ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ಕರ್ನಾಟಕ ಮೂಲದ ಉದ್ಯಮಿಗಳ ಅತ್ಯುತ್ತಮ ಕೊಡುಗೆಗಳು ಮತ್ತು ಕೆಲಸವನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಿದ್ದ 'ಗಲ್ಫ್ ಕರ್ನಾಟಕೋತ್ಸವ-2023' ಕಾರ್ಯಕ್ರಮವು ಸೆ.10ರಂದು ದುಬೈನ ಗ್ರಾಂಡ್ ಹಯಾತ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಒಟ್ಟು 21 ಪ್ರಭಾವಿ ಉದ್ಯಮಿಗಳಿಗೆ ಪ್ರತಿಷ್ಠಿತ 'ಗಲ್ಫ್ ಕರ್ನಾಟಕ ರತ್ನ' ಪ್ರಶಸ್ತಿಯನ್ನು ದುಬೈ ರಾಜಮನೆತನದ ಸದಸ್ಯ ಮತ್ತು ಎಂಬಿಎಂ ಗ್ರೂಪ್ ಅಧ್ಯಕ್ಷ ಶೇಖ್ ಮುಹಮ್ಮದ್ ಮಕ್ತೂಮ್ ಜುಮಾ ಅಲ್ ಮಕ್ತೂಮ್ ಪ್ರದಾನ ಮಾಡಿದರು.
ಉದ್ಯಮಿಗಳ ಸಾಧನೆಯ ಮಾಹಿತಿಯನ್ನು ಒಳಗೊಂಡ ಕಾಫಿ ಟೇಬಲ್ ಪುಸ್ತಕವನ್ನು ಇದೇ ಸಂದರ್ಭ ಬಿಡುಗಡೆ ಗೊಳಿಸಲಾಯಿತು. ಕಾರ್ಯಕ್ರಮ ದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಗಲ್ಫ್ ಕರ್ನಾಟಕ ರತ್ನ 2023' ಪ್ರಶಸ್ತಿ ಪುರಸ್ಕೃತರು: ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್, ಹಿದಾಯತ್ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷರಾದ ಹಿದಾಯತುಲ್ಲಾ ಅಬ್ಬಾಸ್, ಇಎಂಸಿಒ ಇಂಟರ್ ನ್ಯಾಶನಲ್ ಮತ್ತು ಇಲೆಕ್ಟಿಕ್ ವೇ ಅಧ್ಯಕ್ಷ ಮುಹಮ್ಮದ್ ಮೀರಾನ್, ರಿಲಯೇಬಲ್ ಗ್ರೂಪ್ ಆಫ್ ಕಂಪೆನೀಸ್ ಸ್ಥಾಪಕ ಮತ್ತು ಅಧ್ಯಕ್ಷ ಜೇಮ್ಸ್ ಮೆಂಡೋನ್, ನ್ಯಾಶ್ ಇಂಜಿನಿಯರಿಂಗ್ ಅಧ್ಯಕ್ಷ ನಿಸಾರ್ ಅಹ್ಮದ್, ಸ್ಟೇಟೆಕ್ ಕೋಟಿಂಗ್ಸ್ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಹೆಗ್ಡೆ, ಮೆರಿಟ್ ಫೈಟ್ ಸಿಸ್ಟಮ್ಸ್ ನ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಮಥಿಯಾಸ್, ವೀನಸ್ ಗ್ರೂಪ್ ಆಫ್ ರೆಸ್ಟೋರೆಂಟ್ ಮಾಲಕ ವಾಸುದೇವ ಭಟ್ ಪುತ್ತಿಗೆ, ಇಂಟಗ್ನಿಸ್ ನವೀದ್ ಕಂಪೆನಿಯ ಮುಹಮ್ಮದ್ ನವೀದ್ ಮಾಗುಂಡಿ, ಸಾರಾ ಸಮೂಹದ ಅಧ್ಯಕ್ಷ ಮನ್ಸೂರ್ ಅಹ್ಮದ್, ಕೆ ಆ್ಯಂಡ್ ಕೆ ಎಂಟರ್‌ಪೈಸಸ್ ಸ್ಥಾಪಕ ಅಧ್ಯಕ್ಷ ಎಂ.