ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು..

Source: sonews | By Staff Correspondent | Published on 9th May 2018, 4:53 PM | State News | Interview | Don't Miss |

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸನ್ಮಾರ್ಗ ನಡೆಸಿದ ಸಂದರ್ಶನ ಇದು.
 

ರಾಜ್ಯ ವಿಧಾನಸಭಾ ಚುನಾವಣಾ ಯಾಕೆ ಮಹತ್ವಪೂರ್ಣ ಮತ್ತು ಮತದಾರರ ಜವಾಬ್ದಾರಿಗಳೇನು?

ಆಡಳಿತವು ಬಹಳ ದೊಡ್ಡ ಸಂಸ್ಥೆಯಾಗಿದೆ. ಅದು ಜನರ ಮೇಲೆ ಅಪಾರ ಪ್ರಭಾವ ಮತ್ತು ಅಧಿಕಾರವನ್ನು ಹೊಂದಿದೆ. ಆಡಳಿತದ ಬಳಿ ಶಕ್ತಿಯ ಅಪಾರ ಮಾಧ್ಯಮಗಳೂ ಸಂಪನ್ಮೂಲಗಳೂ ಇರುತ್ತವೆ. ಮಾನವನ ಆಲೋಚನೆ, ಅವನ ಚಿಂತನೆ ಮತ್ತು ಕರ್ಮಗಳ ಮೇಲೆ ಆಡಳಿತವು ಪ್ರಭಾವ ಬೀರುವುದು ಮಾತ್ರವಲ್ಲ, ಅದು ಅಧಿಕಾರವನ್ನೂ ಹೊಂದಿದೆ. ಮಾನವ ಪೀಳಿಗೆಗಳು ಆಡಳಿತದ ಮೇಲ್ನೋಟದಲ್ಲಿಯೇ ಸಿದ್ಧಗೊಳ್ಳುತ್ತವೆ.
ವಿಭಿನ್ನ ಆಡಳಿತ ವಿಧಾನಗಳಲ್ಲಿ ಪ್ರಜಾಪ್ರಭುತ್ವವು ಅತ್ಯುತ್ತಮ ವಿಧಾನ ಎಂದು ಗುರುತಿಸಿಕೊಂಡಿದೆ. ಚುನಾವಣೆಗಳು ಅದರ ಪ್ರಮುಖ ಕೊಂಡಿಗಳಾಗಿವೆ. ಜನರಿಂದ ಚುನಾಯಿತರಾಗಿ ಅಸೆಂಬ್ಲಿ ಅಥವಾ ಪಾರ್ಲಿಮೆಂಟ್‍ಗೆ ಹೋಗುವ ಜನ ಪ್ರತಿನಿಧಿಗಳ ಅಧಿ ಕಾರದಲ್ಲಿ ಸರ್ವವೂ ಇರುವುದಿಲ್ಲ ಎಂಬುದು ವಾಸ್ತವ. ಆದಾಗಿಯೂ ಆಡಳಿತದ ನೀತಿಗಳು ಮತ್ತು ಕಾನೂನುಗಳ ಮೇಲೆ ಬೇರೆಯೇ ಶಕ್ತಿಗಳ ಪ್ರಭಾವ ಹಾಗೂ ಹಿಡಿತವಿರುವುದು ಕೂಡ ಅಷ್ಟೇ ಸತ್ಯ. ಆದರೂ ಚುನಾವಣೆಗಳ ಮಹತ್ವ ಇನ್ನೂ ಉಳಿದುಕೊಂಡಿದೆ. ಚುನಾವಣೆಗಳ ಮುಖಾಂತರ ಬಹಳಷ್ಟು