ಗೆಳೆಯ ಮಹೇಂದ್ರ ಕುಮಾರ್.... ಅಂತಿಮ ನಮನಗಳು......
ನಂಬಲಾಗುತ್ತಿಲ್ಲ....ನಮ್ಮ ಸಮಾಜಕ್ಕೆ ನೀವು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ ವಾಗಿದ್ದಾಗ ಹೀಗೇಕೆ ದಿಢೀರನೆ ನಿರ್ಗಮಿಸಿದಿರಿ?
ಬ್ರಾಹ್ಮಣ ಶಾಹಿ ಸಂಘಟನೆಗಳ ಹಾಗೂ ವಿಚಾರಧಾರೆಗಳ ಸಂಕೋಲೆಗಳನ್ನು ಕಡಿದುಕೊಂಡ ನಂತರ ನೀವು ಪಡೆದುಕೊಂಡ ಹೊಸಹುಟ್ಟು ನಮ್ಮಂಥವರಲ್ಲಿ ಮೊದಮೊದಲು ಆಶ್ಚರ್ಯ ವನ್ನು ನಂತರ ಸಂತೋಷವನ್ನು ಉಂಟುಮಾಡಿತ್ತು.
ಕಳೆದ ಹಲವಾರು ವರ್ಷಗಳಿಂದ ಕುವೆಂಪು ಕನಸುಕಂಡ ವಿಶ್ವಮಾನವ ಲೋಕದೃಷ್ಟಿ ಹಾಗೂ ಸಾಮಾಜಿಕ ನ್ಯಾಯ ವನ್ನು ಆಧರಿಸಿದ ಸಮಾಜವನ್ನು ಕಟ್ಟಲು ನಿರಂತರವಾಗಿ ಶ್ರಮಿಸುತ್ತಿದ್ದಿರಿ...
NRC-NPR-CAA ವಿರೋಧಿ ಚಳವಳಿಯಲ್ಲಿ ನೀವೂ-ನಾನೂ ಹಲವಾರು ಸಾರಿ ವೇದಿಕೆಯನ್ನು ಹಂಚಿಕೊಡಿದ್ದೇವೆ....NRC ಹಿಂದೆ ಇರುವ ಬ್ರಾಹ್ಮಣ ಶಾಹಿ ಸಂಚುಗಳನ್ನು ಸ್ಪಷ್ಟವಾಗಿ ನೀವು ಜನರ ಮುಂದಿರಿಸುತ್ತಿದ್ದ ರೀತಿ ನಿಮ್ಮ ಬಗ್ಗೆ ಅಭಿಮಾನ ಮೂಡಿಸುವಂತಿರುತ್ತಿತ್ತು...ಯಾವ ಹೆದರಿಕೆ ಅಥವಾ ಹಿಂಜರಿಕೆಯಿಲ್ಲದೆ ನೀವು ಅಧಿಕೃತ ಧ್ವನಿಯಲ್ಲಿ ಬಯಲು ಮಾಡುತ್ತಿದ್ದ ಆರೆಸ್ಸೆಸ್ ನ ದಲಿತ-ಶೂದ್ರ-ಮಹಿಳಾ ವಿರೋಧಿ ಮನೋಧರ್ಮ ತಳಸಮುದಾಯಗಳಲ್ಲಿ ಎಂಥಾ ಆತ್ಮವಿಶ್ವಾಸ ಹಾಗೂ ಹುಮ್ಮಸ್ಸನ್ನು ಮೂಡಿಸುತ್ತಿತ್ತು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ...ಹಾಗೂ ಅಭಿಮಾನಿಸಿದ್ದೇನೆ...
ಅದೇ ಸಮಯದಲ್ಲಿ ಸದಾ ಅಪಮಾನ ಹಾಗೂ ಅವಮಾನಕ್ಕೆ ಗುರಿಯಾಗಿರುವ ಮುಸ್ಲಿಂ ಸಮುದಾಯದ ಕೆಲವು ಪ್ರತಿಕ್ರಿಯೆ ಗಳು, ಕೆಲವು ವಿದ್ಯಮಾನ ಗಳ ಬಗ್ಗೆ ಪ್ರಗತಿಪರರು ತೆಗೆದುಕೊಳ್ಳುತ್ತಿದ್ದ ನಿಲುವುಗಳು ನಿಮಗೆ ಅತಿರೇಕದ್ದು ಎನಿಸುತ್ತಿತ್ತು..ಅಂಥವನ್ನೂ ನೀವು ಬಹಿರಂಗವಾಗಿ ಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಿರಿ...(ಅದಕ್ಕೆ ಪ್ರತಿಯಾಗಿ ನೀವು ತೆಗೆದುಕೊಳ್ಳುತ್ತಿದ್ದ ಕೆಲವು ನಿಲುವುಗಳು ನನಗೆ ಸರಿ ಎನಿಸುತ್ತಿರಲಿಲ್ಲ..ಅದನ್ನು ನಿಮ್ಮ ಜೊತೆಗೂ ಚರ್ಚಿಸುತ್ತಿದ್ದೆ..)..
