ಲೋಕಸಭಾ ಚುನಾವಣೆಯ ಬಳಿಕ ಮುಸ್ಲಿಮರ ವಿರುದ್ಧ ಗುಂಪು ದಾಳಿ ಪ್ರಕರಣದಲ್ಲಿ ಹೆಚ್ಚಳ; ಜಮಾಅತೆ ಇಸ್ಲಾಮೀ ಹಿಂದ್ ಕಳವಳ

Source: SOnews | By Staff Correspondent | Published on 8th July 2024, 4:26 PM | National News |

ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅಧಿಕಗೊಂಡಿದ್ದು, ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ ತೀವ್ರ ಕಳವಳ ವ್ಯಕ್ತಪಡಿಸಿವೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿ ಸರಕಾರವು ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದಾಗಿನಿಂದ ನಾಲ್ವರು ಮುಸ್ಲಿಮೇತರರು ಸೇರಿದಂತೆ ಗುಂಪಿನಿಂದ ಥಳಿಸಿ ಹತ್ಯೆಯ 12 ಘಟನೆಗಳು ವರದಿಯಾಗಿರುವುದಾಗಿ ಅವು ಗಮನ ಸೆಳೆದಿವೆ.

ಬಗ್ಗೆ ಸರಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುರಿತು ಹೇಳಿಕೆ ನೀಡಬೇಕು. ಗುಂಪು ಹತ್ಯೆ ಹಾಗೂ ಮುಸ್ಲಿಮರನ್ನು ಗುರಿಯಿರಿಸಿರುವ ನಡೆಸುವ ದ್ವೇಷಪರಾಧದ ಘಟನೆಗಳನ್ನು ಮಟ್ಟಹಾಕಲು ವಿಶೇಷ ಕಾನೂನುಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿವೆ.

ಹೊಸದಿಲ್ಲಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಪ್ರೊ. ಸಲೀಂ ಇಂಜಿನಿಯರ್ ಅವರು ಮಾತನಾಡಿ, 2024 ಲೋಕಸಭಾ ಚುನಾವಣೆ ಬಳಿಕ ಕೋಮು ಹಿಂಸಾಚಾರ, ಥಳಿಸಿ ಹತ್ಯೆಯ ಘಟನೆಗಳು ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಬಹುತೇಕ ಪ್ರಕರಣಗಳು ಚತ್ತೀಸ್ ಗಡ, ಉತ್ತರಪ್ರದೇಶ, ಗುಜರಾತ್, ಪಶ್ಚಿಮಬಂಗಾಳ, ತೆಲಂಗಾಣ, ಒಡಿಶಾ ಹಾಗೂ ರಾಜಸ್ಥಾನಗಳಲ್ಲಿ ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನವು ಗೋಹತ್ಯೆಯ ಆರೋಪದಲ್ಲಿ ನಡೆದಿವೆ ಎಂದು ಅವರು ಹೇಳಿದ್ದಾರೆ.

ಭಾರತೀಯ ದಂಡಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿ ಆ‌ರ್ ಪಿ ಸಿ) ಗಳನ್ನು ತೆರವುಗೊಳಿಸಿ, ಅವು ಬದಲಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ( ಬಿಎನ್‌ಎಸ್‌ಎಸ್) ಕಾನೂನುಗಳನ್ನು ಜಾರಿಗೊಳಿಸಲಾಗಿರುವ ಬಗ್ಗೆಯೂ ಪ್ರೊ.ಸಲೀಂ ಇಂಜಿನಿಯರ್ ಆತಂಕ ವ್ಯಕ್ತಪಡಿಸಿದರು. ಸಂಸತ್ ನಲ್ಲಿ ಸೂಕ್ತವಾದ ಚರ್ಚೆ ನಡೆಸದೆಯೇ ಹಾಗೂ ಹಲವಾರು ಸಂಸದರು ಅಮಾನತಿನಲ್ಲಿರುವಾಗಲೇ ಕಾನೂನುಗಳನ್ನು ಜಾರಿಗೊಳಿಸಲಾಗಿದೆಯೆಂದು ಅವರು ದೂರಿದರು.

ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆ‌ರ್) ಕಾರ್ಯದರ್ಶಿ ನದೀಮ್ ಖಾನ್ ಮಾತನಾಡಿ ನೂತನ ಅಪರಾಧ ಕಾಯ್ದೆಗಳಡಿ ಭ್ರಷ್ಟಾಚಾರ ಹಾಗೂ ತಾರತಮ್ಯ ಹೆಚ್ಚಳವಾಗುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ. 3 ರಿಂದ 7 ವರ್ಷಗಳ ಅವಧಿಯ ಜೈಲುವಾಸವನ್ನು ವಿಧಿಸಬಹುದಾದ ಅಪರಾಧಗಳಿಗೆ ಎಫ್‌ಐಆ‌ರ್ ದಾಖಲಿಸಲು ಪೊಲೀಸರಿಗೆ ವಿಶೇಷಾಧಿಕಾರವನ್ನು ನೀಡಿರುವುದನ್ನು ಅವರು ವಿರೋಧಿಸಿದರು.

ದ್ವೇಷಪರಾಧದ ಪ್ರಕರಣಗಳು ಹಾಗೂ ಮುಸ್ಲಿಮರನ್ನು ಗುರಿಯಿರಿಸಿ ಹತ್ಯೆಗೈದ ಪ್ರಕರಣಗಳ ಕುರಿತ ಎಪಿಸಿಆ‌ರ್ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಮಂಡಿಸಿದ ನದೀಮ್ ಖಾನ್ ಅವರು ಹೇಯ ಕೃತ್ಯಗಳ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ದೃಢವಾದ ನಿಲುವನ್ನು ತಳೆಯಬೇಕೆಂದು ಆಗ್ರಹಿಸಿದರು.

 

Read These Next

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ...

ಕೋಲ್ಕತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಇಬ್ಬರು ವೈದ್ಯರು, ಮಾಜಿ ಬಿಜೆಪಿ ಸಂಸದೆಗೆ ಕೋಲ್ಕತಾ ಪೊಲೀಸರ ಸಮನ್ಸ್

ನಗರದ ಆರ್.ಜಿ. ಕರ್ ವೈದ್ಯಕೀಯ ಕಾಲೇಜ್;ನಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಕಿರಿಯ ವೈದ್ಯೆಯ ಗುರುತನ್ನು ...

ಬಾಂಗ್ಲಾದೇಶದಲ್ಲಿ ಮುಸ್ಲಿಮ್ ದಾಳಿಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಕಟ್ಟರ್ ಬಲಪಂಥೀಯರು; ಬಿಬಿಸಿ ವರದಿ

ಬಾಂಗ್ಲಾದೇಶದಲ್ಲಿ ಉರಿಯುತ್ತಿರುವ ಕಟ್ಟಡಗಳು, ಭಯಾನಕ ಹಿಂಸಾಚಾರ ಮತ್ತು ನೆರವಿಗಾಗಿ ರೋದಿಸುತ್ತಿರುವ ಮಹಿಳೆಯರ ಆಘಾತಕಾರಿ ...