ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ 'ರೊಬೋಟಿಕ್ಸ್ ಲ್ಯಾಬ್‍ಗಳ' ಉದ್ಘಾಟನೆ

Source: Press release | By I.G. Bhatkali | Published on 8th September 2024, 7:43 PM | Coastal News |

ಭಟ್ಕಳ: ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ವಿದ್ಯಾಂಜಲಿ ಪಬ್ಲಿಕ್ ಶಾಲೆ, ವಿದ್ಯಾಭಾರತಿ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ಗುರು ವಿದ್ಯಾಧಿರಾಜ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಪ್ರತ್ಯೇಕವಾಗಿ 3 'ರೊಬೋಟಿಕ್ಸ್ ಲ್ಯಾಬ್'ಗಳನ್ನು ನಿರ್ಮಿಸಿದ್ದು, ದಿನಾಂಕ 05 ಸೆಪ್ಟೆಂಬರ 2024, ಗುರುವಾರದಂದು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. 

ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಉಡುಪಿಯ ಇಂಡಿವರ್ ಸಾಫ್ಟ್‍ಟೆಕ್‍ನ ಎಂ.ಡಿ ದಿನೇಶ ಭಟ್ಟ ಮಾತನಾಡಿ "ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸನ್ನು ಕಾಣಬೇಕು ಹಾಗೂ ಅದನ್ನು ನನಸು ಮಾಡಿಕೊಳ್ಳಲು ಸೂಕ್ತ ಯೋಜನೆಯನ್ನು ರೂಪಿಸಿ, ಕಾಲಮಿತಿಯಲ್ಲಿ ಕಾರ್ಯಗತಗೊಳಿಸಿದರೆ ಯಶಸ್ಸು ಸಾಧ್ಯ" ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ನೈಸ್ ಅಟೋಮೇಶನ್ ಪ್ರೈ.ಲಿಮಿಟೆಡ್‍ನ ಸಂಸ್ಥಾಪಕ ನಿರ್ದೇಶಕ ನಾಗರಾಜ ಪ್ರಭು ಮಾತನಾಡಿ "ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಕೌಶಲ್ಯಯುತ ಶಿಕ್ಷಣ ನೀಡಲು ರೊಬೋಟಿಕ್ಸ್ ಲ್ಯಾಬ್'ಗಳನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನಿರ್ಮಿಸಿರುವುದು ಶ್ಲಾಘನೀಯ" ಎಂದು ಹೇಳಿದರು. 

ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಸಿಸ್ಕೋ ಸಿಸ್ಟಮ್ಸ್‍ನ ಪ್ರೊಜೆಕ್ಟ ಮ್ಯಾನೇಜರ ರಾಹುಲ ಕೊಲ್ಲೆ ಮಾತನಾಡಿ "ವಿದ್ಯಾರ್ಥಿಗಳು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಕೌಶಲ್ಯವಂತರಾದಾಗ, ಉದ್ಯೋಗ ಸೃಷ್ಟಿಸುವಂತವರಾಗಬಹುದು, ಆ ನಿಟ್ಟಿನಲ್ಲಿ ಪ್ರಯತ್ನಿಸಿ" ಎಂದು ಹೇಳಿದರು.

ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಪ್ರೀತಿ ಜನ್ನು, ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹಾಗೂ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಂಗ ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದಿ. ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶಾನಭಾಗ ವಂದಿಸಿದರೆ, ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಶಿಕ್ಷಕಿಯರಾದ ಬಿಬಿಯನಾ ಗೋಮ್ಸ್ ಹಾಗೂ ಪ್ರೀತಿ ಪ್ರಭು ನಿರೂಪಿಸಿದರು.

Read These Next

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...

ಸೆ. 19ರಿಂದ 24ರ ವರೆಗೆ ಉತ್ತರ ಕನ್ನಡದಲ್ಲಿ ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಕ್ರೀಡಾಪಟುಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳು

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ...