕಾರಿಗಳು ಹೆದ್ದಾರಿ ಸಮಸ್ಯೆ ಕುರಿತಂತೆ ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಇದನ್ನು ಕೂಡಲೇ ಪರಿಹರಿಸುವಂತೆ ಸೂಚಿಸಿದ್ದಾರೆ. ಇದಕ್ಕಾಗಿ ಸ್ಥಳೀಯರು ಎಲ್ಲೆಲ್ಲಿ ಸಮಸ್ಯೆಗಳಿವೆ ಎಂದು ಗಮನಕ್ಕೆ ತಂದರೆ ಅವುಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪುರಸಭೆಯ ಮಾಜಿ ಅಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಸದಸ್ಯರಾದ ಇಮ್ರನ್ ಲಂಕಾ, ತೌಫಿಖ್ ಬ್ಯಾರಿ, ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ್ ನಾಯಕ, ನಾಗರೀಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಸತೀಶ್ ನಾಯ್ಕ ಸೇರಿದಂತೆ ವಿವಿಧ ಸಂಘ ಸಂಸ್ಥೇಯ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು.