ವೇಗವಾಗಿ ನಡೆಯುತ್ತಿದೆ ಗುಡ್ಡ ಕುಸಿತ ತೆರವು ಕಾರ್ಯಚರಣೆ;ಪೂರ್ಣಗೊಳ್ಳಲು ಇನ್ನೂ ಎರಡು ದಿನ ಆಗಬಹುದು-ಮಾಂಕಾಳ್ ವೈದ್ಯ

Source: SOnews | By Staff Correspondent | Published on 20th July 2024, 3:39 PM | Coastal News |


ಕಾರವಾರ: ಅಂಕೋಲಾದ ಶಿರೂರು ಗುಡ್ಡ ಕುಸಿತವಾದ ಸ್ಥಳದಲ್ಲಿ ಸುರತ್ಕಲ್ ನಿಂದ ರಾಡಾರ್ ತರಿಸಿ ವಾಹನ ಹಾಗೂ ಮೃತದೇಹಗಳ ಪತ್ತೆ ಮಾಡಲಾಗುತ್ತಿದೆ ತೆರವು ಹಾಗೂ ಶೋಧ ಕಾರ್ಯ ವೇಗವಾಗಿ ನಡೆಯುತ್ತಿದೆ. ಇನ್ನು ಎರಡು ದಿನ ಬೇಕಾಗಬಹುದು ಎಂದು  ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ. 

ಅವರು, ಶನಿವಾರ ಶಿರೂರಿನಲ್ಲಿ ಗುಡ್ಡು ಕುಸಿತ ತೆರವು ಕಾರ್ಯ ಪರಿಶೀಲನೆ ನಡೆಸಿ ಮಾತನಾಡಿದರು. 

ಹೆಲಿಕಾಪ್ಟರ್ ತರಿಸಿ ನದಿಯಲ್ಲಿ ಶೋಧ ನಡೆಸುವ ಯೋಜನೆಯೂ ಇತ್ತು. ಹವಾಮಾನ ವೈಪರೀತ್ಯದಿಂದ ಸಾಧ್ಯವಿಲ್ಲ. ಇದೀಗ ಸುರತ್ಕಲ್ ನಿಂದ ರಡಾರ್ ತರಿಸಿ ಶೋಧ ನಡೆಸುತ್ತಿದ್ದೇವೆ‌. ಹೆದರುವ ಅವಶ್ಯಕತೆ ಇಲ್ಲ. ಕೆಲಸ ನಡೆಯುತ್ತಿದೆ‌ ಎಂದು ತಿಳಿಸಿದರು.  

ನದಿಯಲ್ಲಿಯೂ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಮತ್ತು ನೌಕಾನೆಲೆಯ ತಂಡ ಶೋಧ ನಡೆಸುತ್ತಿದೆ. ಮೊಬೈಲ್ ರಿಂಗ್ ಆದ ಬಗ್ಗೆಯೂ ಸುದ್ದಿ ಇದೆ. ಆದರೆ ಅದು ಸಾಧ್ಯವಿಲ್ಲ. ಮೀನುಗಾರರಿಗೆ ಇಲಾಖೆಯಿಂದ ಪರಿಹಾರ ನೀಡಲಾಗಿದೆ‌‌. ನಾಳೆ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಲಿದ್ದಾರೆ‌ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. 

Read These Next