ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

Source: S O News | By I.G. Bhatkali | Published on 14th February 2024, 7:03 AM | Coastal News | Special Report |

ಕಾರವಾರ: ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ಉಂಟಾಗುವ ಸಾಮಾಜಿಕ ದುಷ್ಪರಿಣಾಮಗಳು ಎಲ್ಲೆಡೆ ಕಂಡುಬರುತ್ತಿವೆ. ಈ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಹೆಣ್ಣು ಭ್ರೂಣ ಹತ್ಯೆ ತಡೆಯಿರಿ, ಹೆಣ್ಣು ಮಕ್ಕಳನ್ನು ರಕ್ಷಿಸಿ ಅಭಿಯಾನಗಳು ದೇಶದಾದ್ಯಂತ ನಡೆಯುತ್ತಿದೆ. ಈ ಸಮಸ್ಯೆಗಳ ನಡುವೆ ಆಶಾಕಿರಣ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್ ವರೆಗೆ ಜನಿಸಿರುವ ಮಕ್ಕಳಲ್ಲಿನ ಲಿಂಗಾನುಪಾತ ಪ್ರಮಾಣ 1016 ಆಗಿ ಸಂತಸ ಮೂಡಿಸಿದೆ. ಆದರೆ ಇದೇ ಅವಧಿಯಲ್ಲಿ ಜಿಲ್ಲೆಯ ಒಟ್ಟು ಲಿಂಗಾನುಪಾತ ಮಾತ್ರ 967 ಆಗಿದೆ. 

ಭಟ್ಕಳ ತಾಲೂಕಿನಲ್ಲಿ ಈ 2023ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 986 ಗಂಡು ಮತ್ತು 1002 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 1016 ಆಗಿದೆ ಅಲ್ಲದೇ ಕಳೆದ 2022 ರ ಏಪ್ರಿಲ್‌ನಿಂದ 2023ರ ಮಾರ್ಚ್ವರೆಗೆ ಒಟ್ಟು 1469 ಗಂಡು ಮತ್ತು 1471 ಹೆಣ್ಣು ಮಕ್ಕಳು ಸೇರಿದಂತೆ 2940 ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 1001 ಆಗಿದೆ.

ಜಿಲ್ಲೆಯಲ್ಲಿ ಭಟ್ಕಳದ ನಂತರ ಯಲ್ಲಾಪುರ ತಾಲೂಕುನಲ್ಲಿ ಲಿಂಗಾನುಪಾತದ ಪ್ರಮಾಣ 1000 ಇದ್ದು, ಪ್ರಸಕ್ತ ಸಾಲಿನಲ್ಲಿ ಡಿಸೆಂಬರ್‌ವರೆಗೆ 197 ಹೆಣ್ಣು ಮತ್ತು ಗಂಡು ಮಕ್ಕಳು ಜನಿಸಿದ್ದಾರೆ. ಕುಮಟಾ ತಾಲೂಕು 3ನೇ ಸ್ಥಾನದಲ್ಲಿದ್ದು 955 ಗಂಡು ಮತ್ತು 952 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 997. ಜಿಲ್ಲೆಯಲ್ಲಿ ಅತೀ ಕಡಿಮೆ ಲಿಂಗಾನುಪಾತದ ಪ್ರಮಾಣ ಕಾರವಾರ ಮತ್ತು ಮುಂಡಗೋಡನಲ್ಲಿದ್ದು ಅಲ್ಲಿನ ಪ್ರಮಾಣ 869 ಇದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 2018-19 ರಿಂದ ಅಂಕಿ ಅಂಶಗಳನ್ನು ಪರಿಶೀಲಿಸಿದ್ದಲ್ಲಿ ಈ ಅವಧಿಯಲ್ಲಿ ಜನಿಸಿರುವ ಮಕ್ಕಳ ಲಿಂಗಾನುಪಾತದ ಪ್ರಮಾಣದಲ್ಲಿ ಏರಿಳಿತ ಕಂಡು ಬರುತ್ತದೆ. 2018-19ರಲ್ಲಿ ಜಿಲ್ಲೆಯಲ್ಲಿ 10,261 ಗಂಡು ಮತ್ತು 9,956 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 970, 2019-20 ರಲ್ಲಿ 10,071 ಗಂಡು ಮತ್ತು 9,714 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 965, 2020-21 ರಲ್ಲಿ 9,185 ಗಂಡು ಮತ್ತು 8,731 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 951, 2021-22 ರಲ್ಲಿ 9,109 ಗಂಡು ಮತ್ತು 8,650 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 950, 2022-23 ರಲ್ಲಿ 9,713 ಗಂಡು ಮತ್ತು 9,233 ಹೆಣ್ಣು ಮಕ್ಕಳು ಜನಿಸಿದ್ದು ಲಿಂಗಾನುಪಾತದ ಪ್ರಮಾಣ 951 ರಲ್ಲಿದೆ. ಆದರೆ ಭಟ್ಕಳ ತಾಲೂಕಿನಲ್ಲಿ ಈ ಪ್ರಮಾಣ ಅಧಿಕಗೊಂಡಿದ್ದು, 2018-19ರಲ್ಲಿ 938 ಇದ್ದದ್ದು, 2022-23 ರಲ್ಲಿ 1001 ಆಗುವ ಮೂಲಕ ಗಮನಾರ್ಹ ಏರಿಕೆ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗಿನ ಜಿಲ್ಲೆಯ ಲಿಂಗಾನುಪಾತದ ಪ್ರಮಾಣ 967 ಆಗಿದ್ದು ಆಶಾದಾಯಕವಾಗಿದೆ.

ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡಿರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ರೂಪಿಸಿದ್ದು, ಹೆಣ್ಣು ಮಕ್ಕಳನ್ನು ಹೆತ್ತವರನ್ನು ಮತ್ತು ವಿಶೇಷ ಸಾಧನೆ ಮಾಡಿದ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮಗಳು, ಹೆಣ್ಣು ಮಗು ಜನಿಸಿದ ಪೋಷಕರನ್ನು ಆಸ್ಪತ್ರೆಯಲ್ಲಿಯೇ ಅಭಿನಂದಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೇ ಹೆಣ್ಣು ಭ್ರೂಣ ಹತ್ಯೆ ತಡೆಯುವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದನ್ನು ತಡೆಯುವ ಬಗ್ಗೆ ಮತ್ತು ಈ ಕುರಿತ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಾಗೂ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿರುವ 71 ಸ್ಕಾöನಿಂಗ್ ಸೆಂಟರ್ ಗಳಲ್ಲಿ ಅಕ್ರಮವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಡೆಯುವ ಕುರಿತಂತೆ ನಿರಂತರ ನಿಗಾ ಇರಿಸಿರುವ ಜೊತೆಗೆ, ಅವುಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಪ್ರಕೃತಿದತ್ತವಾಗಿ ಹಾಗೂ ವೈಜ್ಞಾನಿಕ ಅಂಕಿ ಅಂಶಗಳ ವರದಿಯಂತೆ 
ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿರಬೇಕು. ಆದರೆ ಇದರಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರುತ್ತಿರುವುದನ್ನು ಗಮನಿಸಿದರೆ ಅಕ್ರಮವಾಗಿ ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಿರುವ ಸಂಶಯ ಮೂಡುತ್ತದೆ.ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲೂ ಅಕ್ರಮವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಡೆಯದಂತೆ ವ್ಯಾಪಕವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇದುವರೆಗೆ ಇಂತಹ ಯಾವುದೇ ಪ್ರಕರಣ ಕಂಡು ಬಂದಿರುವುದಿಲ್ಲ. ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸಹ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗರ್ಭೀಣಿ ಸ್ತಿಯರ ಯೋಗಕ್ಷೇಮ ವಿಚಾರಣೆಗೆ ವಿವಿಧ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಗರ್ಭಿಣಿ ತಾಯಿ ಮತ್ತು ನವಜಾತು ಶಿಶುವಿನ ಸುರಕ್ಷತೆಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿನ ಲಿಂಗಾನುಪಾತದ ಪ್ರಮಾಣವನ್ನು ಗಮನಾರ್ಹ ರೀತಿಯಲ್ಲಿ ಸುಧಾರಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಗಂಗೂಬಾಯಿ ಮಾನಕರ ತಿಳಿಸಿದ್ದರು.

Read These Next

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...