ಯುದ್ಧಪೀಡಿತ ಗಾಝಾಕೆ ಭಾರತದಿಂದ ಮಾನವೀಯ ನೆರವು ರವಾನೆ

Source: Vb | By I.G. Bhatkali | Published on 23rd October 2023, 7:51 AM | National News | Global News |

ಹೊಸದಿಲ್ಲಿ: ಭಾರತವು ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವಿನ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ಫೆಲೆಸ್ತೀನಿಯರಿಗಾಗಿ ರವಿವಾರ 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್‌ಗಳಷ್ಟು ವಿಪತ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಅಗತ್ಯ ಜೀವರಕ್ಷಕ ಔಷಧಿಗಳು,ಶಸ್ತ್ರಚಿಕಿತ್ಸಾ ಸಾಮಗ್ರಿಗಳು,ಟೆಂಟ್‌ಗಳು, ಕ್ಲೀಪಿಂಗ್ ಬ್ಯಾಗ್ ಗಳು,ಟಾರ್ಪಾಲಿನ್‌ಗಳು, ನೈರ್ಮಲ್ಯ ಸಾಧನಗಳು,ಜಲ ಶುದ್ದೀಕರಣ ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳು ಸೇರಿದಂತೆ ಸುಮಾರು 38 ಟನ್‌ಗಳಷ್ಟು ಮಾನವೀಯ ನೆರವನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನವು ಘಾಝಿಯಾಬಾದ್‌ನ ಹಿಂಡನ್ ವಾಯುಪಡೆ ನಿಲ್ದಾಣದಿಂದ ಈಜಿಪ್ಟ್ನ ಅಲ್ ಅರಿಶ್ ವಿಮಾನ ನಿಲ್ದಾಣಕ್ಕೆ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಲಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ನಡುವೆ ಔಷಧಿಗಳು ಮತ್ತು ಸೀಮಿತ ಪ್ರಮಾಣದ ಆಹಾರ ಸಾಮಗ್ರಿಗಳನ್ನು ಹೊತ್ತ ಸುಮಾರು 20 ಟ್ರಕ್‌ಗಳು ಶನಿವಾರ ಈಜಿಪ್ಟ್ನ ರಫಾ ಗಡಿಯಿಂದ ಗಾಝಾವನ್ನು ಪ್ರವೇಶಿಸಿವೆ.

ಆದರೆ ಗಾಝಾದಲ್ಲಿ ತುರ್ತು ಅಗತ್ಯಗಳನ್ನು ಪೂರೈಸಲು ದಿನಕ್ಕೆ ಕನಿಷ್ಠ 100 ಟ್ರಕ್‌ಗಳು ಬೇಕು. ಯಾವುದೇ ನೆರವಿನ ಪೂರೈಕೆ ನಿರಂತರವಾಗಿರಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿರಬೇಕು ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ಸಂಘರ್ಷ ಆರಂಭಗೊಳ್ಳುವ ಮುನ್ನ ಸಾಮಾನ್ಯವಾಗಿ ಪ್ರತಿದಿನ ಗಾಝಾಕ್ಕೆ ನೂರಾರು ಟ್ರಕ್‌ಗಳು ಆಗಮಿಸುತ್ತಿದ್ದವು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಗಾಝಾದ ಏಕೈಕ ಇಸ್ರೇಲಿಯೇತರ ಗಡಿಯಾಗಿರುವ ರಫಾ ಅನ್ನು જે ತೆರೆಯಲು ಈಜಿಪ್ಟ್,ಇಸ್ರೇಲ್ ಮತ್ತು ಹಮಾನ ಒಪ್ಪಿಗೆ ಅಗತ್ಯವಾಗಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ. ಈ ಗಡಿಯು ಈಗಲೂ ಮುಚ್ಚಿರುವುದಕ್ಕೆ ಈಜಿಪ್ಟ್ ಮತ್ತು ಇಸ್ರೇಲ್ ಪರಸ್ಪರರನ್ನು ಮತ್ತು ಹಮಾಸ್‌ನ್ನು ದೂರುತ್ತಿವೆ.

Read These Next

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...

ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷ; 47ನೇ ಅಧ್ಯಕ್ಷರಾಗಿ ಆಯ್ಕೆಯಾದ ರಿಪಬ್ಲಿಕನ್ ಅಭ್ಯರ್ಥಿ; ಕಮಲಾ ಹ್ಯಾರಿಸ್ ಕನಸು ಭಗ್ನ

ಅಮೆರಿಕದಲ್ಲಿ ಟ್ರಂಪ್ ಯುಗ ಪುನಾರಂಭಗೊಂಡಿದೆ. ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ...

ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತ: 100ಕ್ಕೂ ಹೆಚ್ಚು ಜನರ ದುರ್ಮರಣ, ಬೃಹತ್ ರಕ್ಷಣಾ ಕಾರ್ಯಾಚರಣೆ

ನೇಪಾಳದಲ್ಲಿ ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 60 ಜನರು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...

ಹಮಾಸ್ ಉನ್ನತ ನಾಯಕನ ಹತ್ಯೆ

ಟೆಹ್ರಾನ್‌:‌ ಇರಾನ್‌ ರಾಜಧಾನಿ ಟೆಹ್ರಾನ್‌ ನಲ್ಲಿ ಬುಧವಾರ ನಡೆದ ದಾಳಿಯಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ...