ಭಟ್ಕಳ ತಾಲೂಕಿನ ಕೋಣಾರ ಗ್ರಾ.ಪಂ ವ್ಯಾಪ್ತಿಯಲ್ಲಿ ಬೃಹತ್ ಕಲ್ಲು ಬಂಡೆ ಕುಸಿತ; ತಪ್ಪಿದ ಭಾರಿ ಅನಾಹುತ

Source: S O news | By Staff Correspondent | Published on 14th July 2023, 3:12 PM | Coastal News |

ಭಟ್ಕಳ: ಭಟ್ಕಳ ತಾಲೂಕಿನ ಕೋಣಾರ ಗ್ರಾ.ಪಂ. ವ್ಯಾಪ್ತಿಯ ಬೀಳೂರು ಗ್ರಾಮದಲ್ಲಿ ಭಾರಿ ಗಾತ್ರದ ಬಂಡೆ ಕಲ್ಲೊಂದು ಕುಸಿದಿದ್ದು ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಅಂದಾಜು ೫೦೦ ಅಡಿ ಎತ್ತರಿಂದ ಜಾರಿ ಬಂದ ಈ ಬಂಡೆಕಲ್ಲು ಮಾರುಕೇರಿ ಕುಂಟವಾಣಿ ರಸ್ತೆಗೆ ತಾಗಿಕೊಂಡಿರುವ ದಿಣ್ಣೆಯೊಂದರ ಮೇಲೆ ನಿಂತುಕೊಂಡಿದೆ. ಒಂದು ವೇಳೆ ಇದು ಅಲ್ಲಿಂದಲೂ ಜಾರಿದ್ದರೆ ಪರಿಸ್ಥಿತಿ ತೀರ ಗಂಭಿರ ಸ್ವರೂಪ ಪಡೆದುಕೊಳ್ಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

“ಕೋಣಾರ ಭಾಗದಲ್ಲಿ ಹೆಬ್ಬಂಡೆ ಜಾರಿ ಬಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಪರಿಸ್ಥಿತಿಯನ್ನು ಅವಲೋಕಿಸಲು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ” ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ.ನಯನಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಆಗಷ್ಟ್ ತಿಂಗಳಲ್ಲಿ ಮುಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ನಾಲ್ವರು ಜೀವಂತ ಸಮಾಧಿಯಾಗಿರುವ ಘಟನೆ ತಾಲೂಕಿನ ಜನರ ಮನಸ್ಸಿನಿಂದ ಮರೆಯಾಗಿಲ್ಲ. ವರ್ಷ ಕಳೆಯುವುದಕ್ಕಿಂತ ಮುಂಚೆ ಮತ್ತೊಂದು ಅನಾಹುತಕ್ಕೆ ಭಟ್ಕಳ ತಾಲೂಕು ಸಾಕ್ಷಿಯಾಗುವ ಮುನ್ನ ಗುಡ್ಡಕುಸಿತಕ್ಕೆ ಸಂಬಂಧ ತಾಲೂಕಾಡಳಿತ ಸೂಕ್ತ ಕ್ರಮಗಳನ್ನು ಕೈಕೊಳ್ಳಬೇಕು ಎಂಬ ಕೂಗು ಕೇಳತೊಡಗಿದೆ.

ಬುಧವಾರದಂದು ಭಾರೀ ಪ್ರಮಾಣದ ಕಲ್ಲುಬಂಡೆ ಕುಸಿದು ಬಿದ್ದು ಸದ್ಯ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ದೊಡ್ಡ ಬಂಡೆಯೊಂದು ಜಾರಿ ಕೆಳಗೆ ಬಿದ್ದಿದ್ದು, ಗ್ರಾಮಸ್ಥರ ಸುರಕ್ಷತೆಗೆ ಆತಂಕ ಸೃಷ್ಟಿಸಿದೆ.

ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಸಂಭಾವ್ಯ ಅಪಾಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಕೋಣಾರ  ಗ್ರಾಮದ ಗ್ರಾಮ ಪಂಚಾಯಿತಿ ತೀವ್ರ ಕಟ್ಟೆಚ್ಚರ ವಹಿಸಿದೆ.

ಬೆಟ್ಟದ ಕೆಳಭಾಗದಲ್ಲಿರುವ ವಸತಿ ಪ್ರದೇಶದಲ್ಲಿ ಬಂಡೆಯು ಜಾರಿಕೊಂಡು ರಸ್ತೆಯನ್ನು ತಲುಪಿದರೆ ಪ್ರಾಣಹಾನಿ ಸಂಭವಿಸಬಹುದೆಂಬ ಆತಂಕ ಸ್ಥಳಿಯರಲ್ಲಿ ಮೂಡಿಸಿದೆ. ತುರ್ತಾಗಿ ಬಂಡೆಯನ್ನು ತೆರವುಗೊಳಿಸಲು ಮತ್ತು ಸಂಭಾವ್ಯ ಅಪಾಯ ತಗ್ಗಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನೋಡಲ್ ಅಧಿಕಾರಿ ಮಲ್ಲಪ್ಪ, ಗ್ರಾಮ ಲೆಕ್ಕಾಧಿಕಾರಿ ಶಂಭು ಹಾಗೂ ಕೋಣಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ಕರಾವಳಿ, ಪಶ್ಚಿಮ ಘಟ್ಟಗಳು ಮತ್ತು ಅರೆ-ಮಲೆನಾಡಿನ ಪ್ರದೇಶಗಳು ಮಣ್ಣಿನ ಸವೆತ ಅಥವಾ ತೊರೆಗಳಲ್ಲಿನ ಸೆಳೆತದಿಂದ ಉಂಟಾಗುವ ಭೂಕುಸಿತಕ್ಕೆ ಆಗಾಗ ಗುರಿಯಾಗುತ್ತಲೆ ಇರುತ್ತವೆ. ಈಗಾಗಲೇ ಭಾರಿ ಕುಸಿತ ಕಂಡಿರುವ ಕೋಣಾರ ಪ್ರದೇಶ ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತ ಸಂಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.  .ನಿರಂತರ ಮಳೆ ಮುಂದುವರಿದರೆ, ಬೆಟ್ಟದ ತಳದಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಹೆಚ್ಚಿದ್ದು, ಬಂಡೆಗಳ ಕುಸಿತ ಮತ್ತು ಸಂಭಾವ್ಯ ವಿನಾಶಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Harrowing Rockslide Incident in Bhatkal Raises Concerns about Hillside Safety

Read These Next

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ, 2 ಕಾಳಜಿ ಕೇಂದ್ರಗಳಲ್ಲಿ 59 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ.

ಜಿಲ್ಲೆಯಲ್ಲಿ ಭಾನುವಾರ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು,  ಹೊನ್ನಾವರ ತಾಲ್ಲೂಕಿನಲ್ಲಿ 2 ಕಾಳಜಿ ಕೇಂದ್ರಗಳಲ್ಲಿ 59 ಮಂದಿ ...

ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ. ಸಯೀದ್ ಇಸ್ಮಾಯಿಲ್

ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ...

ಭಾರೀ ಮಳೆಯಿಂದ ಭಟ್ಕಳ ತಾಲೂಕಿನಲ್ಲಿ ತೀವ್ರ ಜಲಾವೃತ, ವಾಹನ ಸಂಚಾರ ಸ್ಥಗಿತ; ಶಾಲಾ ಕಾಲೇಜುಗಳಿಗೆ ರಜೆ

ಭಟ್ಕಳ: ಭಾನುವಾರ ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಭಟ್ಕಳ ತಾಲೂಕಿನಾದ್ಯಂತ ಹಾನಿಯನ್ನುಂಟುಮಾಡಿದೆ, ಪ್ರಮುಖ ...

ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಹಳೆಯ ನಿಶ್ಚಿತ ಪಿಂಚಣಿ  ನೀಡುವಂತೆ ಆಗ್ರಹ

ಭಟ್ಕಳ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಭಟ್ಕಳ ತಾಲೂಕು ಘಟಕದ ಪದಾಧಿಕಾರಿಗಳು  ಹಳೆಯ ಓಪಿಎಸ್ ...