ಸಾಧ್ಯತೆಗಳಿವೆ. ಚುನಾವಣಾ ಪ್ರಕ್ರಿಯೆಯನ್ನು ಬಲಗೊಳಿಸುವಲ್ಲಿ, ಅರ್ಥಪೂರ್ಣ ಗೊಳಿಸುವಲ್ಲಿ ಮತ್ತು ಪರಿಣಾಮಕಾರಿಯನ್ನಾಗಿ ಮಾಡುವಲ್ಲಿ ನಿರ್ಲಕ್ಷ್ಯ ಸರ್ವಥಾ ಸಲ್ಲದು. ಈ ಪ್ರಮುಖ ಕಾಯಕದಲ್ಲಿ ಮತದಾರರ ಪ್ರಾಮುಖ್ಯತೆಯು ಬಹಳವಿದೆ. ಅದು ಪ್ರಾಮುಖ್ಯ ವಾಗಿರುವಷ್ಟೇ ಹೊಣೆಗಾರಿಕೆಯೂ ಆಗಿದೆ.
ಹಾಗಾಗಿ ಮತದಾರರಿಗೆ ತಮ್ಮ ಸ್ಥಾನಮಾನ ಮತ್ತು ಹೊಣೆಗಾರಿ ಕೆಯ ಪ್ರಜ್ಞೆ ಇರಬೇಕಾಗಿದೆ. ಮತದಾನವನ್ನು ಹಗುರವಾಗಿ ಪರಿಗಣಿಸ ಬಾರದು. ಒಂದೊಂದು ಮತ ಕೂಡ ಅಮೂಲ್ಯವಾಗಿದೆ. ಕೆಲವೊಮ್ಮೆ ಒಂದು ಮತವು ಸೋಲು-ಗೆಲುವನ್ನು ನಿರ್ಧರಿಸಿದ್ದೂ ಇದೆ.
ಮತದಾನವು ಒಂದು ರೀತಿಯಲ್ಲಿ ಸಾಕ್ಷ್ಯವಾಗಿದೆ. ಅದು ಒಬ್ಬರ ಪರವಾಗಿ ಮತ್ತು ಇನ್ನೊಬ್ಬರ ವಿರುದ್ಧವಾಗಿ ನೀಡುವ ವಹಿಸುವ ಸಾಕ್ಷ್ಯವಾಗಿದೆ. ಹಾಗಾಗಿ ನಿಜ ಸಾಕ್ಷ್ಯಕ್ಕೆ ಪ್ರತಿಫಲ ಮತ್ತು ಸುಳ್ಳು ಸಾಕ್ಷ್ಯಕ್ಕೆ ಶಿಕ್ಷೆ ಇದೆ. ಸಾಕ್ಷ್ಯ ನೀಡುವಲ್ಲಿ ಪ್ರಮಾದ ಅಥವಾ ಮರೆವು ಸಂಭವಿಸಬಹುದು. ಆದರೆ ಅದರಲ್ಲಿ ಸುಳ್ಳು ಇರಬಾರದು. ಅಂದರೆ ಒಬ್ಬ ಅಭ್ಯರ್ಥಿಯು ದೇಶ ಮತ್ತು ಸಮಾಜಕ್ಕೆ ಅನರ್ಹನೆಂದು ತಿಳಿದಿ ರುತ್ತಾ ಅವನ ಪರವಾಗಿ ಮತ ಚಲಾಯಿ ಸುವುದು ಸುಳ್ಳು ಸಾಕ್ಷ್ಯ ನುಡಿಯುವುದಕ್ಕೆ ಸಮವಾಗಿದೆ.
ಸಾಕ್ಷ್ಯದ ಖರೀದಿ ಅಥವಾ ಮಾರಾಟವು ಸಲ್ಲದು. ಅಕ್ರಮಿ ಮತ್ತು ಅನರ್ಹ ಆಡಳಿತಗಾರನ ವಿರುದ್ಧ ಅರ್ಹ ಮತ್ತು ಸರಿಯಾದ ವಿಧಾನದಲ್ಲಿ ಹೋರಾಡುವ ಅತಿ ಪ್ರಮುಖ ಹಾದಿಯು ಚುನಾವಣೆಯಾಗಿದೆ. ಮತದಾನವು ಈ ಹೋರಾಟದ ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಆಯುಧವಾಗಿದೆ.

ಬಿಜೆಪಿಯು ಧರ್ಮವನ್ನು ಮುಂದಿಟ್ಟು ಮತ ಯಾಚಿಸುತ್ತಿದೆ. ಮುಸ್ಲಿಂ- ಹಿಂದೂ ಎಂದು ಸಮಾಜವನ್ನು ವಿಭಜಿಸುತ್ತಿದೆ. ಜಮಾತೆ ಇಸ್ಲಾಮೀ ಹಿಂದ್ ಎಂಬ ಧಾರ್ಮಿಕ ಸಂಘಟನೆಯ ರಾಜ್ಯ ಅಧ್ಯಕ್ಷ ರೆಂಬ ನೆಲೆಯಲ್ಲಿ ಬಿಜೆಪಿಯು ಧರ್ಮವನ್ನು ಹೀಗೆ ಬಳಸಿಕೊಳ್ಳುವುದನ್ನು ಒಪ್ಪುತ್ತೀರಾ?

ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯು ಬಹಳ ಪ್ರಮುಖವಾಗಿದೆ. ಕೇಂದ್ರ ಮತ್ತು 20ಕ್ಕಿಂತಲೂ ಆರ್ಥಿಕ ರಾಜ್ಯಗಳಲ್ಲಿ ಭಾಜಪದ ಆಡಳಿತವಿದೆ. ಈ ಪಕ್ಷವು ಹಿಂದುತ್ವದ ಉತ್ಥಾನ ಮತ್ತು ಅದರ ಆಡಳಿತ ಸಿದ್ಧಾಂತ ಹಾಗೂ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಶೀಲವಾಗಿದೆ. ದೌರ್ಭಾಗ್ಯವಶಾತ್ ಅವರು ಹಿಂದೂ ಧರ್ಮದ ಮೂಲ ನೀತಿ ಮತ್ತು ಶಿಕ್ಷಣವನ್ನು ಕಡೆಗಣಿಸಿ, ಒಂದು ನಿರ್ದಿಷ್ಟ ವರ್ಗದ ಏಳಿಗೆ ಮತ್ತು ಇತರ ವರ್ಗಗಳ ದಮನಕ್ಕೆ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ದ್ವೇಷ, ಭಯ ಮತ್ತು ಭೀತಿಯ ಹಾದಿಯನ್ನು
ತುಳಿಯುತ್ತಿದ್ದಾರೆ. ಅಪರಾಧ, ಗುಲ್ಲು-ಗದ್ದಲ ಇತ್ಯಾದಿ ಅವರ ಗುಣ-ಸ್ವಭಾವವಾಗಿದೆ. ಅವರ ಘೋಷಣೆಗಳೆಲ್ಲವೂ ಸುಳ್ಳು ಮತ್ತು ಮೋಸವೆಂದು ಸಾಬೀತಾಗಿದೆ. `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಯು ಕೇವಲ ಕೋಟ್ಯಾಧಿಪತಿಗಳ ವಿಕಾಸಕ್ಕೆ ಸೀಮಿತವಾಗಿದೆ. ನ್ಯಾಯಾಲಯದ ವ್ಯವಸ್ಥೆಯನ್ನು ಸಂಪೂರ್ಣ ಅಡಿಮೇಲುಗೊಳಿಸಲಾಗಿದೆ. ಅಪರಾಧಿಗಳನ್ನು ರಕ್ಷಿಸಲಿಕ್ಕಾಗಿ ಅಮಾಯಕರನ್ನು ಸಿಲುಕಿಸಲಾಗುತ್ತಿದೆ. ಸ್ತ್ರೀಯರ ಮತ್ತು ಹೆಣಮಕ್ಕಳ ಮಾನವನ್ನು ಚಿಂದಿಚಿಂದಿ ಮಾಡಲಾಗಿದೆ.
ಇವೆಲ್ಲವನ್ನೂ ಬಹಳ ಕುಯುಕ್ತಿ ಮತ್ತು ಮೋಸದಿಂದ ಮಾಡಲಾಗುತ್ತಿದೆ. ಅಂದರೆ ಕೈಗೆ ಕಲೆಯೂ ಅಗಲ್ಲ, ಕತ್ತಿಯೂ ರಕ್ತದಿಂದ ತೋಯಲಿಲ್ಲ… ನೀವು ಕೊಲೆ ಮಾಡುತ್ತಿದ್ದೀರೋ ಅಥವಾ ಪವಾಡವೋ ಎಂಬಂತೆ. ಇಂತಹುದೇ ಮಾನವ ವಿರೋಧಿ ಪಕ್ಷವು ಕರ್ನಾಟಕ ವಿಧಾನಸಭೆ ಗೆಲ್ಲಲಿಕ್ಕಾಗಿ ಶತಪ್ರಯತ್ನ ವನ್ನೆಸಗುತ್ತಿದೆ. ಇದರಿಂದ ನಮ್ಮ ರಾಜ್ಯವನ್ನು ಸುರಕ್ಷಿತವಾಗಿರಿಸುವುದು ಪ್ರತಿಯೋರ್ವ ನ್ಯಾಯಪ್ರಿಯ, ಮಾನವಸ್ನೇಹಿಯ ಕರ್ತವ್ಯವಾಗಿದೆ.