ಅದರ ತಪ್ಪು-ಸರಿಗಳೇನೇ ಇರಲಿ... ಇಂಥಾ ಬಹಿರಂಗ ನಡೆಗಳು ಹೋರಾಟನಿರತರ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳ ಪ್ರಾಮಾಣಿಕ ತೆ ಹಾಗೂ ಪಾರದರ್ಶಕತೆಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಸ್ವಾಗತಾರ್ಹ ಎಂದೇ ನನಗನ್ನಿಸುತ್ತಿತ್ತು..
ಒಂದೆರೆಡೇ ವರ್ಷಗಳ ಲ್ಲಿ ನೀವು ಕಟ್ಟಿದ "ನಮ್ಮ ಧ್ವನಿ"ಸಂಘಟನೆ ಹಾಗೂ ಯೂಟ್ಯೂಬ್ ಮಾಧ್ಯಮ ಜನಪ್ರಿಯ ಗೊಂಡಿದೆ. ಇದು ಕಳೆದ ಕೆಲವು ವರ್ಷಗಳಲ್ಲಿ ಈ ರಾಜ್ಯದಲ್ಲಿ ಆಗಿರುವ ಕೆಲವು ಸಕಾರಾತ್ಮಕ ಬೆಳವಣಿಗೆಗಳಲ್ಲಿ ಒಂದು...
ಅಷ್ಟು ಮಾತ್ರವಲ್ಲ... ದ್ವೇಷವನ್ನು ಆಧರಿಸಿದ ಬ್ರಾಹ್ಮಣ ಶಾಹಿ ಆರೆಸ್ಸೆಸ್ ನ್ನು ಧಿಕ್ಕರಿಸಿ ಸೌಹಾರ್ದ ಹಾಗೂ ಸಾಮರಸ್ಯ ದ ಸಮಾಜ ವನ್ನು ಕಟ್ಟುವ ಕಡೆಗೆ ನೀವು ಪ್ರಾರಂಭಿಸಿದ ಪ್ರಯಾಣ ಈ ದುರಿತ ಕಾಲದಲ್ಲಿ ಭರವಸೆಯ ಕೋಲ್ಮಿಂಚಾಗಿತ್ತು...ಇತಿಹಾಸದ ಈ ಕಾಲಘಟ್ಟದಲ್ಲಿ ನೀವು ಅತ್ಯಂತ ಸಕಾರಾತ್ಮಕ ಪಾತ್ರ ವಹಿಸುತ್ತಿದ್ದಿರಿ. .
ಸಮಾಜ ಹಾಗೂ ಸಂದರ್ಭಕ್ಕೆ ನಿಮ್ಮ ಅಗತ್ಯ ತುಂಬಾ, ತುಂಬಾ ಇರುವಾಗಲೇ, ನಾವೆಲ್ಲರೂ ಜೊತೆಗೂಡಿ ಹಾಕಬೇಕಾದ ಹೆಜ್ಜೆಗಳು ಬಹಳಷ್ಟಿರುವಾಗಲೇ. .. ಸುಳಿವನ್ನೂ ಕೊಡದೆ ನಡೆದುಬಿಟ್ಟಿರಿ....
ನಿಮ್ಮ ಈ ದಿಢೀರ್ ನಿರ್ಗಮನ ನನ್ನಂಥ ಹಲವರಿಗೆ ಆಘಾತ ವುಂಟು ಮಾಡಿದೆ. ಸದ್ಯಕ್ಕಂತೂ ದಿಗ್ಮೂಢರನ್ನಾಗಿಸಿದೆ...
ನಿಮ್ಮ ಕುಟುಂಬ ದವರಿಗೆ, ನಮ್ಮ ಧ್ವನಿ ಬಳಗಕ್ಕೆ ಈ ನೋವು ತಡೆದುಕೊಳ್ಳುವ ಚೈತನ್ಯ ದಕ್ಕಲಿ..
ಸೌಹಾರ್ದ-ಹಾಗೂ ಸಾಮರಸ್ಯ ದ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನೀವು ನಮ್ಮ ಜೊತೆಗೆ ಪರೋಕ್ಷವಾಗಿ ಇದ್ದೇ ಇರುತ್ತೀರಿ....
ನಿಮ್ಮ
ಶಿವಸುಂದರ್