ಕಾರವಾರ: ಜಿಲ್ಲಾ ಯೋಜನಾ ಉದ್ಯೋಗ ವಿನಿಮಯ ಕಚೇರಿ, ವತಿಯಿಂದ ಸೆಪ್ಟಂಬರ 17 ರಿಂದ 19ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 4.30 ರ ವರೆಗೆ “ಸೆಕ್ಯುರಿಟಿ ಇಂಟಲಿಜೆನ್ಸ್ ಸರ್ವೀಸಸ್” (SIS), ಬೆಂಗಳೂರು ಇವರ ಮೂಲಕ ‘ಸೆಕ್ಯುರಿಟಿ ಗಾಡ್ರ್ಸ್’ ಹುದ್ದೆಗಳಿಗಾಗಿ ಸಂದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ., ಪಿಯುಸಿ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನ ಶಿಬಿರಗಳಲ್ಲಿ ಭಾಗವಹಿಸಬಹುದಾಗಿರುತ್ತದೆ.
ಸೆಪ್ಟಂಬರ 17 ರಂದು ಯೋಜನಾ ಉದ್ಯೋಗ ವಿನಿಮಯ ಕಛೇರಿ, ಶ್ರೀಮತಿ ಪ್ರೇಮಾಬಾಯಿ ರಾಯ್ಕರ, ಪಂಜಾಬ್ ನ್ಯಾಶನಲ ಬ್ಯಾಂಕ ಹತ್ತಿರ, ಓಲ್ಡ, ಎಸ್.ಬಿ.ಎಮ್. ಬ್ಯಾಂಕ್ ಎದುರು, ಕಾರವಾರದಲ್ಲಿ ಅಂಕೋಲಾ, ಜೋಯಿಡಾ, ಹಳಿಯಾಳ, ದಾಂಡೇಲಿ ಹಾಗೂ ಕಾರವಾರ ತಾಲ್ಲೂಕುಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿರುತ್ತದೆ.
ಸೆಪ್ಟಂಬರ 18 ರಂದು ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಮ್.) ಕಾಲೇಜನಲ್ಲಿ ಹೊನ್ನಾವರ, ಕುಮಟಾ, ಭಟ್ಕಳ ತಾಲ್ಲೂಕುಗಳ ಅಭ್ಯರ್ಥಿಗಳು ಹಾಗೂ ಸೆ.: 19 ರಂದು ಶಿರಸಿಯ ಮಲೆನಾಡ ಎಜ್ಯೂಕೇಶನ್ ಸೊಸೈಟಿ (ಎಮ್.ಇ.ಎಸ್.), ಕರಿಯರ್ ಗೈಡೆನ್ಸ ಸೆಂಟರ್‍ದಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲ್ಲೂಕಗಳ ಅಭ್ಯರ್ಥಿಗಳಿಗಾಗಿ ಆಯ್ಕೆ ಸಂದರ್ಶನ ನಡೆಯಲಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ (SIS), ಬೆಂಗಳೂರು ಇವರ ದೂರವಾಣಿ ಸಂಖ್ಯೆ +91-7353698997 ಅಥವಾ ಮೊಬೈಲ್ ಸಂಖ್ಯೆ +91-9481403800, +91-9481274298 ಸಂಪರ್ಕಿಸುವಂತೆ , ಜಿಲ್ಲಾ ಯೋಜನಾ ಉದ್ಯೋಗ ವಿನಿಮಯ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.