ಕಾರವಾರ: ಮೊಬೈಲ್, ಆ್ಯಫ್‍ನಲ್ಲಿ e-EPiC’ ಗುರುತಿನ ಚೀಟಿ ಪಡೆಯಲು ಅವಕಾಶ; ಡಿಸಿ

Source: S.O. News Service | By I.G. Bhatkali | Published on 9th February 2021, 1:57 AM | Coastal News |

ಕಾರವಾರ: ಮತದಾರರ ಪಟ್ಟಿಯಲ್ಲಿ 2020ರ ನವೆಂಬರ್ ನಂತರ ಹೆಸರು ನೋಂದಯಿಸಿದ ಜಿಲ್ಲೆಯ ಯುವ ಮತದಾರರು ಭಾರತ ಚುನವಣಾ ಆಯೋಗ ತಾಂತ್ರಿಕಾಗಿ ಅಭಿವೃದ್ಧಿಗೊಳಿಸಿದ ಮೊಬೈಲ್ ಸಂಖ್ಯೆ ಹಾಗೂ ವೋಟರ್ ಹೆಲ್ಪ್‍ಲೈನ್ ಆ್ಯಫ್ ಮೂಲಕ ‘ಇ-ಎಫಿಕ್’(e-EPIC)  ಗುರುತಿನ ಚೀಟಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ‘ಇ-ಎಫಿಕ್’(e-EPIC)  ಗುರುತಿನ ಚೀಟಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಚುನವಣಾ ಆಯೋಗದ ಸ್ಥಾಪನೆಯ ದಿನ ಹಾಗೂ ರಾಷ್ಟ್ರೀಯ ಮತದಾರರ ದಿನಚರಣೆ ಅಂಗವಾಗಿ ಪ್ರತಿ ವರ್ಷ ಜ. 25ನ್ನು ಒಂದೊಂದು ವಿಶೇಷ ವಿಷಯದಡಿ ಆಚರಿಸಲಗುತ್ತಿದೆ. ಹೀಗಾಗಿ ಈ ಬಾರಿ ‘ಇ-ಎಫಿಕ್’(e-EPIC) ಎಂಬ ವಿಷಯದಡಿ ಮತದಾರರ ಗುರುತಿನ ಚೀಟಿ ವಿತರಿಸಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಪ್ರಸಕ್ತವಾಗಿ ಸಮಾಜದ ಎಲ್ಲ ಸ್ತರಗಳಲ್ಲೂ ಡಿಜಿಟಲೀಕರಣ ಜಾರಿಯಲ್ಲಿದ್ದು, ಯಾವುದೇ ಸಂಸ್ಥೆ ಅಥವಾ ಇಲಾಖೆಗೆ ಸಾರ್ವಜನಿಕರು ಭೇಟಿ ನೀಡಿದರೂ ಅಲ್ಲಿ ಖಾಗದ ರೂಪದ ಗುರುತಿನ ಚೀಟಿಯ ಬದಲಾಗಿ ಆಯೋಗ ತಾಂತ್ರಿಕವಾಗಿ ಜಾರಿಗೊಳಿಸಿರುವ ಡಿಜಿಟಲ್ ರೂಪದ ಮತದಾರರ ಗುರುತಿನ ಚೀಟಿಯ ಪ್ರದರ್ಶಿಸುತ್ತಿದ್ದಾರೆ. ಇದು ಅತ್ಯಂತ ಸರಳ ಹಾಗೂ ಸುಗಮ ವ್ಯವಸ್ಥೆಯಾಗಿದೆ. ಹೀಗಾಗಿ ಈ ಬಾರಿ ಮತದಾರರ ಪಟ್ಟಿಯಲ್ಲಿ 2020ರ ನವೆಂಬರ್ ನಂತರ ಹೆಸರು ನೋಂದಯಿಸಿದ ಜಿಲ್ಲೆಯ ಯುವ ಮತದಾರರು ಮಾತ್ರ ಮೊಬೈಲ್ ಸಂಖ್ಯೆ ಹಾಗೂ ವೋಟರ್ ಹೆಲ್ಪ್‍ಲೈನ್ ಆ್ಯಫ್ ಮೂಲಕ ‘ಇ-ಎಫಿಕ್’(e-EPIC)  ಗುರುತಿನ ಚೀಟಿ ಪಡೆಯಲು ಅರ್ಹರಾಗಿದ್ದಾರೆ ಎಂದರು.

ಈ ‘ಇ-ಎಫಿಕ್’(e-EPIC)  ಗುರುತಿನ ಚೀಟಿಯ ಪಿಡಿಎಫ್ ಕಾಫಿಯನ್ನು ಆನ್‍ಲೈನ್‍ನ http://voterportal.eci.gov.in ನಲ್ಲಿ ಪಡೆಯಬಹುದಗಿದ್ದು, ಇದು ಎಲ್ಲ ಕಡೆಗಳಲ್ಲಿ ಮಾನ್ಯವಾಗಲಿದೆ. ಅದಲ್ಲದೇ ಮತದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಹೆಲ್ಪ್‍ಲೈನ್ ಮೊಬೈಲ್ ಆ್ಯಪ್ ಮೂಲಕವೂ ‘ಇ-ಎಫಿಕ್’(e-ಇPIಅ)  ಗುರುತಿನ ಚೀಟಿ ಪಡೆಯಬಹುದು. ಭಾರತ ಚುನಾವಣಾ ಆಯೋಗ ಈ ಬಾರಿ ಮತದಾರರ ಪಟ್ಟಿಯಲ್ಲಿ 2020ರ ನವೆಂಬರ್ ನಂತರ ಹೆಸರು ನೋಂದಯಿಸಿದ ಜಿಲ್ಲೆಯ ಯುವ ಮತದಾರರು ಮಾತ್ರ ಅವಕಾಶ ನೀಡಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಮತದಾರರಿಗೂ ಅನುಕೂಲ ಮಾಡಿಕೊಡಲಿದೆ. ಈ ಸದಾವಕಾಶವನ್ನು ಯುವ ಮತದಾರರು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Read These Next

ಭಟ್ಕಳ: ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರ ಕಛೇರಿಗಳ ಸಿಬ್ಬಂದಿ ವರ್ಗಾವಣೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಭಟ್ಕಳ: ಹಲವು ವರ್ಷಗಳಿಂದ ತಹಶೀಲ್ದಾರ್ ಕಛೇರಿ ಮತ್ತು ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ...

ಜಾಲಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ: ಅಂಜುಮನ್ ಬಿಎಡ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಕಾಲೇಜ್ ಆಫ್ ಎಜುಕೇಶನ್ (ಬಿಎಡ್) ವಿದ್ಯಾರ್ಥಿಗಳು ಜಾಲಿ ಬೀಚ್‌ನಲ್ಲಿ ಗುರುವಾರ ಬೀಚ್ ಸ್ವಚ್ಛತಾ ಅಭಿಯಾನವನ್ನು ...

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...