ಸೈಯದ್ ಖಲೀಲ್, ಐವರಿ ಗ್ಯಾಂಡ್ ರಿಯಲ್ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಡಿಸೋಜ, ಗಡಿಯಾರ್ ಗ್ರೂಪ್ ಆಫ್ ಕಂಪೆನೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ಯಾಂಥಿಯಾನ್ ಡೆವಲಪ್‌ಮೆಂಟ್ ಗ್ರೂಪ್ ಪ್ರಾಜೆಕ್ಟ್ ಡೈರೆಕ್ಟರ್ ಇಬ್ರಾಹೀಂ ಗಡಿಯಾರ್, ಏರ್ ಚಟೌ ಇಂಟರ್‌ನ್ಯಾಶನಲ್ ಎಕ್ಸಿಕ್ಯೂಟಿವ್ ಚೇರ್ಮನ್ ಡಾ. ಬಿ.ಕೆ. ಯೂಸುಫ್, ಗ್ಲೋಬಲ್ ಟೆಕ್ ಪಾರ್ಕ್ ಸಿಇಒ ಡಾ. ಸತೀಶ್ ಪಿ. ಚಂದ್ರ, ಝಡ್ ಜಿಸಿ ಗ್ಲೋಬಲ್/ಝನ್ ಗ್ರೂಪ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಸಂಸ್ಥಾಪಕ ಜಫ್ತುಲ್ಲಾ ಖಾನ್ ಮಂಡ್ಯ, ಯುಎ ಇಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾನ್ಸಲರ್ ಜನರಲ್ ಹಾಗೂ ಶಾಂತಿ ರಾಯಭಾರಿ ಐಸಿಡಿಆರ್ ಎಚ್ ಆರ್ ಪಿ ಐಜಿಒಗಳ ಮಿಷನ್ ಗಳ ಮುಖ್ಯಸ್ಥ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಗ್ಲೋಬಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಅರಾನ್ಹಾ, ಬುರ್ಜಿಲ್ ಹೋಲ್ಡಿಂಗ್ಸ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಸುನೀಲ್, ಎಕ್ಸ್ರ್ಟೈಸ್ ಕಾಂಟ್ರಾ ಕ್ವಿಂಗ್‌ನ ಸಹ-ಅಧ್ಯಕ್ಷ ಮತ್ತು ಸಿಇಒ ಮುಹಮ್ಮದ್ ಆಸಿಫ್, ಅಡ್ವಾನ್ಸ್ ಟೆಕ್ನಿಕಲ್ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ರವಿ ಶೆಟ್ಟಿ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಮತ್ತು ಹಾಸ್ಯ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು, ಖ್ಯಾತ ಕಲಾವಿದರಾದ ಸಂತೋಷ್ ವೆಂಕಿ, ಗುರುಕಿರಣ್ ಮತ್ತು ಗಾಯಕಿ ಚೈತ್ರಾ ಎಚ್.ಜಿ. ತಮ್ಮ ಗಾಯನದ ಮೂಲಕ ರಂಜಿಸಿದರು. ಹಾಸ್ಯನಟರಾದ ಪ್ರಕಾಶ್ ತೂಮಿನಾಡ್ ಮತ್ತು ದೀಪಕ್ ರೈ ಪಾಣಾಜೆ ಪ್ರೇಕ್ಷಕರನ್ನು ಹಾಸ್ಯ ಕಾರ್ಯಕ್ರಮಗಳನ್ನು ನೀಡಿದರು. ಪಿಲಿ(ಹುಲಿ) ವೇಷದಂತಹ ಸಾಂಪ್ರದಾಯಿಕ ನೃತ್ಯಗಳು ಸೇರಿದಂತೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯೇ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.