ಮುಸ್ಲಿಂ ಸಮುದಾಯದ ಮುಖಂಡ ಡಾ.ಎಸ್.ಎಂ.ಸೈಯದ್ ಖಲೀಲ್ ಅವರ ಜೀವನ ಮತ್ತು ಸೇವೆ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ

Source: S O news | By Staff Correspondent | Published on 27th June 2023, 6:53 PM | Coastal News | Don't Miss |

ಭಟ್ಕಳ: ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡ ಸಿ ಎ ಖಲೀಲ್ ಎಂದೇ ಖ್ಯಾತರಾದ ಡಾ.ಎಸ್.ಎಂ.ಸೈಯದ್ ಖಲೀಲುರ್ರಹ್ಮಾನ್ ಅವರ ಜೀವನ ಮತ್ತು ಸೇವೆಗಳನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರವನ್ನು ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್ (ಬಿಎಂಕೆಸಿ) ಅಧಿಕೃತವಾಗಿ ಬಿಡುಗಡೆ ಮಾಡಿದೆ.

ದುಬೈನಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಡಾ. ಖಲೀಲ್ ಅವರಿಗೆ ಸಾಕ್ಷ್ಯಚಿತ್ರವನ್ನು ಅರ್ಪಿಸಲಾಯಿತು. ಅಲ್ಲಿ ಅವರಿಗೆ ಪ್ರತಿಷ್ಠಿತ ಇಫ್ತೆಖಾರ್-ಎ-ಖೌಮ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಭಟ್ಕಳದಲ್ಲಿ ಸಾರ್ವಜನಿಕರಿಗಾಗಿ ಸೋಮವಾರ ರಾಬಿತಾ ಸೂಸೈಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು.

ಸಾಕ್ಷ್ಯಚಿತ್ರ ಬಿಡುಗಡಿಗೊಳಿಸಿ ಮಾತನಾಡಿದ ರಾಬಿತಾ ಸೂಸೈಟಿ ಪ್ರಧಾನ ಕಾರ್ಯದರ್ಶಿ ಅನಿವಾಸಿ ಉದ್ಯಮಿ ಅತಿಕುರ್ರಹ್ಮಾನ್ ಮುನಿರಿ, ಡಾ.ಸೈಯದ್ ಖಲೀಲುರ್ರಹ್ಮಾನ್ ದೇಶಕ್ಕೆ ಮತ್ತು ಸಮುದಾಯಕ್ಕೆ ನೀಡಿದ ಗಮನಾರ್ಹ ಕೊಡುಗೆಗಳನ್ನು ಶ್ಲಾಘಿಸಿದರು. ಈ ಸ್ಪೂರ್ತಿದಾಯಕ ಸಾಕ್ಷ್ಯಚಿತ್ರ ಡಾ. ಖಲೀಲ್ ಅವರ ಯಶಸ್ವಿ ಜೀವನಗಾಥೆ ಬಿಂಬಿಸುತ್ತದೆ. ಇದರಿಂದ ಯುವ ಸಮುದಾಯ ಪ್ರೇರಣೆ ಪಡೆಯುವಂತಾಗಲಿ ಎಂದರು.

ಖಲೀಲ್ ಸಾಹೇಬ್‌ರ ಜೀವನವು ಹೂವಿನ ಹಾಸಿಗೆಯಲ್ಲ ಅವರು ಈ ಹಂತಕ್ಕೆ ತಲುಪುವ ಮೊದಲು ತುಂಬಾ ಕಷ್ಟಗಳನ್ನು ಅನುಭವಿಸಿದ್ದಾರೆ. ಅವರ  ಬಾಲ್ಯದಲ್ಲಿ ಅನಾಥ ಸ್ಥಿತಿಯಿಂದ ಹಿಡಿದು ಹಂತಹಂತವಾಗಿ ಹೇಗೆ ಉನ್ನತ ಮಟ್ಟಕ್ಕೆ ಏರಿದರು ಎಂಬುದರ ಕುರಿತಂತೆ ಮುನಿರಿ ವಿವರಣೆ ನೀಡಿದರು.

ಸೈಯ್ಯದ್ ಖಲೀಲ್ ರಿಗೆ ಇಫ್ತೆಖಾರ್-ಎ-ಖೌಮ್ ಬಿರುದು: ಡಾ. ಎಸ್ ಎಂ ಸೈಯದ್ ಖಲೀಲುರ್ ರೆಹಮಾನ್ ಅವರಿಗೆ ಆರು ತಿಂಗಳ ಹಿಂದೆ ಡಿಸೆಂಬರ್ ರಂದು ಬಿಎಂಕೆಸಿ ಇಫ್ತಿಕಾರ್ ಇ ಕ್ವಾಮ್ ಬಿರುದನ್ನು ನೀಡಿ ಗೌರವಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ದುಬೈಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರ ಜೀವನ ಮತ್ತು ಸೇವೆಗಳ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು

ಅದೇ ಸಾಕ್ಷ್ಯಚಿತ್ರವನ್ನು ಭಟ್ಕಳದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಮುಂದೆ  ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಭಟ್ಕಳ ಮುಸ್ಲಿಮ್ ಖಲೀಜ್ ಕೌನ್ಸಿಲ್ ನ ಲೆಕ್ಕ ಪರೀಶೋಧಕ ಆಪಾಖ್ ನಾಯ್ತೆ ಮತ್ತು ಅಬ್ದುಸ್ಸಮಿ ಕೋಲಾ ಉಪಸ್ಥಿತರಿದ್ದರು.

Read These Next

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.