ಭಟ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ಮುರುಡೇಶ್ವರ ದಲ್ಲಿ ಅದ್ದೂರಿ ಸ್ವಾಗತ
ಭಟ್ಕಳ : 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ವಿವಿಧ ಸಂಘಟನೆ ಹಾಗೂ ಸಾರ್ವಜನಿಕರು ಬುಧವಾರ ಸಂಜೆ ಮುರುಡೇಶ್ವರ ಗೇಟ್ ಬಳಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಇವರು ಮುರುಡೇಶ್ವರ ನರೇಕುಳಿಯ ವೆಂಕಟರಮಣ ದೇವಾಡಿಗ ಹಾಗೂ ತುಳಸಿ ದೇವಾಡಿಗ ಅವರ ಹಿರಿಯ ಪುತ್ರರಾಗಿದ್ದಾರೆ. ಇವರು ಕಳೆದ 20 ವರ್ಷದ ಹಿಂದೆ ಭಾರತೀಯ ಸೇನೆಯಲ್ಲಿ(electrical and mechanical department) ವಿದ್ಯುತ್ ಮತ್ತು ಯಾಂತ್ರಿಕ ವಿಭಾಗದ (technical staff) ತಾಂತ್ರಿಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದಾರೆ.
ದೇಶದ ವಿವಿಧ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದು. ಜಮ್ಮು ಕಾಶ್ಮೀರ, ಲಡಾಕ್, ರಾಜಸ್ಥಾನ, ಪಂಜಾಬ್, ಆಂಧ್ರಪ್ರದೇಶ, ನಾಗಾಲ್ಯಾಂಡ ಹಾಗೂ ಕೊನೆಯಲ್ಲಿ ಹೈದ್ರಾಬಾದನಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ನಿವೃತ್ತಿಯನ್ನು ಹೊಂದಿದ್ದಾರೆ.
ಬಳಿಕ ನರೇಕುಳಿ ಗ್ರಾಮದ ಯುವಕರು ಗ್ರಾಮಸ್ಥರು ನಿವೃತ್ತ ಯೋಧರನ್ನು ಮುರುಡೇಶ್ವರ ಗೇಟ್ ನಿಂದ ಚಂಡೆ ವಾದ್ಯದ ಮೂಲಕ ತೆರೆದ ಜೀಪ್ ನಲ್ಲಿ ಬೈಕ್ ಮೆರವಣಿಗೆ ಮೂಲಕ ಮುರುಡೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಿ ನಂತರ ಸೈನಿಕನನ್ನು ಸನ್ಮಾನಿಸಿದರು
ಇದಕ್ಕೂ ಪೂರ್ವದಲ್ಲಿ ಮುರುಡೇಶ್ವರ ಗೇಟ್ ಗೆ ಆಗಮಿಸಿದ ಯೋಧನ್ನು ಹೂವಿನ ಹಾರ ಹಾಕಿ ಗುಲಾಭಿ ಹೂ ನೀಡಿ ಮೂಲಕ ಮುರುಡೇಶ್ವರ ಲಯನ್ಸ್ ಕ್ಲಬ್, ನರೇಕುಳಿ ಗೆಳೆಯರ ಬಳಗ, ಮಾಜಿ ಸೈನಿಕರ ಸಂಘ ಭಟ್ಕಳ, ಮುರುಡೇಶ್ವರ ಗೆಳೆಯರ ಬಳಗ, ದೇವಾಡಿಗ ಸಮಾಜ ಹಾಗೂ ಸಾರ್ವಜನಿಕರು ಶನ್ಮಾನಿಸಿ ಗೌರವಿಸಿದರು.