 ಸಿದ್ದರಾಮಯ್ಯ ಸರಕಾರದ ಬಗ್ಗೆ ನಿಮ್ಮ ನಿಲುವೇನು?ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು 2013ರಿಂದಲೂ ಉತ್ತಮ ಆಡಳಿತವನ್ನು ನೀಡುತ್ತಿದೆ. ಮುಖ್ಯಮಂತ್ರಿಯವರ ಚಾರಿತ್ರ್ಯ, ಅವರ ಚಿಂತನೆಗಳು ಮತ್ತು ಅಡಳಿತ ವೈಖರಿಯು ಇತರರಿಗಿಂತ, ವಿಶೇಷತಃ ಭಾಜಪದವರಿಗಿಂತ ಎಷ್ಟೋ ಪಟ್ಟು ಉತ್ತಮವಾಗಿದೆ. ಜನಸ್ನೇಹಿ ಕಾರ್ಯಕ್ರಮ, ಬಡವರ ಕಲ್ಯಾಣ, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ನಿಲುವು ಎಲ್ಲವೂ ಪ್ರಶಂಸಾರ್ಹವಾಗಿದೆ. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದೆಯಾದರೂ ಒಟ್ಟಾರೆಯಾಗಿ ಒಂದು ಉತ್ತಮ ಆಡಳಿತ ಎನ್ನಬಹುದಾಗಿದೆ.

ಕನ್ನಡಿಗರಿಗೆ ನೀವು ಕೊಡುವ ಸಲಹೆಗಳೇನು?
ಕರ್ನಾಟಕದ ಜನತೆಯ ಮೇಲೆ ಈಗ ಇಡೀ ದೇಶವೇ ದೃಷ್ಟಿಯನ್ನಿರಿಸಿದೆ. ನಮ್ಮ ವಿಧಾನಸಭಾ ಚುನಾವಣೆಯ ಫಲಿತಾಂಶವು ಇಡೀ ದೇಶದ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಯನ್ನು ಹೊಂದಿದೆ. ವಿಶೇಷತಃ ಮುಂಬರುವ ವಿಧಾನಸಭಾ ಚುನಾವಣೆಯು ಗಾಢ ಪ್ರಭಾವ ವನ್ನು ಬೀರಲಿದೆ. ನಿಶ್ಚಯವಾಗಿಯೂ ವಿಧಾನಸಭಾ ಚುನಾವಣೆಯು ಇಡೀ ದೇಶದ ಭವಿಷ್ಯದ ನಿಟ್ಟಿನಲ್ಲಿ ಬಹಳ ಸೂಕ್ಷ್ಮ ಹಂತವಾಗಿದೆ.
ಇಂತಹ ಸ್ಥಿತಿಯಲ್ಲಿ ಬಹಳ ಹೊಣೆಗಾರಿಕಾ ಪ್ರಜ್ಞೆಯೊಂದಿಗೆ ಮತದಾನ ಮಾಡಬೇಕಾಗಿದೆ. ನಮ್ಮ ಕುಟುಂಬ ಮತ್ತು ನೆರೆಕರೆಯವರಲ್ಲಿಯೂ ಈ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ.

ಕೃಪೆ:ಸನ್ಮಾರ್ಗ

Read These Next

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...

ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ!

ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ...

ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ

ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...