ರೋಡಾಲ್ಪ್ ಡೀಸೆಲ್ 1893ರ ಅಗಸ್ಟ್ 10ರಂದು ತಮ್ಮ ಮೊದಲ ಡೀಸೆಲ್ ಇಂಜಿನ್ ಮಾದರಿಯಲ್ಲಿ ಕಡಲೆಕಾಯಿ ಎಣ್ಣೆಯನ್ನು ಇಂಧನವಾಗಿ ಬಳಸಿ ಯಂತ್ರವನ್ನು ಚಾಲನೆ ಮಾಡಿ ತೋರಿಸಿರಿಂದ ಪ್ರತಿ ವರ್ಷ ಅಗಸ್ಟ್ 10ನ್ನು ಅಂತರಾಷ್ಟ್ರೀಯ ಜೈವಿಕ ಇಂಧನ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಈ ಪ್ರಯುಕ್ತ ದಿನಾಂಕ 10.08.2017ರಂದು ಕರ್ನಾಟಕ ರಾಜ್ಯ ಅರಣ್ಯ ವಿಭಾಗ ಹೊನ್ನಾವರ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಬೆಂಗಳೂರು, ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಕುಮಟಾ, ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರ ಹಾಗೂ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ಕಾರವಾರ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ಕುಮಟಾದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ. ಕೆ. ವಿ. ವಸಂತ ರೆಡ್ಡಿಭಾ.ಅ.ಸೇ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹೊನ್ನಾವರ ವಿಭಾಗ, ಉತ್ತರ ಕನ್ನಡ ಇವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ. ಹೊನ್ನಪ್ಪ ಎನ್. ನಾಯಕ ಅಧ್ಯಕ್ಷರು, ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘ (ರಿ), ಹಿರೇಗುತ್ತಿ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ. ಚಂದ್ರಶೇಖರ ನಾಯಕಭಾ.ಆ.ಸೇ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಉತ್ತರ ಕನ್ನಡ, ಶ್ರೀ. ಮೋಹನ್ ಬಿ. ಕೆರೆಮನೆ, ಕಾರ್ಯದರ್ಶಿ, ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘ (ರಿ), ಹಿರೇಗುತ್ತಿ, ಶ್ರೀ. ಶಾಂತಾ ಎನ್. ನಾಯಕ, ಸದಸ್ಯರು, ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘ (ರಿ), ಹಿರೇಗುತ್ತಿ ಆಗಮಿಸಲಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಬೀಜದ ಉಂಡೆ ತಯಾರಿಸುವುದು, ಜೈವಿಕ ಇಂಧನ ಸಸ್ಯ ನೆಡುವುದು, ಜೈವಿಕ ಡಿಸೇಲ್ ವಾಹನಗಳಿಗೆ ಹಾಕುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲರೂ ಈ ಜೈವಿಕ ಇಂಧನ ದಿನಾಚರಣೆಯಲ್ಲಿ ಭಾಗವಹಿಸಬೇಕಾಗಿ ವಿ.ಎನ್.ನಾಯಕ ಸಂಘಟಕರ ಪರವಾಗಿ ತಿಳಿಸಿದ್ದಾರೆ.