ಕಾರವಾರ: ವಿಭಾಗ ಮಟ್ಟದ ಕಾಲೇಜು ನಾಟಕ ಸ್ಪರ್ಧೆ
ಕಾರವಾರ: ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಬೆಳೆಸಿ, ಆ ಮೂಲಕ ರಂಗಭೂಮಿಗೆ ಹೊಸ ಕಲಾವಿದರು, ತಂತ್ರಜ್ಞರು, ನಾಟಕಕಾರರು, ನಾಟಕ ನಿರ್ದೇಶಕರು ಬರಲು ಪ್ರೇರಣೆಯಾಗುವ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗಾಯಣ ಧಾರವಾಡ ಸಂಯುಕ್ತಾಶ್ರಯದಲ್ಲಿ “ವಿಭಾಗ ಮಟ್ಟದ ಕಾಲೇಜು ನಾಟಕ ಸ್ಪರ್ಧೆ”ಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಗಳ ವಿವರ: 5 ದಿನಗಳ ಕಾಲೇಜುನಾಟಕ ಸ್ಪರ್ಧೆಯನ್ನುಆಯೋಜಿಸಲಾಗುವುದು. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಭಾಗವಹಿಸಬಹುದು. ಕಾಲೇಜು ವಿದ್ಯಾರ್ಥಿಗಳು (ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು) ಈ ಉತ್ಸವದಲ್ಲಿ ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ರೂ.50.000, ದ್ವಿತೀಯ ರೂ.30.000, ತೃತೀಯ ರೂ.20,000 ಬಹುಮಾನವನ್ನು ಕರ್ನಾಟಕ ನಾಟಕ ಅಕಾಡೆಮಿಯಿಂದ ಪಾವತಿಸಲಾಗುತ್ತದೆ. 2025ರ ಜನವರಿ ಮಾಹೆಯಲ್ಲಿ ಕಾಲೇಜು ರಂಗೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು. ನಾಟಕ 45 ರಿಂದ 80 ನಿಮಿಷಗಳ ಅವಧಿಯದ್ದಾಗಿರಬೇಕು. ರಂಗದ ಮೇಲೆ ಅಭಿನಯಿಸುವ ಎಲ್ಲಾ ಕಲಾವಿದರು ವಿದ್ಯಾರ್ಥಿಗಳೇ ಆಗಿರಬೇಕು. ನೇಪಥ್ಯದಲ್ಲಿ (ಸಂಗೀತ, ರಂಗಪರಿಕರ, ಮುಂತಾದವು) ವಿದ್ಯಾರ್ಥಿಗಳಲ್ಲದವರೂ ಕಾರ್ಯನಿರ್ವಹಿಸಬಹುದು.
ಕಾಲೇಜು ವಿದ್ಯಾರ್ಥಿಗಳು ನಾಟಕದ ದಿನ ನೊಂದಣಿ ಸಂದರ್ಭದಲ್ಲಿ ತಮ್ಮ ಕಾಲೇಜಿನ ಗುರುತಿನ ಚೀಟಿಗಳನ್ನು ಸಂಘಟಕರಿಗೆ ತೋರಿಸುವುದು ಕಡ್ಡಾಯ. ವಿವಾದಕ್ಕೊಳಗಾಗಿರುವ, ಕೋಮು ಸೌಹಾರ್ದವನ್ನು ಕೆಡಿಸುವ ಯಾವುದೇ ನಾಟಕಗಳಿಗೆ ಅವಕಾಶವಿರುವುದಿಲ್ಲ.
ಆಸಕ್ತ ಕಾಲೇಜು ವಿದ್ಯಾರ್ಥಿಗಳು ಬಿಳಿ ಹಾಳೆಯ ಮೇಲೆ ಸ್ವ-ವಿವರದೊಂದಿಗೆ ಡಿಸೆಂಬರ್ 17 ಸಂಜೆ 5 ಗಂಟೆಯೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ.ಬಸವರಾಜ ಬಯಲು ರಂಗಮAದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಮುದ್ದಾಂ, ಅಂಚೆ ಮೂಲಕ ಅಥವಾ ಇಮೇಲ್ [email protected] ಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2441706 ನ್ನು ಸಂಪರ್ಕಿಸುವAತೆ ರಂಗಾಯಣ ಧಾರವಾಡ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.