ಕಾರವಾರ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ: ಅರ್ಜಿ ಆಹ್ವಾನ

Source: S O News | By I.G. Bhatkali | Published on 7th December 2024, 7:44 PM | Coastal News | Don't Miss |

ಕಾರವಾರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ (ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದಿರುವ) ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯ (ಮುಸ್ಲಿಂ, ಕ್ರೀಶ್ಚಿಯನ್, ಜೈನ್ ಭೌದ್ಧ, ಪಾರ್ಸಿ, ಸಿಖ್) ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆರ್ಥಿಕ ವರ್ಷದ ಅನುದಾನಕ್ಕೆ ಅನುಗುಣವಾಗಿ, ಕೋರ್ಸುಗಳ ಅವಧಿಗೆ ತಕ್ಕಂತೆ ಪ್ರತಿ ವರ್ಷ ರೂ 25,000 ವಿಶೇಷ ಪ್ರೋತ್ಸಾಹ ಧನ ಗರಿಷ್ಠ 2 ವರ್ಷ ನೀಡಲಾಗುವುದು ಅರ್ಜಿಯನ್ನು ಸಲ್ಲಿಸುವ ಬಯಸುವ ವಿದ್ಯಾರ್ಥಿಗಳ ಪಾಲಕರ ವಾರ್ಷಿಕ 6 ಲಕ್ಷ ಮೀರಿರಬಾರದು. ಮತ್ತು ವಿದ್ಯಾರ್ಥಿಗಳ ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ.50 ರಷ್ಟು ಅಂಕ ಗಳಿಸಿರಬೇಕು, ಕಡ್ಡಾಯವಾಗಿ ಸೇವಾಸಿಂಧು ವೆಬ್‌ಸೈಟ್ ನಲ್ಲಿ ಡಿ.25 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: https://sevasindhu.karnataka.gov.in/ ಅಥವಾ ತಮ್ಮ ತಾಲೂಕಿನ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ, ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉತ್ತರ ಕನ್ನಡ, ಕಾರವಾರ ದೂರವಾಣಿ ಸಂಖ್ಯೆ 08382-220336 ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಯಹಾಯವಾಣಿ: 8277799990 ನ್ನು ಸಂಪರ್ಕಿಸುವAತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ...

ಭಟ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ಮುರುಡೇಶ್ವರ ದಲ್ಲಿ ಅದ್ದೂರಿ ಸ್ವಾಗತ

20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ  ವಿವಿಧ ಸಂಘಟನೆ ಹಾಗೂ ...