ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

Source: S O News/Press release | By I.G. Bhatkali | Published on 6th January 2024, 8:21 PM | Coastal News | Special Report |

ಕಾರವಾರ: ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ವಿತರಿಸಲಾಗುವ ಯುಡಿಐಡಿ ಕಾರ್ಡ್ಗಳ ವಿತರಣೆಯಲ್ಲಿ ಶೇ.97.23 ಪ್ರಗತಿ ಸಾಧಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ.

ಜಿಲ್ಲೆಯಲ್ಲಿ ಡಿಸೆಂಬರ್ ವರೆಗೆ 25,766 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 5,704 ಅರ್ಜಿಗಳು ಮರು ಅರ್ಜಿ ಸಲ್ಲಿಕೆ ಮತ್ತಿತರ ಕಾರಣಗಳಿಂದ ತಿರಸ್ಕೃತಗೊಂಡಿದ್ದು, ಬಾಕಿ ಉಳಿದ 20,062 ಅರ್ಜಿಗಳಲ್ಲಿ 19,507 ಅರ್ಜಿಗಳನ್ನು ಪರಿಶೀಲಿಸಿ ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಲಾಗಿದ್ದು, 17,581 ಕಾಡ್ ðಗಳನ್ನು ಮುದ್ರಿಸಿ ವಿತರಿಸಲಾಗಿದ್ದು, 1,926 ಕಾರ್ಡ್ ಗಳು ಮುದ್ರಣಕ್ಕೆ ನೀಡಲಾಗಿದೆ. ಬಾಕಿ ಉಳಿದ 555 ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವ ಮೂಲಕ ಶೇ.100 ಸಾಧನೆ ಮಾಡುವ ಗುರಿ ಹೊಂದಲಾಗಿದೆ.

ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜು ನಲ್ಲಿ ಸ್ವೀಕಾರವಾದ ಅರ್ಹ 11,410 ಅರ್ಜಿಗಳಲ್ಲಿ 11,145 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.97.68, ಅಂಕೋಲ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 413 ಅರ್ಜಿಗಳಲ್ಲಿ 407 ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಿದ್ದು ಶೇ.98.55, ಕುಮುಟಾ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 474 ಅರ್ಜಿಗಳಲ್ಲಿ 457 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.96.41, ಹೊನ್ನಾವರ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 866 ಅರ್ಜಿಗಳಲ್ಲಿ 831 ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಿದ್ದು ಶೇ.95.96, ಭಟ್ಕಳ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 951 ಅರ್ಜಿಗಳಲ್ಲಿ 905 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.95.16, ಶಿರಸಿ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,926 ಅರ್ಜಿಗಳಲ್ಲಿ 1,920 ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಿದ್ದು ಶೇ.99.69, ಸಿದ್ದಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 542 ಅರ್ಜಿಗಳಲ್ಲಿ 515 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.95.02, ಯಲ್ಲಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 218 ಅರ್ಜಿಗಳಲ್ಲಿ 175 ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಿದ್ದು ಶೇ.80.28, ಮುಂಡಗೋಡು ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,048 ಅರ್ಜಿಗಳಲ್ಲಿ 1,003 ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಿದ್ದು ಶೇ.95.71, ಹಳಿಯಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,653 ಅರ್ಜಿಗಳಲ್ಲಿ 1,598 ಯುಡಿಐಡಿ ಕಾರ್ಡ್ ಗಳನ್ನು ಸೃಜಿಸಿದ್ದು ಶೇ.96.67, ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 561 ಅರ್ಜಿಗಳಲ್ಲಿ 551 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.98.22 ಪ್ರಗತಿಯಾಗಿದ್ದು ಒಟ್ಟು ಜಿಲ್ಲೆಯಲ್ಲಿ ಶೇ.97.23 ಸಾಧನೆ ಆಗಿದೆ.

ಈ ಯುಡಿಐಡಿ ಗುರುತಿನ ಚೀಟಿ ಯೋಜನೆಯು ವಿಶೇಷ ಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಶೇಷ ಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ. ಈ ವಿಶಿಷ್ಟÀ್ಟ ಗುರುತಿನ ಚೀಟಿ ಯೋಜನೆಯು ದೇಶದ ವಿಶೇಷಚೇತನರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುವುದಲ್ಲದೆ ಈ ಯೋಜನೆಯ ಉದ್ದೇಶವು ಸರ್ಕಾರದ ಸೌಲಭ್ಯಗಳು ಅವರಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಮಾಡುವುದಾಗಿದೆ. ವಿಕಲಚೇತನರಿಗೆ ಸಂಬAಧಿಸಿದAತೆ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ಪಾರದರ್ಶಕತೆಯನ್ನು ಕಾಪಾಡುವುದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡುವುದರಲ್ಲಿ ಕೂಡಾ ಇದು ಸಹಕಾರಿಯಾಗಿದೆ. ವಿಶೇಷಚೇತನರ ಈ ವಿಶಿಷ್ಠ ಗುರುತಿನ ಚೀಟಿಯು ಅವರ ಜೀವನದಲ್ಲಿ ಆಧಾರ್ ಕಾರ್ಡ್ನಷ್ಟೇ ಪ್ರಮುಖವಾದ ದಾಖಲೆಯಾಗಿದೆ. ವಿಶೇಷಚೇತನ ವ್ಯಕ್ತಿಯ ವಿಕಲತೆಗೆ ಸಂಬAಧಿಸಿದ ಮುಖ್ಯ ದಾಖಲೆಯನ್ನು ಇದು ಹೊಂದಿರುವುದರಿAದ ದೇಶವ್ಯಾಪಿ ಮಾನ್ಯತೆ ಇದೆ. ಈ UDID ಕಾರ್ಡ್ನ್ನು ಅಂಗವೈಕಲ್ಯತೆಯ ಪುರಾವೆಯಾಗಿ ಭಾರತದಾದ್ಯಂತ ಪರಿಗಣಿಸಲಾಗುತ್ತದೆ.

ಈ ಹಿಂದೆ ರಾಜ್ಯದಲ್ಲಿ 15 ನೇ ಸ್ಥಾನದಲ್ಲಿದ್ದ ಉತ್ತರಕನ್ನಡ ಜಿಲ್ಲೆಯು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸುವ ಮೂಲಕ ವಿಶೇಷ ಚೇತನರನ್ನು ಪರೀಕ್ಷಿಸಿ ಹಾಗೂ ಅವರ ಅಂಗವಿಕಲತೆಯ ಪ್ರಮಾಣವನ್ನು ಗುರುತಿಸಿ, ಸಮೀಪದ ತಾಲ್ಲೂಕು ಆಸ್ಪತ್ರೆಗಳಲ್ಲಿ ಯುಡಿಐಡಿ ಕಾರ್ಡ್ಗಳ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದ ನಂತರ ನೋಂದಣಿಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸುವುದರ ಮೂಲಕ ಪ್ರಸ್ತತ ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ. ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಪರಸ್ಪರ ಸಮನ್ವಯದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಅತ್ಯಂತ ಶೀಘ್ರದಲ್ಲಿ ಶೇ.100 ಸಾಧನೆಯೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವತ್ತ ಜಿಲ್ಲೆಯು ದಾಪುಗಾಲಿಟ್ಟಿದೆ...

Read These Next

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...